ಅಶೋಕನಗರ, ಕಬ್ಬನ್ ಪಾರ್ಕ್ ಠಾಣೆ​ ಪೊಲೀಸರ ಭರ್ಜರಿ ಕಾರ್ಯಾಚರಣೆ

| Updated By: Rakesh Nayak Manchi

Updated on: Oct 30, 2022 | 2:46 PM

ಬೆಂಗಳೂರು ನಗರದ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 11ಮಂದಿ ಆರೋಪಿಗಳ ಸಹಿತ 1ಕೋಟಿಗೂ ಅಧಿಕ ಮೌಲದ ಮಾದಕ ವಸ್ತುಗಳನ್ನು ಮತ್ತು ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಅಶೋಕನಗರ, ಕಬ್ಬನ್ ಪಾರ್ಕ್ ಠಾಣೆ​ ಪೊಲೀಸರ ಭರ್ಜರಿ ಕಾರ್ಯಾಚರಣೆ
ಡ್ರಗ್ಸ್​ ಮಾರಾಟ ಮಾಡುತ್ತಿದ್ದ 11 ಮಂದಿಯನ್ನು ಬಂಧಿಸಿದ ಬೆಂಗಳೂರು ಪೊಲೀಸರು
Follow us on

ಬೆಂಗಳೂರು: ನಗರದಲ್ಲಿ ಮಾದಕವಸ್ತು ಮಾರಾಟ, ಖರೀದಿ ವಿರುದ್ಧ ಸಮರ ಸಾರಿರುವ ಪೊಲೀಸರು ಕಾರ್ಯಾಚರಣೆ ನಡೆಸುತ್ತಲೇ ಇದ್ದಾರೆ. ಇದೀಗ ಅಶೋಕನಗರ ಮತ್ತು ಕಬ್ಬನ್ ಪಾರ್ಕ್ ಠಾಣೆ​ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಸುಡಾನ್​, ಯೆಮನ್​, ನೈಜೀರಿಯಾ, ಕೇರಳ ಮೂಲದ 11 ಆರೋಪಿಗಳ ಸಹಿತ 1ಕೋಟಿಗೂ ಅಧಿಕ ಮೌಲ್ಯದ ಮಾದಕವಸ್ತು, ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮೊಹ್ಮದ್ ಹರೂನ್​, ಮೊಹ್ಮದ್ ಒರುವಿಲ್, ಇಲಿಯಾಸ್, ಅಬ್ದುರ್ ಅಬು, ಮೊಹ್ಮದ್ ಮೂಸಾ, ಬಿಲಾಲ್​, ಜಾನ್ ಪೌಲ್, ಜೋಸೆಫ್​ ಬೆಂಜಮಿನ್, ಇಸ್ಮಾಯಿಲ್ ಸೇರಿ 11 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ವೀಸಾ ಅವಧಿ ಮುಗಿದಿದ್ದರೂ ನಕಲಿ ದಾಖಲೆ ಸೃಷ್ಟಿಸಿ ನಗರದಲ್ಲಿ ವಾಸವಿದ್ದರು ಎಂದು ತಿಳಿದುಬಂದಿದೆ.

ವಿವಿಧ ಕಾರಣಗಳಿಗಾಗಿ ವೀಸಾ ಪಡೆದು ಭಾರಕ್ಕೆ ಬಂದಿದ್ದ ವ್ಯಕ್ತಿಗಳು ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದರು. ಈ ವಿಚಾರ ತಿಳಿದ ಬೆಂಗಳೂರು ಕೇಂದ್ರ ವಿಭಾಗದ ಅಶೋಕನಗರ, ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅದರಂತೆ ಒಟ್ಟು 11 ಮಂದಿಯನ್ನು ಬಂಧಿಸಿದ ಪೊಲೀಸರು, ಒಟ್ಟು 1ಕೋಟಿಯ 9ಲಕ್ಷ ಮೌಲ್ಯದ ಮಾದಕ ವಸ್ತು ಗಾಂಜಾ, ಎಂಡಿಎಂಎ, 2 ಕಾರುಗಳು, ಮೊಬೈಲ್ ಫೋನ್​ಗಳು ಮತ್ತು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ.

ಮರ ಬಿದ್ದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

ನೆಲಮಂಗಲ: ಮರ ಬಿದ್ದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಇದೀಗ ಸಾವನ್ನಪ್ಪಿದ್ದಾರೆ. ಅ.12 ರಂದು ಬೈಕ್ ಮೂಲಕ ಬರುತ್ತಿದ್ದ ಬೆಂಗಳೂರು ಉತ್ತರ ತಾಲೂಕಿನ ದೊಡ್ಡಕುಕ್ಕನಹಳ್ಳಿ ನಿವಾಸಿ ನರಸಿಂಹ ಮೂರ್ತಿ (55) ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹೇಸರಘಟ್ಟದ ದೇವೇಗೌಡನಗರದ ಬಳಿ ಬರುತ್ತಿದ್ದಾಗ ಹಳೇ ಆಲದಮರ ಬಿದ್ದಿದೆ. ಘಟನೆಯಲ್ಲಿ ನರಸಿಂಹ ಮೂರ್ತಿಯವರ ತಲೆ, ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗ ಅವರು ಚಿಕಿತ್ಸೆ ಫಲಿಸದೆ ತಡರಾತ್ರಿ ಮೃತಪಟ್ಟಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:46 pm, Sun, 30 October 22