ಹಣದ ವಿಷಯಕ್ಕೆ ಬೆಂಗಳೂರು ಯುವಕನಿಗೆ ಚಿತ್ರಹಿಂಸೆ ನೀಡಿ ಕೊಲೆ, 6 ತಿಂಗಳ ನಂತರ ಪ್ರಕರಣ ಬೆಳಕಿಗೆ! ಪ್ರಕರಣ ಗುಪ್ತವಾಗಿಟ್ಟಿದ್ದು ಹೇಗೆ ಗೊತ್ತಾ?

ತಮ್ಮ ಮಗ ದುಡಿಮೆಗಾಗಿ ಹೊರರಾಜ್ಯದಲ್ಲಿದ್ದಾನೆ ಎಂದೇ ನಂಬಿದ್ದರು ಶರತ್ ನ ಪೋಷಕರು. ಖತರ್ನಾಕ್ ಐಡಿಯಾ ಮೂಲಕ ಕೇಸ್ ಕ್ಲೋಸ್ ಮಾಡಿತ್ತು ಹಂತಕ ಗ್ಯಾಂಗ್!

ಹಣದ ವಿಷಯಕ್ಕೆ ಬೆಂಗಳೂರು ಯುವಕನಿಗೆ ಚಿತ್ರಹಿಂಸೆ ನೀಡಿ ಕೊಲೆ, 6 ತಿಂಗಳ ನಂತರ ಪ್ರಕರಣ ಬೆಳಕಿಗೆ! ಪ್ರಕರಣ ಗುಪ್ತವಾಗಿಟ್ಟಿದ್ದು ಹೇಗೆ ಗೊತ್ತಾ?
ಹಣದ ವಿಷಯಕ್ಕೆ ಯುವಕನಿಗೆ ಚಿತ್ರಹಿಂಸೆ ಕೊಟ್ಟು ಕೊಲೆ
Follow us
TV9 Web
| Updated By: Digi Tech Desk

Updated on:Dec 27, 2022 | 5:29 PM

ಬೆಂಗಳೂರು: ಹಣದ ವಿಷಯಕ್ಕೆ ಯುವಕನಿಗೆ (Youth) ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿರುವ (Murder) ಪ್ರಕರಣ ನಡೆದಿದೆ. ಆದರೆ ಇದು ಕೊಲೆ ನಡೆದು 6 ತಿಂಗಳು ನಂತರ ಬೆಳಕಿಗೆ ಬಂದಿದೆ. ಭೀಕರವಾಗಿ ಕೊಲೆಯಾದ ಶರತ್ ಸಾಲ ಪಡೆದು (Loan) ಹಿಂತಿರುಗಿಸದೆ ಓಡಾಡುತ್ತಿದ್ದನಂತೆ. ಇದರಿಂದ ಶರತ್ ನನ್ನು 6 ತಿಂಗಳ ಹಿಂದೆ ಆರೋಪಿಗಳು ಕಿಡ್ನಾಪ್ ಮಾಡಿದ್ದರು. ಅಪಹರಿಸಿದ್ದ ಶರತ್ ನನ್ನು ಚಿಕ್ಕಬಳ್ಳಾಪುರಕ್ಕೆ (Chikkaballapur) ಕರೆದುಕೊಂಡು ಹೋಗಿ ಆರೋಪಿಗಳು ಚಿತ್ರಹಿಂಸೆ ಕೊಟ್ಟಿದ್ದರಂತೆ. ಶರತ್ ನನ್ನು ಅರೆ ನಗ್ನಗೊಳಿಸಿ ಕಟ್ಟಿಹಾಕಿ ಥಳಿಸಿದ್ದರಂತೆ.

ನಂತ್ರ ಶರತ್ ನನ್ನ ಕೊಲೆ ಮಾಡಿ ಚಾರ್ಮಾಡಿ ಘಾಟ್ ನಲ್ಲಿ ಎಸೆದು ಯಾರಿಗೂ ಶವದ ಸುಳಿವು ಸಿಗದಂತೆ ಮಾಡಿದ್ದರು ಆರೋಪಿಗಳು. ಎಷ್ಟರಮಟ್ಟಿಗೆ ಪ್ರಕರಣ ನಿಗೂಢವಾಗಿತ್ತೆಂದರೆ ಕೊಲೆಯಾಗಿ ಆರು ತಿಂಗಳು ಕಳೆದರೂ ಯಾರಿಗೂ ಗೊತ್ತಿರಲಿಲ್ಲ. ಆದರೆ ಕೊಲೆಯಾದ ಶರತ್ ವಿಷಯದಲ್ಲಿ ಯಾರಿಗೂ ಅನುಮಾನ ಬರದಂತೆ ಏನ್ ಮಾಡಿದ್ರು ಗೊತ್ತಾ?

