ಬಳ್ಳಾರಿ: ಪತ್ನಿಗೆ ಬೈದಿದ್ದನ್ನು ಪ್ರಶ್ನಿಸಿದಕ್ಕೆ ಕುಟುಂಬಸ್ಥರಿಂದಲೇ ಯುವಕನ ಭೀಕರ ಕೊಲೆ

ವಿಜಯನಗರ ಜಿಲ್ಲೆಯ‌ ಹಗರಿಬೊಮ್ಮನಹಳ್ಳಿ ಪಟ್ಟಣದ ಆತ, ವರ್ಷದ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ. ಪ್ರೀತಿಯ ಮಡದಿಗೆ ಅವಾಚ್ಯ ಪದಗಳಿಂದ ಬೈದಿದ್ದಾನೆ ಎಂದು ಪ್ರಶ್ನೆ ಮಾಡಲು ಹೋಗಿದ್ದ. ಹಳೆ ದ್ವೇಷ ಮತ್ತು ಮೃತನ ಕುಟುಂಬದ ಮೇಲಿದ್ದ ಅಸೂಹೆಯಿಂದ ಆ ಆರು ಜನ ಆರೋಪಿಗಳು ಚಾಕು ಮತ್ತು ರಾಡ್‌ನಿಂದ ಹೊಡೆದು ಕೊಂದೆ ಬಿಟ್ಟಿದ್ದಾರೆ.

ಬಳ್ಳಾರಿ: ಪತ್ನಿಗೆ ಬೈದಿದ್ದನ್ನು ಪ್ರಶ್ನಿಸಿದಕ್ಕೆ ಕುಟುಂಬಸ್ಥರಿಂದಲೇ ಯುವಕನ ಭೀಕರ ಕೊಲೆ
ಹಗರಿಬೊಮ್ಮನಹಳ್ಳಿ ಕುಟುಂಬಸ್ಥರಿಂದಲೇ ಯುವಕನ ಭೀಕರ ಕೊಲೆ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 16, 2024 | 6:08 PM

ಬಳ್ಳಾರಿ, ಫೆ.16: ಪ್ರೀತಿಯ ಮಡದಿಗೆ ಅವಾಚ್ಯ ಪದಗಳಿಂದ ಬೈದಿದ್ದಾನೆ ಎಂದು ಪ್ರಶ್ನೆ ಮಾಡಲು ಹೋಗಿದ್ದ ಯುವಕನನ್ನು ಹಳೆ ದ್ವೇಷ ಮತ್ತು ಮೃತನ ಕುಟುಂಬದ ಮೇಲಿದ್ದ ಅಸೂಹೆಯಿಂದ ಆರು ಜನ ಸೇರಿ ಚಾಕು ಮತ್ತು ರಾಡ್‌ನಿಂದ ಹೊಡೆದು ಹತ್ಯೆ ಮಾಡಿದ ಘಟನೆ ನಿನ್ನೆ ವಿಜಯನಗರ ಜಿಲ್ಲೆಯ‌ ಹಗರಿಬೊಮ್ಮನಹಳ್ಳಿ (Hagaribommanahalli)ಪಟ್ಟಣದ ಜೆಸ್ಕಾಂ ಕಚೇರಿ ಪಕ್ಕದಲ್ಲಿ ನಡೆದಿದೆ. ಬಂಗಾರಿ ಮಂಜುನಾಥ್​ ಮೃತ ರ್ದುದೈವಿ. ತನ್ನ ಪ್ರೀತಿಯ ಮಡದಿಗೆ ಅವಾಚ್ಯ ಪದಗಳಿಂದ ಬೈದರೂ ಎಂದು ನೆರೆ ಮನೆಯ ದಾಯಾದಿಗಳನ್ನ ಪ್ರಶ್ನೆ ಮಾಡಲು ಹೋಗಿದ್ದಾನೆ. ಏಕಾಏಕಿ ಮಾತಿಗೆ ಮಾತು ಬೆಳೆದು ಎದರುಗಡೆಯ ದಾಯಾದಿಗಳು ಕೈಯಲ್ಲಿ ಚಾಕು, ರಾಡ್ ಹಿಡಿದು ಭೀಕರವಾಗಿ ಕೊಂದೆ ಬಿಟ್ಟಿದ್ದಾರೆ.

