AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Surathkal Murder: ಅಬ್ದುಲ್ ಜಲೀಲ್ ಹತ್ಯೆಗೆ ಹಿಂದೂ ಮಹಿಳೆ ಜೊತೆಗಿನ ಅನೈತಿಕ ಸಂಬಂಧವೇ ಕಾರಣವಾಯ್ತಾ?

ಡಿಸೆಂಬರ್ 24ರಂದು ಮಂಗಳೂರಿನ ಸುರತ್ಕಲ್‍ (Surathkal) ನ ಕಾಟಿಪಳ್ಳದಲ್ಲಿ ನಡೆದ ಅಬ್ದುಲ್​ ಜಲೀಲ್ ಕೊಲೆ ಪ್ರಕರಣದ ಹಿಂದೆ ಅನೈತಿಕ ಸಂಬಂಧ ಕೇಳಿಬರುತ್ತಿದೆ. ‌ಅನ್ಯಧರ್ಮೀಯ ಮಹಿಳೆಯೊಂದಿಗೆ ಅನೈತಿಕ ಸಂಪರ್ಕವೇ ಜಲೀಲ್ ಕೊಲೆಗೆ ಕಾರಣವಾಯ್ತಾ..? ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

Surathkal Murder: ಅಬ್ದುಲ್ ಜಲೀಲ್ ಹತ್ಯೆಗೆ ಹಿಂದೂ ಮಹಿಳೆ ಜೊತೆಗಿನ ಅನೈತಿಕ ಸಂಬಂಧವೇ ಕಾರಣವಾಯ್ತಾ?
ಸಾಂದರ್ಭಿಕ ಚಿತ್ರ
TV9 Web
| Updated By: Digi Tech Desk|

Updated on:Dec 27, 2022 | 5:19 PM

Share

ಮಂಗಳೂರು: ಸುರತ್ಕಲ್‍ (Surathkal) ನ ಕಾಟಿಪಳ್ಳದಲ್ಲಿ ನಡೆದ ಅಬ್ದುಲ್​ ಜಲೀಲ್ (Abdul Jaleel) ಕೊಲೆ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲೂ ಜಲೀಲ್ ಹತ್ಯೆ ಪ್ರಕರಣ ಚರ್ಚೆಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಆದ್ರೆ, ಇದರ ಮಧ್ಯೆ ಜಲೀಲ್ ಹತ್ಯೆಗೆ (Jaleel Murder) ಹಿಂದೂ ಧರ್ಮದ ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಕಾರಣ ಎನ್ನುವ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ: Mangaluru Jaleel Murder Case: ಜಲೀಲ್ ಹತ್ಯೆ ಪ್ರಕರಣದಲ್ಲಿ ಮೂವರ ಬಂಧನ, ಆರೋಪಿಗಳ ಬಗ್ಗೆ ಮಾಹಿತಿ ನೀಡಿದ ಕಮಿಷನರ್

ಹೌದು…. ಜಲೀಲ್ ಮತ್ತು ಸ್ಥಳೀಯ ಹಿಂದೂ ಮಹಿಳೆ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದ್ದು, ಈ ಬಗ್ಗೆ ಎರಡು ವರ್ಷಗಳ ಹಿಂದೆಯೂ ಸ್ಥಳೀಯವಾಗಿ ಗಲಾಟೆ ನಡೆದಿತ್ತಂತೆ. ಬಳಿಕ ಕಳೆದ ಕೆಲ ತಿಂಗಳ ಹಿಂದೆ ಸುಮಾರು 50ರಿಂದ 60 ಜನರು ಗಲಾಟೆ ಮಾಡಿದ್ದರು. ಅಲ್ಲದೇ ಜಲೀಲನಿಗೆ ಎಚ್ಚರಿಕೆ ಸಹ ಕೊಡಲಾಗಿತ್ತು ಎನ್ನಲಾಗಿದೆ.

ಕೊಲೆ ಆರೋಪಿಗಳಾದ ಶೈಲೇಶ್ ಹಾಗೂ ಸುವಿನ್ ಕಾಂಚನ್ ಹಾಗೂ ಅನೈತಿಕ ಸಂಬಂಧವಿದ್ದ ಮಹಿಳೆಗೂ ಯಾವ ಸಂಬಂಧವಿಲ್ಲ. ಆದ್ರೆ, ಅನ್ಯಧರ್ಮೀಯ ವ್ಯಕ್ತಿ ಎನ್ನುವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎನ್ನುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ವಿಧಾನಸಭೆ ಮತ್ತು ಪರಿಷತ್​ನಲ್ಲಿ ಪ್ರತಿಧ್ವನಿಸಿದ ಜಲೀಲ್ ಹತ್ಯೆ ಪ್ರಕರಣ, ಸರ್ಕಾರದ ವಿರುದ್ಧ ವಿಪಕ್ಷ ನಾಯಕರ ತರಾಟೆ

ಪ್ರಕರಣದ ಹಿನ್ನೆಲೆ

ಮಂಗಳೂರಿನ (Mangaluru) ಕಾಟಿಪಳ್ಳದ ನಾಲ್ಕನೇ ಬ್ಲಾಕ್​​ನಲ್ಲಿ 40 ವರ್ಷದ‌ ಅಬ್ದುಲ್​ ಜಲೀಲ್  ಎಂಬ ವ್ಯಕ್ತಿಯನ್ನು ಡಿಸೆಂಬರ್ 24ರಂದು ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಚೂರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಬಂಧಿತರನ್ನು ಶೈಲೇಶ್ ಪೂಜಾರಿ, ಸವಿನ್ ಕಾಂಚನ್, ಪವನ್ ಅಲಿಯಾಸ್ ಪಚ್ಚು ಎಂದು ಗುರುತಿಸಲಾಗಿದೆ. ಈ ನಡುವೆ ಆರೋಪಿಗಳ ವಿಚಾರಣೆ ವೇಳೆ ಕೊಲೆ ಹಿಂದಿನ ಕಾರಣ ಬಯಲಾಗಿದೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಪೊಲೀಸರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

ಜಲೀಲ್​ ಕೊಲೆ ಬೆನ್ನಲ್ಲೇ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಸುರತ್ಕಲ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್​ 144 (Section 144) ಜಾರಿ ಮಾಡಲಾಗಿತ್ತು. ಅಲ್ಲದೇ ಮದ್ಯ ಮಾರಾಟವನ್ನೂ ಸಹ ಡಿಸೆಂಬರ್ 29ರ ವರೆಗೆ ನಿಷೇಧಿಸಲಾಗಿದೆ.

ಇನ್ನಷ್ಟು ದಕ್ಷಿಣ ಕನ್ನಡ ಜಿ್ಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 3:39 pm, Tue, 27 December 22