ಬೆಳಗಾವಿಯ ನಾಲ್ವರು ಪೊಲೀಸರ ಕರ್ತವ್ಯ ಪ್ರಜ್ಞೆ, ಕೆಲಸಕ್ಕೆ ಇಡೀ ಪೊಲೀಸ್ ಇಲಾಖೆ, ಕೋರ್ಟ್ ಅಪಾರ ಮೆಚ್ಚುಗೆ! ಏನದು ಪ್ರಕರಣ?

Belgavi police: ಬೆಳಗಾವಿ ಪೊಲೀಸ್ ಆಯುಕ್ತರ ಸೂಚನೆಯಂತೆ ಅಂದು ಬೆಳಗ್ಗೆಯೇ ಅಖಾಡಕ್ಕಿಳಿದ ಪೊಲೀಸರು ಮನೆ ಮನೆಗೆ ಹೋಗಿ ಎಲ್ಲರ ಮೊಬೈಲ್ ಪರಿಶೀಲನೆ ಮಾಡ್ತಾರೆ. ಖುದ್ದು ಇವರೇ ಮೊಬೈಲ್ ನಲ್ಲಿನ ವಿಡಿಯೋ ಡಿಲಿಟ್ ಮಾಡುತ್ತಾರೆ, ಕೆಲ ಯುವಕರು ಊರು ಬಿಟ್ಟಿದ್ದು ಅವರನ್ನೂ ಕರೆಯಿಸಿ ಮೊಬೈಲ್ ನಲ್ಲಿ ವಿಡಿಯೋ ಡಿಲಿಟ್ ಮಾಡಿಸ್ತಾರೆ. ಯಾರಾದ್ರೂ ವೈರಲ್ ಮಾಡಿದ್ರೇ ಅವರ ವಿರುದ್ದ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಇವರೇ ಊರ ತುಂಬ ಅನೌನ್ಸ್ ಕೂಡ ಮಾಡಿರುತ್ತಾರೆ.

ಬೆಳಗಾವಿಯ ನಾಲ್ವರು ಪೊಲೀಸರ ಕರ್ತವ್ಯ ಪ್ರಜ್ಞೆ, ಕೆಲಸಕ್ಕೆ ಇಡೀ ಪೊಲೀಸ್ ಇಲಾಖೆ, ಕೋರ್ಟ್ ಅಪಾರ ಮೆಚ್ಚುಗೆ! ಏನದು ಪ್ರಕರಣ?
ಬೆಳಗಾವಿಯ ನಾಲ್ವರು ಪೊಲೀಸರ ಕರ್ತವ್ಯ ಪ್ರಜ್ಞೆ, ಕೆಲಸಕ್ಕೆ ಅಪಾರ ಮೆಚ್ಚುಗೆ! ಏನದು ಪ್ರಕರಣ?
Follow us
Sahadev Mane
| Updated By: ಸಾಧು ಶ್ರೀನಾಥ್​

Updated on: Feb 14, 2024 | 1:08 PM

ಅದು ಡಿಸೆಂಬರ್ 10ರ ಮಧ್ಯರಾತ್ರಿ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಅದೊಬ್ಬ ಮಹಿಳೆಯನ್ನ ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡ್ತಿದ್ದರು. ಈ ವೇಳೆ ಕಾಕತಿ ಠಾಣೆ ಪೊಲೀಸರ 112ಗೆ ಗ್ರಾಮಸ್ಥರೊಬ್ಬರು ಕರೆ ಮಾಡಿ ಘಟನೆ ಕುರಿತು ಹೇಳಿದ್ದಾರೆ, ಹೀಗೆ ಕರೆ ಬಂದ ಹದಿನೈದು ನಿಮಿಷದಲ್ಲಿ 112 ವಾಹನ ಸಮೇತ ಇಬ್ಬರು ಪೊಲೀಸ್ ಕಾನ್ಸ್​​ಟೇಬಲ್​​ಗಳಾದ ಸುಭಾಷ ಬಿಲ್ ಮತ್ತು ವಿಠ್ಠಲ ಪಟ್ಟೇದ ಸ್ಥಳಕ್ಕೆ ಹೋಗಿದ್ದಾರೆ.

