Karwar News: ಮಹಿಳೆಯ ಫೋಟೋ ಎಡಿಟ್​ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸುತ್ತಿದ್ದ ವಿಕೃತ ಮನಸ್ಥಿತಿಯ ಹ್ಯಾಕರ್​ ಬಂಧನ

ಮಹಿಳೆಯ ಖಾಸಗಿ ಫೋಟೋ ಎಡಿಟ್ ಮಾಡಿ ಅವರ ಮೊಬೈಲ್‌ನಿಂದಲೇ ಅವರ ಸ್ನೇಹಿತರಿಗೆ ಪೋಟೋ ಕಳುಹಿಸುತ್ತಿದ್ದ ಆರೋಪಿಯನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.

Karwar News: ಮಹಿಳೆಯ ಫೋಟೋ ಎಡಿಟ್​ ಮಾಡಿ ಆಕೆಯ ಸ್ನೇಹಿತರಿಗೆ ಕಳುಹಿಸುತ್ತಿದ್ದ ವಿಕೃತ ಮನಸ್ಥಿತಿಯ ಹ್ಯಾಕರ್​ ಬಂಧನ
ಆರೋಪಿ ಇಮಾದ್ ಮುಲ್ಲಾನ
Follow us
TV9 Web
| Updated By: Digi Tech Desk

Updated on:Dec 27, 2022 | 5:30 PM

ಕಾರವಾರ: ಸುಪಾರಿ ಪಡೆದು ವಿವಾಹಿತ ಮಹಿಳೆಯ (Woman) ಖಾಸಗಿ ಫೋಟೋ (Privet Photo) ಎಡಿಟ್ ಮಾಡಿ ಅವರ ಮೊಬೈಲ್‌ನಿಂದಲೇ ಅವರ ಸಂಬಂಧಿಕರಿಗೆ, ಸ್ನೇಹಿತರಿಗೆ ಪೋಟೋ ಕಳುಹಿಸಿ ವಿಕೃತಿ ಮೆರೆಯುತ್ತಿದ್ದ ಖತರ್ನಾಕ್ ಹ್ಯಾಕರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು ವಿವಾಹಿತ ಮಹಿಳೆಯೊಬ್ಬಳ ಖಾಸಗಿ ಫೋಟೋವನ್ನು ಎಡಿಟ್ ಮಾಡಿ, ಆಕೆಯ ಮೊಬೈಲ್‌ನಿಂದಲೇ ಆಕೆಯ ಸ್ನೇಹತರಿಗೆ ಕಳುಹಸಿ, ಮಹಿಳೆಯ ತೋಜೋವಧೆಗೆ ಕಾರಣವಾಗಿದ್ದ ಹೊನ್ನಾವರ (Honnavar) ತಾಲೂಕಿನ ಹ್ಯಾಕರ್​ ಅನ್ನು ಹರಿಯಾಣ ಪೊಲೀಸರು ಕಾರ್ಯಾಚರಣೆ ನಡೆಸಿ, ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಚಂದಾವರದ ಸೈಬರ್ ಗೈಡ್ ಇಮಾದ್ ಮುಲ್ಲಾ ಬಂಧಿತ ಆರೋಪಿ.

ಏನಿದು ಪ್ರಕರಣ..?

ವೈಯಕ್ತಿಕ ದ್ವೇಷದಿಂದ, ಅಮೆರಿಕ ಮೂಲದ ಮಹಿಳೆಯೋರ್ವಳು, ಹರಿಯಾಣದ ಗುರುಗ್ರಾಮ ಮೂಲದ ವಿಹಾತ ಮಹಿಳೆಯ ಚಾರಿತ್ರ್ಯ ಹಾಳು ಮಾಡಲು ಹ್ಯಾಕರ್‌ನನ್ನು ಹುಡುಕುತ್ತಿದ್ದಳು. ಈ ಸಮಯದಲ್ಲಿ ಅಪ್ ವಕ್೯ ಡಾಟ್ ಕಾಮ್ ವೆಬ್‌ಸೈಟ್ ಮೂಲಕ ಇಮಾದ್ ಮುಲ್ಲಾನನ್ನು ಸಂಪರ್ಕ ಮಾಡಿದ್ದಾಳೆ. ಈ ವೇಳೆ ತಾನು ತೋರುಸಿದ ಮಹಿಳೆಯ ಅಶ್ಲೀಲ ಪೋಟೋ ಮತ್ತು ವಿಡಿಯೋಗಳನ್ನು ಎಡಿಟ್ ಮಾಡಿ ಅವಳ ಮೊಬೈಲ್ ನಂಬರ್‌ನಿಂದಲೇ ಅವರ ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ ಕಳುಹಿಸಿ ಅವಳ ಮಾನ ಹಾನಿ ಮಾಡಬೇಕು ಇದಕ್ಕೆ ಹಣ ನೀಡುವುದಾಗಿ ಹೇಳಿದ್ದಳಂತೆ.

