ಉಡುಪಿ ನಾಲ್ವರ ಹತ್ಯೆ ಪ್ರಕರಣ: ಹತ್ಯೆಗೆ ನಿಖರ ಕಾರಣ ಬಿಚ್ಚಿಟ್ಟ ಹಂತಕ ಪ್ರವೀಣ, ಭಯಾನಕ ಸಂಗತಿಗಳು ಬಹಿರಂಗ
ಇಂದು ಪ್ರೇಮಿಗಳ ದಿನ ಉಡುಪಿಯಲ್ಲಿ ನಡೆದ ಬರ್ಬರ ಹತ್ಯೆ ಪ್ರಕರಣ ಬಗ್ಗೆ ಅನೇಕ ಭಯಾನಕ ಅಂಶ ಬಯಲಿಗೆ ಬಂದಿವೆ. ಅಯ್ನಾಜ್ ಜೊತೆ ಪ್ರವೀಣನಿಗೆ ಇದ್ದ ಸಂಬಂಧ ಸಹೋದರಿ ಅಫ್ನಾನ್ ಗೆ ಗೊತ್ತಿತ್ತು. ಹಾಗಾಗಿ ಅವರಿಬ್ಬರನ್ನೂ ಕೊಲೆ ಮಾಡಲು ಪ್ಲಾನ್ ಹಾಕಿಕೊಂಡು ಬಂದಿದ್ದ ಪ್ರವೀಣ್ ಚೌಗುಲೆ. ಆರೋಪಿ ಪ್ರವೀಣ್ ಚೌಗುಲೆ ಸ್ನ್ಯಾಪ್ ಚಾಟ್ ಮೂಲಕ ಅಯ್ನಾಜ್ ಮನೆಯ ವಿಳಾಸ ತಿಳಿದುಕೊಂಡು ಸೀದಾ ಆಕೆಯ ಮನಗೆ ಎಂಟ್ರಿ ಕೊಟ್ಟಿದ್ದ. ಮೊಬೈಲ್ flight modeಗೆ ಹಾಕಿ ತನ್ನ ಮನೆಯಲ್ಲಿಟ್ಟು ಅಯ್ನಾಜ್ ಮನೆಗೆ ಬಂದಿದ್ದ.
ಉಡುಪಿಯಲ್ಲಿ ನಡೆದ ನಾಲ್ವರ ಬರ್ಬರ ಹತ್ಯೆ ಪ್ರಕರಣ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಘಟನೆ ನಡೆದು 90 ದಿನಗಳು ಪೂರ್ಣಗೊಂಡು ಚಾರ್ಜ್ ಶೀಟ್ ನ್ನು ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಹೌದು ಉಡುಪಿಯ ನೇಜಾರು ಸಮೀಪದ ತೃಪ್ತಿ ಲೇ ಔಟ್ ನಲ್ಲಿ ದೀಪಾವಳಿಯ ದಿನವೇ ತಾಯಿ ಮತ್ತು ಮಕ್ಕಳ ಭೀಕರ ಹತ್ಯೆ ನಡೆದಿತ್ತು.. ದುಷ್ಕರ್ಮಿ ಚೂರಿಯಿಂದ ಇರಿದು ತಾಯಿ ಹಾಗೂ ಆಕೆಯ ಮೂವರು ಮಕ್ಕಳನ್ನು ಕೊಂದು ಹಾಕಿದ ಪ್ರಕರಣ ಕಂಡು ನಾಡಿಗೆ ನಾಡೇ ಬೆಚ್ಚಿಬಿದ್ದಿತ್ತು. ಪೊಲೀಸ್ ತನಿಖೆ ಪೂರ್ಣಗೊಂಡಿದ್ದು 244 ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಎಫ್ ಎಸ್ ಎಲ್ ವರದಿಯೂ ಕೈ ಸೇರಿದೆ.
