ಬೆಂಗಳೂರು: ಹಣದ ವಿಷಯಕ್ಕೆ ಯುವಕನಿಗೆ (Youth) ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ (Murder) ಪ್ರಕರಣ ನಡೆದಿದೆ. ಆದರೆ ಇದು ಕೊಲೆ ನಡೆದು 6 ತಿಂಗಳು ನಂತರ ಬೆಳಕಿಗೆ ಬಂದಿದೆ. ಭೀಕರವಾಗಿ ಕೊಲೆಯಾದ ಶರತ್ ಸಾಲ ಪಡೆದು (Loan) ಹಿಂತಿರುಗಿಸದೆ ಓಡಾಡುತ್ತಿದ್ದನಂತೆ. ಇದರಿಂದ ಶರತ್ ನನ್ನು 6 ತಿಂಗಳ ಹಿಂದೆ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಅಪಹರಿಸಿದ್ದ ಶರತ್ ನನ್ನು ಚಿಕ್ಕಬಳ್ಳಾಪುರಕ್ಕೆ (Chikkaballapur) ಕರೆದುಕೊಂಡು ಹೋಗಿ ಆರೋಪಿಗಳು ಚಿತ್ರಹಿಂಸೆ ಕೊಟ್ಟಿದ್ದರಂತೆ. ಶರತ್ ನನ್ನು ಅರೆ ನಗ್ನಗೊಳಿಸಿ ಕಟ್ಟಿಹಾಕಿ ಥಳಿಸಿದ್ದರಂತೆ.
ನಂತ್ರ ಶರತ್ ನನ್ನ ಕೊಲೆ ಮಾಡಿ ಚಾರ್ಮಾಡಿ ಘಾಟ್ ನಲ್ಲಿ ಎಸೆದು ಯಾರಿಗೂ ಶವದ ಸುಳಿವು ಸಿಗದಂತೆ ಮಾಡಿದ್ದರು ಆರೋಪಿಗಳು. ಎಷ್ಟರಮಟ್ಟಿಗೆ ಪ್ರಕರಣ ನಿಗೂಢವಾಗಿತ್ತೆಂದರೆ ಕೊಲೆಯಾಗಿ ಆರು ತಿಂಗಳು ಕಳೆದರೂ ಯಾರಿಗೂ ಗೊತ್ತಿರಲಿಲ್ಲ. ಆದರೆ ಕೊಲೆಯಾದ ಶರತ್ ವಿಷಯದಲ್ಲಿ ಯಾರಿಗೂ ಅನುಮಾನ ಬರದಂತೆ ಏನ್ ಮಾಡಿದ್ರು ಗೊತ್ತಾ?
ಕೊಲೆಯಾದವನ ಮೊಬೈಲಿನಿಂದ ಪೋಷಕರಿಗೆ ಹೀಗೊಂದು ನಿರ್ದಿಷ್ಟ ಸಂದೇಶ ಬಂದಿತ್ತಂತೆ – ನಾನು ದುಡಿಯಲು ಹೋಗುತ್ತಿದ್ದೇನೆ. ಹುಡುಕಬೇಡಿ ಎಂದು ನಿಖರ ಸಂದೇಶ ಬಂದಿತ್ತು. ಮೃತ ಶರತ್ ನ ಮೊಬೈಲಿಂದ ಮೆಸೇಜ್ ಹಾಕಿ, ಆ ಮೊಬೈಲ್ ಅನ್ನು ಲಾರಿಯೊಂದರ ಮೇಲೆ ಎಸೆದಿತ್ತು ಹಂತಕ ಪಡೆ. ಲಾರಿ ಮೈಸೂರು ಮಾರ್ಗವಾಗಿ ಸಾಗಿ ಹೊರ ರಾಜ್ಯಕ್ಕೆ ಹೊರಟುಹೋಗಿತ್ತು. ಕಾಲಾಂತರದಲ್ಲಿ ಮೊಬೈಲ್ ಸ್ವಿಚ್ ಆಫ್ ಆದ ಮೇಲೆ ಅದು ಸಂಪರ್ಕವೇ ಸಿಕ್ಕಿಲ್ಲ.
ತನ್ನ ಮಗ ದುಡಿಮೆಗಾಗಿ ಹೊರರಾಜ್ಯದಲ್ಲಿದ್ದಾನೆ ಎಂದೇ ನಂಬಿದ್ದರು ಶರತ್ ನ ಪೋಷಕರು. ಖತರ್ನಾಕ್ ಐಡಿಯಾ ಮೂಲಕ ಕೇಸ್ ಕ್ಲೋಸ್ ಮಾಡಿತ್ತು ಹಂತಕ ಗ್ಯಾಂಗ್!
ಇದನ್ನೂ ಓದಿ:
ಆದರೆ ಇದೇ ಹಂತಕ ಪಡೆ ಶರತ್ ನನ್ನು ಪ್ರಾಣಿಗಳಿಗಿಂತ ಕಡೆಯಾಗಿ ಮರ್ಡರ್ ಮಾಡಿರ್ತಾರೆ. ಕೈ ಕಾಲು ಕಟ್ಟಿ ಮನಸೋ ಇಚ್ಛೆ ಥಳಿಸಿ ಚಿತ್ರಹಿಂಸೆ ಕೊಟ್ಟಿರ್ತಾರೆ. ಕೈ ಕಾಲು ಕಟ್ಟಿದ ವ್ಯಕ್ತಿಯನ್ನ ಮರದ ತುಂಡಿನ ಕೆಳಗೆ ನೇತು ಹಾಕಿ ಕ್ರೂರತ್ವ ಮೆರೆದಿರುತ್ತಾರೆ. ಈ ರೀತಿ ಚಿತ್ರಹಿಂಸೆಗೊಳಗಾಗಿದ್ದ ಶರತ್.
ಇಷ್ಟಕ್ಕೂ ಯಾರು ಈ ಶರತ್ ಅಂದ್ರೆ… ಈತ ಬೆಂಗಳೂರಿನ ಕೋಣನಕುಂಟೆ ನಿವಾಸಿ. ಕೊಲೆ ಮಾಡಿದ್ದ ಅರೋಪಿ ಹಾಗೂ ಕೊಲೆಗೀಡಾಗಿದ್ದ ಯುವಕ ಇಬ್ಬರ ಹೆಸರುಗಳೂ ಶರತ್ ಅಂತಲೇ ಇರುತ್ತದೆ! ಇನ್ನು ಕೊಲೆ ಆರೋಪಿ ಶರತ್ ಚಿಕ್ಕಬಳ್ಳಾಪುರ ಮೂಲದವ. ಆರಂಭದಲ್ಲಿ ಈ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ನಕಾರ ಸೂಚಿಸುತ್ತಾರೆ.
ಹಾಗಾಗಿ ಕಬ್ಬನ್ ಪಾರ್ಕ್ ಪೊಲೀಸರು ಕೊಲೆಯಾದ ವಿಷಯ ತಿಳಿಯುತ್ತಿದಂತೆ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುತ್ತಾರೆ.
ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಕಬ್ಬನ್ ಪಾರ್ಕ್ ಪೊಲೀಸರು ಶರತ್, ಮಂಜುನಾಥ್, ಶ್ರೀಧರ್, ವೆಂಕಟಾಚಲಪತಿ ಮತ್ತು ಧನುಷ್ ಎಂಬ ಅರೋಪಿಗಳನ್ನು ಬಂಧಿಸುತ್ತಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Tue, 27 December 22