ಇದನ್ನೂ ಓದಿ: ಹಣದ ವಿಷಯಕ್ಕೆ ಬೆಂಗಳೂರು ಯುವಕನಿಗೆ ಚಿತ್ರಹಿಂಸೆ ನೀಡಿ ಕೊಲೆ, 6 ತಿಂಗಳ ನಂತರ ಪ್ರಕರಣ ಬೆಳಕಿಗೆ!

ಇದಕ್ಕೆ ಒಪ್ಪಿಗೆ ನೀಡಿದ ಈ ಹ್ಯಾಕರ್ ಹರಿಯಾಣ ಮೂಲದ ಮಹಿಳೆಯ ಅಶ್ಲೀಲ್ ಪೋಟೋ ಮತ್ತು ವಿಡಿಯೋಗಳನ್ನು ಎಡಿಟ್ ಮಾಡಿ ಅವಳ ನಂಬರ್‌ನಿಂದಲೇ, ಆಕೆಯ ಸ್ನೇಹಿತರಿಗೆ ಕಳುಹಿಸಿದ್ದಾನೆ. ಇದರಿಂದ ನೊಂದಿದ್ದ ಸಂತ್ರಸ್ತೆ. ಹರಿಯಾಣದಲ್ಲಿ ಪ್ರಕರಣವನ್ನ ದಾಖಲಿದ್ದಳು.

ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಹರಿಯಾಣ ಪೊಲೀಸರು ಅಮೆರಿಕ ಮೂಲಕದ ಮಹಿಳೆಯನ್ನ ಪತ್ತೆ ಹಚ್ವಿದ್ದಾರೆ. ನಂತರದಲ್ಲಿ ಈ ಖತರ್ನಾಕ ಹ್ಯಾಕರ್ ಸುಳಿವು ಸಿಗುತ್ತಿದ್ದಂತೆ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿ ಹೊನ್ನಾವರ ಪೊಲೀಸರ ಸಹಾಯದಿಂದ ಇತನನ್ನು ಬಂಧಿಸಿದ್ದಾರೆ.

ಆರೋಪಿ ಹ್ಯಾಕರ್ ಇಮಾದ್ ಮುಲ್ಲಾನ ಬ್ಯಾಗ್ರೌಂಡ್​

ಇನ್ನು ಈತ ಎಥಿಕಲ್ ಹ್ಯಾಕರ್ ಆಗಿದ್ದ ಎನ್ನಲಾಗಿದ್ದು, ಬೆಂಗಳೂರಿನ ಖಾಸಗಿ ಕಂಪನಿ ಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು. ವರ್ಕ್ ಪಾರ್ ಹೋಮ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಆದರೆ ಹೆಚ್ಚಿನ ಸಮಯವನ್ನು ಚಂದಾವರದಲ್ಲೇ ಕುಳಿತು ಆನ್‌ಲೈನ್ ನಿಯಂತ್ರಣ ಮಾಡುತ್ತಿದ್ದ. ಆನ್‌ಲೈನ್ ಮೂಲಕ ಈತ ಏನು ಬೇಕಾದರೂ ಹ್ಯಾಕ್ ಮಾಡುವ ಕಲೆಯನ್ನು ಕರಗತಗೊಳಿಸಿಕೊಂಡಿದ್ದ ಎನ್ನಲಾಗಿದೆ. ಇದೆ ನೈಪುಣ್ಯತೆಯನ್ನು ಬಳಸಿಕೊಂಡು ಬೇರೊಬ್ಬರ ಮಾನವನ್ನು ತೆಗೆಯಲು ಸುಫಾರಿ ಪಡೆಯುತ್ತಿದ್ದನು.