ಬಂಗಾರಿ ಮಂಜುನಾಥ್​ ಹಾಗೂ ಅವರ ದಾಯಾದಿ ಬಂಗಾರಿ ಹನುಮಂತ ಕುಟುಂಬಕ್ಕೆ ಈ ಹಿಂದೆ ದ್ವೇಷ ಇತ್ತು. ಆಸ್ತಿ ವಿಚಾರವಾಗಿ, ಮನೆ ಜಾಗದ ವಿಚಾರವಾಗಿ, ಹಣದ ವಿಚಾರವಾಗಿ ಪದೇ ಪದೇ ಎರಡು ಕುಟುಂಬಗಳ ನಡುವೆ ಜಗಳವಾಗುತ್ತಲೇ ಇತ್ತು. ಕೊಲೆಯಾದ ಬಂಗಾರಿ ಮಂಜುನಾಥ ಕೂಡ ಕಟ್ಟುಮಸ್ತಾಗಿದ್ದ ಹೀಗಾಗಿ ಇತನು ಯಾವ ಬೇದರಿಕೆಗೂ ಜಗ್ಗದೆ ಅವರೊಂದಿಗೆ ಕಾದಾಟಕ್ಕೆ ನಿಲ್ಲುತ್ತಿದ್ದ. ಇದನ್ನ ಸಹಿಸಿಕೊಳ್ಳದ ಬಂಗಾರಿ ಹನುಮಂತ ಕುಟುಂಬ ಸಮಯಕ್ಕೆ ಕಾದು, ಇತನನ್ನ ಕೊಲ್ಲಬೇಕು ಎಂದು ಹೊಂಚು ಹಾಕತ್ತಲೇ ಇದ್ದರು.

ಇದನ್ನೂ ಓದಿ:ಊರಿಗೆ ಹೊರಟಿದ್ದ ಮಹಿಳೆಯನ್ನ ಮನೆಗೆ ಕರೆದೊಯ್ದು ಕೊಲೆ; ಚಿನ್ನಾಭರಣ ಕಿತ್ಕೊಂಡು ಶವ ಸಂಪ್​​ಗೆ ಎಸೆದು ದಂಪತಿ ಎಸ್ಕೇಪ್

ನಿನ್ನೆ ತಡ ರಾತ್ರಿ 2:30 ರ ಸುಮಾರು ಹೆಂಡತಿಗೆ ಬೈದಿದ್ದನ್ನ ಪ್ರಶ್ನೆ ಮಾಡಲು ಬಂದಿದ್ದ ಬಂಗಾರಿ ಮಂಜುನಾಥನನ್ನ ಇದೇ ಸರಿಯಾದ ಸಮಯ ಎಂದು ಚಾಕುವಿನಿಂದ ಎದೆಗೆ, ಹೊಟ್ಟೆ ಭಾಗಕ್ಕೆ, ಮರ್ಮಾಂಗಕ್ಕೆ ಚುಚ್ಚಿ, ರಾಡ್‌ನಿಂದ ಭೀಕರವಾಗಿ ಹೊಡೆದು ಕೊಂದೆ ಬಿಟ್ಟಿದ್ದಾರೆ. ಇಂತಹ ಪಾಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮೃತನ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ. ಒಟ್ಟಿನಲ್ಲಿ ಹಗರಿಬೊಮ್ಮನಳ್ಳಿ ಪಕ್ಕದ ಬ್ಯಾಲಾಳ ಗ್ರಾಮದಲ್ಲಿ ವಾಸವಿದ್ದ ಮೃತನ ಪತ್ನಿಗೆ ಆರೋಪಿ ಕುಟುಂಬಸ್ಥರು ಅವಾಚ್ಯ ಪದಗಳಿಂದ ಬೈದ್ರು ಎಂದು ಪ್ರಶ್ನೆ ಮಾಡಲು ಹೋದ ಬಂಗಾರಿ ಮಂಜುನಾಥ್​ನನ್ನ ಆರು ಮಂದಿ ದಾಯಾದಿಗಳು ಕೊಂದೆ ಬಿಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Fri, 16 February 24

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