ಈ ವೇಳೆ ಮಹಿಳೆಯ ಸ್ಥಿತಿ ಕಂಡು ಶಾಕ್ ಆಗಿದ್ದಾರೆ, ಕೂಡಲೇ ಅಲ್ಲಿದ್ದ ಆರೋಪಿಗಳಿಗೆ ಅವಾಜ್ ಹಾಕಿ ತಡೆಯುವ ಕೆಲಸ ಮಾಡಿದ್ದಾರೆ. ಇದೇ ವೇಳೆ ಘಟನೆ ಕೈಮೀರಬಾರದು ಅನ್ನೋ ಕಾರಣಕ್ಕೆ ಕೂಡಲೇ ಪಿಎಸ್ಐ ಮಂಜುನಾಥ್ ಹುಲಕುಂದ ಗೆ ಕರೆ ಮಾಡಿದ ಸಿಬ್ಬಂದಿ ಘಟನೆ ಕುರಿತು ಹೇಳಿದ್ದಾರೆ. ಇದಾದ ಬಳಿಕ ಇಬ್ಬರೂ ಪೊಲೀಸ್ ಕಾನ್ಸ್​​ಟೇಬಲ್​​ಗಳು ಮೊಟ್ಟಮೊದಲ ಕೆಲಸವಾಗಿ ಮಹಿಳೆಯ ಮನೆಗೆ ಓಡಿ ಹೋಗಿ ಸೀರೆಯೊಂದನ್ನ ತಂದು ಆ ತಾಯಿಗೆ ನೀಡಿ ಮಾನ ಮುಚ್ಚುವ ಕೆಲಸ ಮಾಡಿದ್ದಾರೆ.

ಆ ನಾಲ್ವರು ಪೊಲೀಸರ ಕರ್ತವ್ಯ ಪ್ರಜ್ಞೆತೋರಿದ್ದರು. ಆದರೆ ಬೇಜವಾಬ್ದಾರಿ ತೋರಿದ ಸಿಪಿಐ ಅಮಾನತು:

ಇನ್ನು ಘಟನೆ ನಡೆದ ಸಂದರ್ಭದಲ್ಲಿ 100ಕ್ಕೂ ಅಧಿಕ ಜನ ಅಲ್ಲಿ ಮೂಕ ಪ್ರೇಕ್ಷಕರಾಗಿದ್ದರು. ಆ ಇಬ್ಬರು ಪೊಲೀಸ್ ಕಾನ್ಸ್​​ಟೇಬಲ್​​ಗಳು ಸ್ಥಳಕ್ಕೆ ಹೋದಾಗಲು ಸತಃ ಅವರೇ ಹೆದರಿಸಿಕೊಳ್ಳುವ ಕೆಲಸವನ್ನು ಆರೋಪಿಗಳು ಮಾಡಿದ್ದರು. ಆದ್ರೇ ವಿಚಾರ ತಿಳಿಯುತ್ತಿದ್ದಂತೆ ಕಾಕತಿ ಠಾಣೆ ಎಎಸ್ಐ ಮಂಜುನಾಥ್ ಮತ್ತು ಕಾನ್ಸ್​​ಟೇಬಲ್ ನಾರಾಯಣ ಚಿಪ್ಪಲಕಟ್ಟಿ ಸ್ಥಳಕ್ಕೆ ಹೋಗಿದ್ದಾರೆ. ಕೂಡಲೇ ಆರೋಪಿಗಳನ್ನ ಬೆದರಿಸುವ ಕೆಲಸ ಮಾಡಿ ಮಹಿಳೆಯನ್ನ ರಕ್ಷಣೆ ಮಾಡಿ 112 ವಾಹನದಲ್ಲೇ ಆಕೆಯನ್ನ ಅಲ್ಲಿಂದ ಕಳುಹಿಸುವ ಕೆಲಸ ಮಾಡಿದ್ದಾರೆ. ಇತ್ತ ಆರೋಪಿಗಳನ್ನ ಕೂಡ ಎಲ್ಲಿಯೂ ಹೋಗದಂತೆ ನೋಡಿಕೊಂಡ ಪೊಲೀಸರು ಬೆಳಗ್ಗೆ ಅನ್ನುವಷ್ಟರಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ಪ್ರಕರಣದ ಮಾಹಿತಿಯನ್ನ ತಂದಿದ್ದಾರೆ. ಇದೇ ವೇಳೆ ಸಿಪಿಐಗೂ ಪಿಎಸ್ಐ ಕರೆ ಮಾಡಿದ್ದರು. ಆದ್ರೇ ಅವರು ಸ್ಥಳಕ್ಕೆ ಹೋಗದೇ ಬೇಜವಾಬ್ದಾರಿ ತೋರಿದ್ದಕ್ಕೆ ಅವರನ್ನ ಈಗಾಗಲೇ ಅಮಾನತು ಕೂಡ ಮಾಡಲಾಗಿದೆ.