ಈತನಿಗೆ ಯಾರಾದದರೂ ಫೋನ್ ನಂಬರ್ ನೀಡಿದರೆ ಸಾಕು ಅವರ ಜಾತಕವನ್ನೇ ತೆಗೆದಿಡುತ್ತಿದ್ದನಂತೆ. ಅವರು ಯಾರ ಜೊತೆಗೆ ಮಾತನಾಡಿದ್ದಾರೆ. ಯಾರೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರ ಕಾಲ್ ಹಿಸ್ಟಿರಿ ಎಲ್ಲವನ್ನೂ ತೆಗೆದಿಡುತ್ತಿದ್ದನಂತೆ. ಅಲ್ಲದೆ, ಫೋಟೋ ನೀಡಿದರೆ, ಅವರ ಮುಖವನ್ನು ಬೆತ್ತಲು ದೇಹಕ್ಕೆ ಜೋಡಿಸುತ್ತಿದ್ದ ಎಂಬ ಆರೋಪವೂ ಇದೆ. ಅಲ್ಲದೆ, ಅವರ ಮೊಬೈಲ್ ನಂಬರ್‌ ನಿಂದಲೇ ಸ್ನೇಹತರೆಲ್ಲರಿಗೂ ಹ್ಯಾಕ್ ಮಾಡಿ ಫೋಟೋ, ವಿಡಿಯೋವನ್ನು ಶೇರ್ ಮಾಡುತ್ತಿದ್ದನಂತೆ.

ಇದನ್ನೂ ಓದಿ: ಅಬ್ದುಲ್ ಜಲೀಲ್ ಹತ್ಯೆಗೆ ಹಿಂದೂ ಮಹಿಳೆ ಜೊತೆಗಿನ ಅನೈತಿಕ ಸಂಬಂಧವೇ ಕಾರಣವಾಯ್ತಾ?

ಬೇರೆಯವರ ಮಾನ ಹರಾಜು ಮಾಡಲು ಈತನು ಗಂಟೆಗೆ 50 ಸಾವಿರ ರು. ಪಡೆಯುತ್ತಿದ್ದ ಎನ್ನಲಾಗಿದೆ. ಈತನ ಬಳಿ 28 ಲಕ್ಷದ ಬಿ.ಎಂ. ಡಬ್ಲ್ಯು ಕಾರು, 24 ಲಕ್ಷದ ಬಿ.ಎಂ.ಡಬ್ಲ್ಯು ಬೈಕ್, ಇನ್ನೂ ಕೆಲವು ಬೈಕ್ ಗಳು ಇವೆ. ಸಣ್ಣದಾದ ಕಂಪನಿಯೊಂದರಲ್ಲಿ ಕೆಲಸದಲ್ಲಿರುವ ಈತ ಐಶಾರಾಮಿ ಜೀವನವನ್ನು ಸಾಗಿಸುತ್ತಿರುವುದು ಎಲ್ಲರ ಗಮನಕ್ಕೆ ಬಂದಿತ್ತು. ಆದರೆ ಈತ ಸೈಬರ್ ಕ್ರೈಮ್‌ನಲ್ಲಿ ತೊಡಗಿಸಿಕೊಂಡಿರುವುದು ಸ್ಥಳೀಯರಿಗೆ ತಿಳಿದಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಹರಿಯಾಣದ ಶ್ರೀಮಂತ ಮಹಿಳೆಯೋರ್ವಳ ನಗ್ನ ಚಿತ್ರವನ್ನು ಅವರ ಕಾಲ್ ಹಿಸ್ಟರಿಯಲ್ಲಿರುವ ಎಲ್ಲರಿಗೂ ಕಳುಹಿಸಿ ಆಗಾಗ ಮಾನ ಹಾನಿ ಮಾಡುತ್ತಿದ್ದನು. ಈ ಕುರಿತು ಹರಿಯಾಣದಲ್ಲಿ ಸೈಬರ್ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಹರಿಯಾಣ ಪೋಲಿಸರು, ಹೊನ್ನಾವರದ ಪೋಲಿಸರ ಸಹಾಯ ಪಡೆದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:46 pm, Tue, 27 December 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