ವಿಕಲಾಂಗ ಮಗನನ್ನು ನಿಂದಿಸಿದಕ್ಕೆ ಅಣ್ಣನ ಮಗನ ಕೊಲೆ; ಆರು ತಿಂಗಳಿಂದ ಹೊಂಚು ಹಾಕಿ ಮರ್ಡರ್

 ಹಾನಗಲ್ ತಾಲೂಕಿನ ಮಲಗುಂದ ಗ್ರಾಮದಲ್ಲಿ ದುರ್ಗಮ್ಮ ದೇವಿಯ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿತ್ತು. ಗ್ರಾಮದ ಜನರೆಲ್ಲಾ ದುರ್ಗಾದೇವಿ ಗುಡಿ ಮುಂದೆ ನೆಲೆಸಿದ್ದರು. ಆದರೆ, ಓರ್ವ ಮಾತ್ರ ತನ್ನ ಆರು ತಿಂಗಳ ಸೇಡು ತಿರಿಸಿಕೊಳ್ಳಲು ಹೊಂಚು ಹಾಕಿದ್ದ. ಏಣ್ಣೇ ಏಟಿನಲ್ಲಿ ಮಲಗಿದ್ದ ಅಣ್ಣನ ಮಗನನ್ನು ಮಸಣಕ್ಕೆ ಕಳಸಿ, ಏನು ಆಗಿಲ್ಲ ಎಂಬಂತೆ ದೇವಿ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ್ದ.

ವಿಕಲಾಂಗ ಮಗನನ್ನು ನಿಂದಿಸಿದಕ್ಕೆ ಅಣ್ಣನ ಮಗನ ಕೊಲೆ; ಆರು ತಿಂಗಳಿಂದ ಹೊಂಚು ಹಾಕಿ ಮರ್ಡರ್
ಹಾನಗಲ್​ ಅಣ್ಣನ ಮಗನ ಕೊಲೆ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on:Feb 14, 2024 | 8:59 PM

ಹಾವೇರಿ, ಫೆ.14: ಜಿಲ್ಲೆಯ ಹಾನಗಲ್(Hangal) ತಾಲೂಕಿನ ಮಲಗುಂದ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದರು. ರಾತ್ರಿಯಿಡೀ ಗ್ರಾಮದಲ್ಲಿ ಸಂಭ್ರಮದಿಂದ ದುರ್ಗಮ್ಮ ದೇವಿ ಜಾತ್ರೆ ಮಾಡಿ ಮಲಗಿದ್ದ ಜನರಿಗೆ ಬೆಳಗ್ಗೆ ಗ್ರಾಮದಲ್ಲಿ ವ್ಯಕ್ತಿಯ ಕೊಲೆಯಾಗಿದೆ ಎನ್ನುವ ಸುದ್ದಿ ಕೇಳಿ ಬೆಚ್ಚಿ ಬಿದ್ದಿದ್ದರು. ಹೀಗೆ ರಕ್ತದ ಮಡುವಿನಲ್ಲಿ ಹೆಣವಾಗಿ ಮಲಗಿರುವ ವ್ಯಕ್ತಿಯ ಹೆಸರು ಯಲ್ಲಪ್ಪ ದೊಡ್ಡಕೋವಿ. ಮದುವೆಯಾಗಿ ಹೆಂಡತಿ ಮಕ್ಕಳು ಇದ್ದರೂ ಕೂಡ ಏಕಾಂಗಿಯಾಗಿ ಗ್ರಾಮದಲ್ಲಿ ವಾಸವಾಗಿದ್ದ. ಇತನಿಗೆ ಅಣ್ಣಾ ಹಜಾರೆ ಎಂದು ಗ್ರಾಮದ ಜನರು ಕರೆಯುತ್ತಿದ್ದರು. ಆದರೆ, ಆರೋಪಿ ಪಕ್ಕಿರಪ್ಪ ದೊಡ್ಡಕೋವಿ, ಮೃತ ಯಲ್ಲಪ್ಪನಿಗೆ ಚಿಕ್ಕಪ್ಪನಾಗಬೇಕು. ಆರು ತಿಂಗಳ ಕ್ಷುಲ್ಲಕ ಕಾರಣಕ್ಕೆ ಇಬ್ಬರು ಜಗಳ ಮಾಡಿಕೊಂಡಿದ್ದರು. ಇದನ್ನೆ ಮನಸಿನಲ್ಲಿ ಇಟ್ಟುಕೊಂಡು ಇತ ನಿನ್ನೆ(ಫೆ.13) ಯಾರು ಇಲ್ಲದಿರುವಾಗ ಇಟ್ಟಿಗೆಯಿಂದ ಜಜ್ಜಿ ಕೊಲೆ ಮಾಡಿದ್ದಾನೆ.