ಪೋಷಕರಿಗೆ ಬಂದಿತ್ತು ಹೀಗೊಂದು ನಿರ್ದಿಷ್ಟ ಸಂದೇಶ:

ಕೊಲೆಯಾದವನ ಮೊಬೈಲಿನಿಂದ ಪೋಷಕರಿಗೆ ಹೀಗೊಂದು ನಿರ್ದಿಷ್ಟ ಸಂದೇಶ ಬಂದಿತ್ತಂತೆ – ನಾನು ದುಡಿಯಲು ಹೋಗುತ್ತಿದ್ದೇನೆ. ಹುಡುಕಬೇಡಿ ಎಂದು ನಿಖರ ಸಂದೇಶ ಬಂದಿತ್ತು. ಮೃತ ಶರತ್ ನ ಮೊಬೈಲಿಂದ ಮೆಸೇಜ್ ಹಾಕಿ, ಆ ಮೊಬೈಲ್ ಅನ್ನು ಲಾರಿಯೊಂದರ ಮೇಲೆ ಎಸೆದಿತ್ತು ಹಂತಕ ಪಡೆ. ಲಾರಿ ಮೈಸೂರು ಮಾರ್ಗವಾಗಿ ಸಾಗಿ ಹೊರ ರಾಜ್ಯಕ್ಕೆ ಹೊರಟುಹೋಗಿತ್ತು. ಕಾಲಾಂತರದಲ್ಲಿ ಮೊಬೈಲ್ ಸ್ವಿಚ್ ಆಫ್ ಆದ ಮೇಲೆ ಅದು ಸಂಪರ್ಕವೇ ಸಿಕ್ಕಿಲ್ಲ.

ತನ್ನ ಮಗ ದುಡಿಮೆಗಾಗಿ ಹೊರರಾಜ್ಯದಲ್ಲಿದ್ದಾನೆ ಎಂದೇ ನಂಬಿದ್ದರು ಶರತ್ ನ ಪೋಷಕರು. ಖತರ್ನಾಕ್ ಐಡಿಯಾ ಮೂಲಕ ಕೇಸ್ ಕ್ಲೋಸ್ ಮಾಡಿತ್ತು ಹಂತಕ ಗ್ಯಾಂಗ್!

ಇದನ್ನೂ ಓದಿ:

RTI activist: ಆತ ಗ್ರಾಮದ ಅವ್ಯವಹಾರಗಳನ್ನ ಪ್ರಶ್ನೆ ಮಾಡಿದ್ದ, ಸಂಬಂಧಿ ಎಂಬುದನ್ನೂ ನೋಡದೆ ಹತ್ಯೆ ಮಾಡಿದರು -ಪೊಲೀಸರು ಆರೋಪಿಗಳ ಬಂಧಿಸಿದರು

ಆದರೆ ಇದೇ ಹಂತಕ ಪಡೆ ಶರತ್ ನನ್ನು ಪ್ರಾಣಿಗಳಿಗಿಂತ ಕಡೆಯಾಗಿ ಮರ್ಡರ್ ಮಾಡಿರ್ತಾರೆ. ಕೈ ಕಾಲು ಕಟ್ಟಿ ಮನಸೋ ಇಚ್ಛೆ ಥಳಿಸಿ ಚಿತ್ರಹಿಂಸೆ ಕೊಟ್ಟಿರ್ತಾರೆ. ಕೈ ಕಾಲು ಕಟ್ಟಿದ ವ್ಯಕ್ತಿಯನ್ನ ಮರದ ತುಂಡಿನ ಕೆಳಗೆ ನೇತು ಹಾಕಿ ಕ್ರೂರತ್ವ ಮೆರೆದಿರುತ್ತಾರೆ. ಈ ರೀತಿ ಚಿತ್ರಹಿಂಸೆಗೊಳಗಾಗಿದ್ದ ಶರತ್​.

ಇಷ್ಟಕ್ಕೂ ಯಾರು ಈ ಶರತ್​ ಅಂದ್ರೆ… ಈತ ಬೆಂಗಳೂರಿನ ಕೋಣನಕುಂಟೆ ನಿವಾಸಿ. ಕೊಲೆ ಮಾಡಿದ್ದ ಅರೋಪಿ ಹಾಗೂ ಕೊಲೆಗೀಡಾಗಿದ್ದ ಯುವಕ ಇಬ್ಬರ ಹೆಸರುಗಳೂ ಶರತ್ ಅಂತಲೇ ಇರುತ್ತದೆ! ಇನ್ನು ಕೊಲೆ ಆರೋಪಿ ಶರತ್ ಚಿಕ್ಕಬಳ್ಳಾಪುರ ಮೂಲದವ. ಆರಂಭದಲ್ಲಿ ಈ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ನಕಾರ ಸೂಚಿಸುತ್ತಾರೆ.

ಹಾಗಾಗಿ ಕಬ್ಬನ್ ಪಾರ್ಕ್ ಪೊಲೀಸರು ಕೊಲೆಯಾದ ವಿಷಯ ತಿಳಿಯುತ್ತಿದಂತೆ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿರುತ್ತಾರೆ. ನಿಖರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಕಬ್ಬನ್ ಪಾರ್ಕ್ ಪೊಲೀಸರು ಶರತ್, ಮಂಜುನಾಥ್, ಶ್ರೀಧರ್, ವೆಂಕಟಾಚಲಪತಿ ಮತ್ತು ಧನುಷ್ ಎಂಬ ಅರೋಪಿಗಳನ್ನು ಬಂಧಿಸುತ್ತಾರೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Tue, 27 December 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