ಬೆಂಗಳೂರು/ಕೋಲಾರ: ಬಾರ್ ಕ್ಯಾಶಿಯರ್ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಆರ್ಎಂಸಿ ಯಾರ್ಡ್ ಬಳಿ ನಡೆದಿದೆ. ಶೇಖರ್ ಬಾರ್ನ ಕ್ಯಾಶಿಯರ್ ಶಿವಕುಮಾರ್ ಕೊಲೆಯಾದ ವ್ಯಕ್ತಿ. ಮಾತಿಗೆ ಮಾತು ಬೆಳೆದು ಪರಸ್ಪರ ಅವಾಚ್ಯ ಶಬ್ಧದಿಂದ ನಿಂದನೆ ತಾರಕಕ್ಕೇರಿದೆ. ಬಳಿಕ ಕರ್ಣ ಅಲಿಯಾಸ್ ಸಿದ್ದೋಜಿ ರಾವ್ , ಗಿರೀಶ್ ಎಂಬುವರು, ಶೇಖರ್ ಬಾರ್ನ ಕ್ಯಾಶಿಯರ್ ಶಿವಕುಮಾರ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ಆರ್ ಎಂ ಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಭಾವನಿಂದಲೇ ನಾದಿನಿ ಹತ್ಯೆಗೆ ಯತ್ನಿಸಿರುವ ಘಟನೆ ಇಂದು (ಮಾ.02) ಬೆಳಗ್ಗೆ ಕೋಲಾರ ನಗರದ ಎಂ.ಜಿ.ರಸ್ತೆಯಲ್ಲಿ ನಡೆದಿದೆ. ಶ್ರೀನಿವಾಸ್ ಎನ್ನುವಾತನೇ ತನ್ನ ನಾದಿನಿಯಾಗಬೇಕಿದ್ದ ಕವಿತಾ ಮೇಲೆ ಮಚ್ಚಿನಿಂದ ಮಾರಣಾಂತಿ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಭೀರ ಗಾಯಗೊಂಡಿರುವ ಕವಿತಾಳನ್ನು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿಸಿದ್ದು, ಇನ್ನು ಆರೋಪಿ ಶ್ರೀನಿವಾಸ್ನನ್ನು ಕೋಲಾರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇನ್ನು ಠಾಣೆಗೆ ಬರುತ್ತಿದ್ದ ಪೊಲೀಸ್ ಕಾನ್ಸ್ಟೇಬಲ್ ಅನಿತಾ, ಘಟನೆ ನೋಡಿ ಸಾರ್ವಜನಿಕರ ಸಹಾಯದಿಂದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ ಸಮಯ ಪ್ರಜ್ಞೆ ಮೆರೆದಿದ್ದಾರೆ. ಕೋಲಾರ ನಗರ ಠಾಣೆ ಮಹಿಳಾ ಕಾನ್ ಸ್ಟೇಬಲ್ ಅನಿತಾ ಅವರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಕಾನ್ ಸ್ಟೇಬಲ್ ಗಳಾದ ಅನಿತಾ, ಹೇಮಂತ್, ಮಹೇಶ್ ಅವರ ಕಾರ್ಯಕ್ಕೆ ಎಸ್ಪಿ ನಾರಾಯಣ್ ಮೆಚ್ಚಿ ತಲಾ ಹತ್ತು ಸಾವಿರ ಬಹುಮಾನ ಘೋಷಿಸಿದ್ದಾರೆ.
Published On - 10:08 am, Thu, 2 March 23