ಇಷ್ಟಕ್ಕೂ ಹಂತಕ ಆರೋಪಿ ಪ್ರವೀಣ್ ಚೌಗುಲೆ ಸರಣಿ ಹತ್ಯೆಗಳ ಬಗ್ಗೆ ಭಯಾನಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾನೆ. ಇದೆಲ್ಲಾ ಪೊಲೀಸರ ಚಾರ್ಜ್ ಶೀಟ್ ನಲ್ಲಿ ಬಹಿರಂಗವಾಗಿದೆ. ಅಸಲು ಕಾರಣಗಳು ಹೀಗಿದೆ:
ಉಡುಪಿಯ ಒಂದೇ ಕುಟುಂಬದ ನಾಲ್ವರ ಹತ್ಯೆಗೆ ಚಾರ್ಜ್ ಶೀಟ್ ನಲ್ಲಿ ಕಾರಣ ಬಹಿರಂಗಗೊಂಡಿದೆ. ಆರೋಪಿ ಪ್ರವೀಣ್ ಚೌಗುಲೆ ಮತ್ತು ಅಯ್ನಾಜ್ ನಡುವೆ ಆತ್ಮೀಯ ಗೆಳೆತನವಿತ್ತಂತೆ. ಇಬ್ಬರ ಗೆಳೆತನದ ಬಗ್ಗೆ ಪ್ರವೀಣ್ ಪತ್ನಿಗೆ ಅನುಮಾನ ಕಾಡಿತ್ತು. ಈ ಅನುಮಾನದಿಂದಾಗಿ ಪ್ರವೀಣ್ ಚೌಗುಲೆ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು. ವಿಚಾರ ತಿಳಿದ ಅಯ್ನಾಜ್ ಸಂಪರ್ಕ ಕಡಿದುಕೊಳ್ಳಲು ತೀರ್ಮಾನಿಸಿದ್ದಳು. ಇದೇ ವೇಳೆ ಮೃತ ಅಯ್ನಾಜ್ ಪ್ರಿಯಕರ ಕತಾರ್ ನಿಂದ ವಾಪಸ್ ಬಂದಿದ್ದ. 2023 ಅಕ್ಟೋಬರ್ ತಿಂಗಳ ಕೊನೆಯ ವಾರದಲ್ಲಿ ವಾಪಸ್ ಆಗಿದ್ದ ಪ್ರಿಯಕರನ ಜೊತೆ ಮದುವೆಯಾಗುವುದಾಗಿ ಪ್ರವೀಣನಿಗೆ ಅಯ್ನಾಜ್ ಹೇಳಿದ್ದಳು.
ಅಯ್ನಾಜ್ ಮತ್ತು ಪ್ರಿಯಕರನ ಗೆಳೆತನದಿಂದ ಪ್ರವೀಣ್ ಚೌಗುಲೆ ವಿಪರೀತ ಸಿಟ್ಟಾಗಿದ್ದ. ನನಗೆ ಸಿಗದ ಅಯ್ನಾಜ್ ಯಾರಿಗೂ ಸಿಗಬಾರದು ಎಂದು ಕೊಲೆಗೈಯ್ಯಲು ನಿರ್ಧಾರ ಮಾಡಿದ. ಪೊಲೀಸರ ತನಿಖೆಯಲ್ಲಿ ಸರಣಿ ಹಂತಕ ಆರೋಪಿ ಪ್ರವೀಣ ಈ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾನೆ.