ಮನೆಯವರು ಎಲ್ಲರೂ ದೇವಸ್ಥಾನಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಪಕ್ಕಿರಪ್ಪ, ಮನೆಯ ಜಗುಲಿ ಮುಂದೆ ಮಲಗಿದ್ದ. ಯಲ್ಲಪನನ್ನು ಕಂಡು ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾನೆ. ಮೊದಲೇ ಕುಡಿದಿದ್ದ ಪಕ್ಕಿರಪ್ಪ, ಮತ್ತೆ ಸ್ವಲ್ಪ ಕುಡಿದು ಬಂದು ಮಲಗಿದ್ದ ಯಲ್ಲಪ್ಪನಿಗೆ ಇಟ್ಟಿಗೆಯಿಂದ ತಲೆಗೆ ಹೊಡೆದು ಆತನ ಉಸಿರು ನಿಲ್ಲಿಸಿದ್ದಾನೆ. ಇಷ್ಟಾದರೂ ಅಣ್ಣನ ಮಗನ ಕೊಲೆ ಮಾಡಿದ ಕಿರಾತಕ, ದುರ್ಗಾದೇವಿ ಜಾತ್ರೆಯ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ್ದಾನೆ. ಆದರೆ, ಸುದ್ದಿ ತಿಳಿದು ಸ್ಥಳಕ್ಕೆ ಬಂದ ಆಡೂರು ಪೊಲೀಸರು, ಪಕ್ಕಿರಪ್ಪನ ಕೈ ಅಂಟಿರುವ ರಕ್ತದ ವಾಸನೆ ಹಿಡಿದು ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ಓದಿ:ಧಾರವಾಡದಲ್ಲಿ ಚಿಕ್ಕಮ್ಮನನ್ನೇ ಕೊಂದ ಕೊಲೆಗಾರ ಅಂದರ್​; ಹತ್ಯೆಗೆ ಕಾರಣ ಬಾಯ್ಬಿಟ್ಟ ಹಂತಕ

ಒಟ್ಟಾರೆ ಕ್ಷುಲ್ಲಕ ಕಾರಣಕ್ಕೆ ಇಳಿ ವಯಸ್ಸಿನಲ್ಲಿ ಮೊಮ್ಮಕಳನ್ನು ಆಡಿಸುತ್ತಾ ಕಾಲ ಕಳೆಯಬೇಕಾಗಿದ್ದ ವ್ಯಕ್ತಿ ಕಂಬಿ ಏಣಿಸುವಂತ ಸ್ಥಿತಿ ತಂದುಕೊಂಡಿದ್ದಾನೆ. ಇನ್ನೊಂದೆಡೆ ಬಾಳಿ ಬದುಕಬೇಕಾಗಿದ್ದ ಅಣ್ಣನ ಮಗ ಮಸಣ ಸೇರಿದ್ದಾನೆ. ವಿಕಲಾಂಗ ಮಗನನ್ನು ತಮಾಷೆಗಾಗಿ ನಿಂದಿಸಿದಕ್ಕೆ, ಅದನ್ನೇ ದೊಡ್ಡದಾಗಿ ತೆಗೆದುಕೊಂಡು, ಬರೊಬ್ಬರಿ ಆರು ತಿಂಗಳು ಹೊಂಚು ಹಾಕಿ ಅಣ್ಣನ ಮಗನನ್ನು ಕೊಲೆ ಮಾಡಿದ್ದಾನೆ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:20 pm, Wed, 14 February 24

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್