ಘಟನೆಯ ವಿವರ ನೋಡೊದಾದ್ರೇ ಹಲ್ಲೆಗೊಳಗಾದ ಮಹಿಳೆಯ ಮಗ ಮತ್ತು ಆರೋಪಿಗಳ ಮನೆಯ ಯುವತಿ ಡಿ. 10ರಂದು ರಾತ್ರಿ 12ಗಂಟೆ ಸುಮಾರಿಗೆ ಓಡಿ ಹೋಗ್ತಾರೆ. ಬೇರೆ ಯುವಕನ ಜತೆಗೆ ತನ್ನ ಮದುವೆ ನಿಶ್ಚಯ ಆಯ್ತು ಅನ್ನೋ ಕಾರಣಕ್ಕೆ ಮನೆ ಬಿಟ್ಟು ಬಂದ ಯುವತಿ ಯುವಕನೊಂದು ಪರಾರಿಯಾಗ್ತಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಯುವತಿಯ ತಂದೆ, ತಾಯಿ, ಅಜ್ಜಿ, ಸಹೋದರ, ಚಿಕ್ಕಮ್ಮ, ಚಿಕ್ಕಪ್ಪ ಸೇರಿದಂತೆ ಸುಮಾರು 14 ಜನ ಗುಂಪು ಕಟ್ಟಿಕೊಂಡು ಬಂದು ಯುವಕನ ಮನೇ ಮೇಲೆ ಕಲ್ಲು ತೂರಿ ದಾಳಿ ಮಾಡ್ತಾರೆ.

Also Read: ಉಡುಪಿ ನಾಲ್ವರ ಹತ್ಯೆ ಪ್ರಕರಣ: ಹತ್ಯೆಗೆ ನಿಖರ ಕಾರಣ ಬಿಚ್ಚಿಟ್ಟ ಹಂತಕ ಪ್ರವೀಣ, ಭಯಾನಕ ಸಂಗತಿಗಳು ಬಹಿರಂಗ

ಮನೆಯಲ್ಲಿ ಮಲಗಿದ್ದ ಮಹಿಳೆಯನ್ನ ಎಬ್ಬಿಸಿ ಹೊಡೆದುಬಡಿದು, ಸೀರೆ ಬಿಚ್ಚಿ ವಿವಸ್ತ್ರಗೊಳಿಸಿ ಮನೆಯಿಂದಲೇ ಮೆರವಣಿಗೆ ಮಾಡ್ತಾ ಎರಡನೂರು ಮೀಟರ್ ದೂರದ ವರೆಗೂ ಕರೆತಂದು ಅಲ್ಲಿ ಕಂಬಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ನಡೆದುಕೊಳ್ತಾರೆ. ಇನ್ನು ಬೆಳಗ್ಗೆ ಆಗುವುದನ್ನೇ ಕಾಯುತ್ತಿದ್ದ ಇವರು ಮಹಿಳೆಯ ತಲೆ ಬೋಳಿಸಿ ಅಲ್ಲೇ ಇದ್ದ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಕೂಡ ಮಾಡಲು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಆದ್ರೆ ಸಮಯಕ್ಕೆ ಸರಿಯಾಗಿ ಹೋದ ಪೊಲೀಸರು ಮುಂದೆ ಆಗಬಹುದಾದ ದೊಡ್ಡ ಅನಾಹುತ ತಡೆದು ಮಹಿಳೆ ರಕ್ಷಣೆಯನ್ನ ಮಾಡಿರುತ್ತಾರೆ…

