‘ಮದ್ಯ ಕಳ್ಳತನ’ ದೂರು ಕೊಟ್ಟು ತಗ್ಲಾಕ್ಕೊಂಡ ಬಾರ್ ಮಾಲೀಕನ ಸುಪುತ್ರ!
ಚಿಕ್ಕಬಳ್ಳಾಪುರ: ನಗರದ ಗೋಲ್ಡನ್ ಬಾರ್ನಲ್ಲಿ ಕಳ್ಳತನ ಪ್ರಕರಣ ಸಂಬಂಧ ಬಾರ್ ಮಾಲೀಕನ ಮಗ ದೀಪಕ್ ಸೇರಿ ಐವರು ಆರೋಪಿಗಳನ್ನು ನಂದಿ ಹಿಲ್ಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಬಾರ್ನ ಗೋಡೆ ಕೊರೆದು 80 ಸಾವಿರ ರೂಪಾಯಿ ಮೌಲ್ಯದ ಮದ್ಯ ಕಳ್ಳತನವಾಗಿತ್ತು. ಸ್ವತಃ ಬಾರ್ ಮಾಲೀಕನ ಮಗನೇ ಸುಪಾರಿ ನೀಡಿ ಬಾರ್ನಲ್ಲಿ ಮದ್ಯ ಕಳ್ಳತನ ಮಾಡಿಸಿದ್ದ. ನಂತರ ಏನೂ ಗೊತ್ತಿಲ್ಲದಂತೆ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಮಾಲೀಕನ ಮಗನೇ ಸುಪಾರಿ […]
ಚಿಕ್ಕಬಳ್ಳಾಪುರ: ನಗರದ ಗೋಲ್ಡನ್ ಬಾರ್ನಲ್ಲಿ ಕಳ್ಳತನ ಪ್ರಕರಣ ಸಂಬಂಧ ಬಾರ್ ಮಾಲೀಕನ ಮಗ ದೀಪಕ್ ಸೇರಿ ಐವರು ಆರೋಪಿಗಳನ್ನು ನಂದಿ ಹಿಲ್ಸ್ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎರಡು ದಿನಗಳ ಹಿಂದೆ ಬಾರ್ನ ಗೋಡೆ ಕೊರೆದು 80 ಸಾವಿರ ರೂಪಾಯಿ ಮೌಲ್ಯದ ಮದ್ಯ ಕಳ್ಳತನವಾಗಿತ್ತು.
ಸ್ವತಃ ಬಾರ್ ಮಾಲೀಕನ ಮಗನೇ ಸುಪಾರಿ ನೀಡಿ ಬಾರ್ನಲ್ಲಿ ಮದ್ಯ ಕಳ್ಳತನ ಮಾಡಿಸಿದ್ದ. ನಂತರ ಏನೂ ಗೊತ್ತಿಲ್ಲದಂತೆ ಪೊಲೀಸರಿಗೆ ದೂರು ನೀಡಿದ್ದ. ಪ್ರಕರಣದ ಬೆನ್ನತ್ತಿ ಹೊರಟ ಪೊಲೀಸರಿಗೆ ಮಾಲೀಕನ ಮಗನೇ ಸುಪಾರಿ ನೀಡಿ ಕಳ್ಳತನ ಮಾಡಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಐವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.