ಗಮನಾರ್ಹವೆಂದರೆ ಇದೇ ಪ್ರವೀಣ ಈ ಹಿಂದೆಯೂ ಮದುವೆಯಾಗಿದ್ದು ಮುಸ್ಲಿಂ ಯುವತಿಯನ್ನು! ಫ್ಯಾಮಿಲಿ ಫ್ರೆಂಡ್ ಮುಸ್ಲಿಂ ಯುವತಿಯ ಜೊತೆಯೇ ಪ್ರವೀಣ್ ಚೌಗುಲೆ ಮದುವೆಯಾಗಿದ್ದ. 2009ರಲ್ಲಿ ಕದ್ರಿ ದೇವಸ್ಥಾನದಲ್ಲಿ ರಿಯಾ ಎಂಬಾಕೆಯ ಕೈ ಹಿಡಿದಿದ್ದ ಪ್ರವೀಣ್. ಮದುವೆಯ ನಂತರ ರಿಯಾ ಹೆಸರು ಪ್ರಿಯಾ ಆಗಿ ಬದಲಾವಣೆಯಾಗಿತ್ತು.
Also Read: ಉಡುಪಿ ನಾಲ್ವರ ಬರ್ಬರ ಹತ್ಯೆ ಪ್ರಕರಣ ನಿರ್ಣಾಯಕ ಹಂತಕ್ಕೆ, ತಾಜಾ ಏನು?
ಇನ್ನು ಇತ್ತ, ಅಯ್ನಾಜ್ ಜೊತೆ ಪ್ರವೀಣನಿಗೆ ಇದ್ದ ಸಂಬಂಧ ಸಹೋದರಿ ಅಫ್ನಾನ್ ಗೆ ಗೊತ್ತಿತ್ತು. ಹಾಗಾಗಿ ಅವರಿಬ್ಬರನ್ನೂ ಕೊಲೆ ಮಾಡಲು ಪ್ಲಾನ್ ಹಾಕಿಕೊಂಡು ಬಂದಿದ್ದ ಪ್ರವೀಣ್ ಚೌಗುಲೆ. ಆರೋಪಿ ಪ್ರವೀಣ್ ಚೌಗುಲೆ ಸ್ನ್ಯಾಪ್ ಚಾಟ್ ಮೂಲಕ ಅಯ್ನಾಜ್ ಮನೆಯ ವಿಳಾಸ ತಿಳಿದುಕೊಂಡು ಸೀದಾ ಆಕೆಯ ಮನಗೆ ಎಂಟ್ರಿ ಕೊಟ್ಟಿದ್ದ. ಮೊಬೈಲ್ flight modeಗೆ ಹಾಕಿ ತನ್ನ ಮನೆಯಲ್ಲಿಟ್ಟುಬಿಟ್ಟು, ಕೃತ್ಯ ಎಸಗಿ ವಾಪಸ್ ಮಂಗಳೂರಿಗೆ ಬಂದಿದ್ದ ಆರೋಪಿ!
ನವೆಂಬರ್ 12 ರಂದು ಏಕಾಏಕಿ ಮನೆಗೆ ನುಗ್ಗಿದ್ದ ಆರೋಪಿ ಪ್ರವೀಣ್ ಚೌಗುಲೆ, ತಾಯಿ ಹಸೀನಾ ಮತ್ತು ಆಕೆಯ ಮೂವರು ಮಕ್ಕಳಾದ ಆಫ್ನಾನ್, ಐನಾಜ್ ಹಾಗೂ ಆಸೀಮ್ ರನ್ನು ಚೂರಿಯಿಂದ ಇರಿದು ಕೊಂದಿದ್ದ. ಈ ಪೈಕಿ ಐನಸ್ ಬಗ್ಗೆ ಏಕಮುಖ ಪ್ರೀತಿ ಹೊಂದಿದ್ದ ಪ್ರವೀಣ್ ಆಕೆ ಒಪ್ಪದೇ ಹೋದಾಗ ಈ ಕೃತ್ಯಕ್ಕೆ ಮುಂದಾಗಿದ್ದ. ಪ್ರಕರಣ ಸಂಬಂಧ 8 ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದ ಪೊಲೀಸರು, ಘಟನೆ ನಡೆದು ಎರಡು ದಿನಗಳಲ್ಲಿ ಆರೋಪಿಯನ್ನು ಬೆಳಗಾವಿಯಲ್ಲಿ ಬಂಧಿಸಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Wed, 14 February 24