ಇನ್ನು ಘಟನೆಯನ್ನ ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸಿಐಡಿಗೆ ಕೇಸ್ ವರ್ಗಾವಣೆ ಮಾಡುತ್ತೆ. ತನಿಖೆ ನಡೆಸಿ ಸಿಐಡಿ ಇದೀಗ ನ್ಯಾಯಾಲಯಕ್ಕೆ ಜಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಪ್ರಕರಣದ ಇದು ಒಂದು ಭಾಗ ಅಂದ್ರೆ ಇದಕ್ಕಿಂತ ಇನ್ನೊಂದು ಅತೀ ದೊಡ್ಡ ಕೆಲಸವನ್ನ ಈ ನಾಲ್ಕು ಜನ ಪೊಲೀಸ್ ಸಿಬ್ಬಂದಿ ಮಾಡಿದ್ದಾರೆ. ಅವರ ಈ ಕೆಲಸಕ್ಕೆ ಸರ್ಕಾರ ಮತ್ತು ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ. ಹೌದು ಮಹಿಳೆ ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಬಳಿಕ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿ ರಾಕ್ಷಸಿಯ ವರ್ತನೆ ತೋರಿದ್ದು ಗ್ರಾಮದ ಬಹುತೇಕ ಜನರ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಆ ವಿಡಿಯೋ ಎನಾದ್ರೂ ವೈರಲ್ ಆಗಿದ್ರೇ ಇಡೀ ರಾಜ್ಯದ ಮಾನವೇ ರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿ ಹೋಗುತ್ತಿತ್ತು. ಆದ್ರೇ ಇದು ಆಗದಿರಲು ಕಾರಣವೇ ಬೆಳಗಾವಿ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ಅವರ ಅದೊಂದು ಆಲೋಚನೆ…

ಹೌದು ಘಟನೆ ನಡೆದು ಮಹಿಳೆಯನ್ನ ಆಸ್ಪತ್ರೆಗೆ ಶಿಪ್ಟ್ ಮಾಡ್ತಾರೆ, ಇದಾದ ಬಳಿಕ ಅಂದೇ ಏಳು ಜನ ಆರೋಪಿಗಳ ಬಂಧನ ಕೂಡ ಆಗುತ್ತೆ. ವಿಷಯ ತಿಳಿದು ಖುದ್ದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿಯನ್ನ ಪಡೆದುಕೊಳ್ತಾರೆ. ಕೂಡಲೇ ಕಠಿಣ ಕ್ರಮ ತೆಗೆದುಕೊಂಡು ಕುಟುಂಬಕ್ಕೆ ರಕ್ಷಣೆ ಕೊಡುವಂತೆ ಸೂಚನೆ ನೀಡಿರುತ್ತಾರೆ. ಇದೆಲ್ಲ ಬೆಳವಣಿಗೆ ಮುನ್ನ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ ನಾಲ್ಕು ಜನ ಸಿಬ್ಬಂದಿಗೆ ಅದೊಂದು ಟಾಸ್ಕ್ ನೀಡಿರ್ತಾರೆ. ಅದುವೇ ಬೆತ್ತಲೆಗೊಳಿಸಿದ ವಿಡಿಯೋ ಎಲ್ಲಿಯೂ ಹೊರ ಬರದಂತೆ ವೈರಲ್ ಆಗದಂತೆ ನೋಡಿಕೊಳ್ಳಲು. ಹೌದು ಆ ಒಂದು ವಿಡಿಯೋ ಹೊರ ಬಂದಿದ್ದೇ ಆಗಿದ್ದರೆ ಇಡೀ ಸರ್ಕಾರ ತಲೆ ತಗ್ಗಿಸಬೇಕಾಗಿತ್ತು, ರಾಜ್ಯದ ಜನರು ತಲೆ ತಗ್ಗಿಸಬೇಕಿತ್ತು ಆ ಹೇಯ ಕೃತ್ಯಕ್ಕೆ.

Also Read:  ಸಿಎಂ ಕ್ಷೇತದಲ್ಲಿ ನಿವೃತ್ತ ಶಿಕ್ಷಕ ಹತ್ಯೆ ಕೇಸ್​, ಮದುವೆಯಾದರೂ ಅದೇ ಕುಟುಂಬದ ಟೆಕ್ಕಿ ಮೇಲೆ ಕ್ರಷ್! ವಾಮಾಚಾರ ಪೋಟೋದಿಂದ ಸಿಕ್ಕಿಬಿದ್ದ ಪೊಲೀಸಪ್ಪ!

ನಗರ ಪೊಲೀಸ್ ಆಯುಕ್ತರ ಸೂಚನೆ ಮೆರಗೆ ಅಂದು ಬೆಳಗ್ಗೆಯೇ ಅಖಾಡಕ್ಕಿಳಿದ ಪೊಲೀಸರು ಮನೆ ಮನೆಗೆ ಹೋಗಿ ಎಲ್ಲರ ಮೊಬೈಲ್ ಪರಿಶೀಲನೆ ಮಾಡ್ತಾರೆ. ಖುದ್ದು ಇವರೇ ಮೊಬೈಲ್ ನಲ್ಲಿನ ವಿಡಿಯೋ ಡಿಲಿಟ್ ಮಾಡುತ್ತಾರೆ, ಕೆಲ ಯುವಕರು ಊರು ಬಿಟ್ಟಿದ್ದು ಅವರನ್ನೂ ಕರೆಯಿಸಿ ಮೊಬೈಲ್ ನಲ್ಲಿ ವಿಡಿಯೋ ಡಿಲಿಟ್ ಮಾಡಿಸ್ತಾರೆ. ಯಾರಾದ್ರೂ ವೈರಲ್ ಮಾಡಿದ್ರೇ ಅವರ ವಿರುದ್ದ ಕೇಸ್ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ ಇವರೇ ಊರ ತುಂಬ ಅನೌನ್ಸ್ ಕೂಡ ಮಾಡಿರುತ್ತಾರೆ.

ಸೋಶಿಯಲ್ ಮೀಡಿಯಾ ಇದೀಗ ಸಾಕಷ್ಟು ಸ್ಟ್ರಾಂಗ್. ಹಾಗಾಗಿ ಪ್ರತಿ ಮನೆ ಮನೆಯಲ್ಲೂ ಸ್ಮಾರ್ಟ್ ಫೋನ್ ಗಳಿದ್ದು ಬಹಳಷ್ಟು ಜನ ವಿಡಿಯೋ ಮಾಡಿಕೊಂಡಿದ್ರೂ ಅದನ್ನ ಹುಡುಕಿ ಹುಡುಕಿ ಡಿಲಿಟ್ ಮಾಡಿಸಿ ಎಲ್ಲಿಯೂ ಒಂದು ವಿಡಿಯೋ ಅಗಲೀ ಅಥವಾ ಒಂದೇ ಒಂದು ಫೋಟೊ ಕೂಡ ವೈರಲ್ ಆಗದಂತೆ ನೋಡಿಕೊಂಡಿರುತ್ತಾರೆ. ಇದರ ಜತೆಗೆ ಮಧ್ಯರಾತ್ರಿಯಾದ್ರೂ ಒಂದು ಕ್ಷಣವೂ ತಡ ಮಾಡದೇ ಸ್ಥಳಕ್ಕೆ ಹೋಗಿ ತಮ್ಮ ಜೀವ ಪಣಕ್ಕಿಟ್ಟು ಮಹಿಳೆಯನ್ನ ರಕ್ಷಣೆ ಮಾಡಿ ಮಾನವೀಯತೆ ಮೆರೆದಿರುತ್ತಾರೆ. ಬರೀ ಮಹಿಳೆಯನ್ನ ಕಾಪಾಡುವುದಷ್ಟೇ ಅಲ್ಲದೇ ಏಳು ಜನ ಆರೋಪಿಗಳನ್ನ ಕೂಡ ಬೆಳಗ್ಗೆ ಅಗುವಷ್ಟರಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಇವರು ನಿಜವಾದ ಪೊಲೀಸರು! ಇವರಿಗೊಂದು ಪೊಲೀಸ್​​​ ಸೆಲ್ಯುಟ್.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