ಸಿಎಂ ಕ್ಷೇತದಲ್ಲಿ ನಿವೃತ್ತ ಶಿಕ್ಷಕ ಹತ್ಯೆ ಕೇಸ್​, ಮದುವೆಯಾದರೂ ಅದೇ ಕುಟುಂಬದ ಟೆಕ್ಕಿ ಮೇಲೆ ಕ್ರಷ್! ವಾಮಾಚಾರ ಪೋಟೋದಿಂದ ಸಿಕ್ಕಿಬಿದ್ದ ಪೊಲೀಸಪ್ಪ!

ನಿವೃತ್ತ ಶಿಕ್ಷಕ ನಾಗರಾಜರ ಕೊಲೆ ಮಾಡಿದ್ದು ಅವರ ಪತ್ನಿಯ ಅಕ್ಕನ ಮಗಳ ಗಂಡ ಮಹೇಶ್. ಮಹೇಶ್ ಡಿಎಆರ್ ಪೊಲೀಸ್. ಮದುವೆಯ‌ ದಿನವೇ ನಾಗರಾಜರ ಸಾಫ್ಟವೇರ್ ಇಂಜಿನಿಯರ್ ಮಗಳ ಮೇಲೆ ಕ್ರಷ್ ಆಗಿದೆ. ಅಂದಿನಿಂದ ಆತ ಟೆಕ್ಕಿಯ ಹಿಂದೆ ಬಿದ್ದಿದ್ದ. ಎಷ್ಟರಮಟ್ಟಿಗೆ ಕ್ರಷ್ ಆಗಿದ್ದ ಅಂದ್ರೆ ಹೇಗಾದರೂ ಮಾಡಿ‌ ಆಕೆಯನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ವಶೀಕರಣ ಪೂಜೆ ಸಹ ಮಾಡಿಸಿದ್ದ!

ಸಿಎಂ ಕ್ಷೇತದಲ್ಲಿ ನಿವೃತ್ತ ಶಿಕ್ಷಕ ಹತ್ಯೆ ಕೇಸ್​, ಮದುವೆಯಾದರೂ ಅದೇ ಕುಟುಂಬದ ಟೆಕ್ಕಿ ಮೇಲೆ ಕ್ರಷ್! ವಾಮಾಚಾರ ಪೋಟೋದಿಂದ ಸಿಕ್ಕಿಬಿದ್ದ ಪೊಲೀಸಪ್ಪ!
ಸಿಎಂ ಕ್ಷೇತದಲ್ಲಿ ಮರ್ಡರ್ ಮಿಸ್ಟರಿ, ರಂಗೋಲಿ ಕೆಳಗೆ ನುಗ್ಗಿ ಪಾತಕಿ ಪೊಲೀಸಪ್ಪನನ್ನು ಹಿಡಿದ ವರುಣ ಪೊಲೀಸರು!
Follow us
ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on:Feb 14, 2024 | 10:29 AM

ಇದು ಕೇವಲ ಸ್ಟೋರಿಯಲ್ಲ. ಪೊಲೀಸರ ವೃತ್ತಿಪರತೆ, ಬದ್ದತೆ ಹಾಗೂ ದಕ್ಷತೆಗೆ ಹಿಡಿದ ಕೈಗನ್ನಡಿ. ಇಲ್ಲಿ ಕಾನೂನು ರಕ್ಷಕನೇ ಕಾನೂನು ಭಕ್ಷಕನಾಗಿದ್ದ‌. ಕಾನೂನಿನ ಆಳ ಅಗಲವನ್ನು ಅರಿತು ಕೊಲೆ‌ ಮಾಡಿ ತಪ್ಪಿಸಿಕೊಳ್ಳಲು ಚಾಪೆ ಕೆಳಗೆ ನುಸುಳಿದ್ದ. ಆದ್ರೆ ನಮ್ಮ ಮೈಸೂರು ಜಿಲ್ಲಾ ಪೊಲೀಸರು ರಂಗೋಲಿ ಕೆಳಗೆ ನುಗ್ಗಿ ಪಾತಕಿಯನ್ನು (DAR policeman) ಹೆಡೆಮುರಿ ಕಟ್ಟಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಿ ಜೈಲಿಗೆ ಕಳುಹಿಸುವ ಮೂಲಕ ಅಪರಾಧಿ ತಮ್ಮದೇ ಇಲಾಖೆಯವನೇ ಆಗಿದ್ದರೂ ಆತ ಅಪರಾಧಿಯೇ ಎಂಬ ಮಹತ್ವದ ಸಂದೇಶವನ್ನು ಸಮಾಜಕ್ಕೆ ನೀಡಿದ ಮೈಸೂರು ಜಿಲ್ಲಾ ಪೊಲೀಸರು ಟಿವಿ9 ಸೆಲ್ಯೂಟ್‌ಗೆ ಭಾಜನರಾಗಿದ್ದಾರೆ. ಅದು ಸಿಎಂ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರು, ಅದರಲ್ಲೂ ಅವರ ಹುಟ್ಟೂರು ವರುಣ ಕ್ಷೇತ್ರದಲ್ಲಿ ನಡೆದಿದ್ದ ಕೊಲೆ ಪ್ರಕರಣ. ಮೈಸೂರು ತಾಲ್ಲೂಕಿನ ವರುಣ ಪೊಲೀಸ್ ಠಾಣೆಯ (Varuna Police) ಸಬ್ ಇನ್ಸಪೆಕ್ಟರ್ ಚೇತನ್ ಎಂದಿನಂತೆ ತಮ್ಮ ಠಾಣೆಯಲ್ಲಿದ್ದಾಗ ವರುಣ ಪೊಲೀಸ್ ಠಾಣಾ ವ್ಯಾಪ್ತಿಯ ದೇವಲಾಪುರ ಗ್ರಾಮದ ರಸ್ತೆ ಬದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿರುವ ಬಗ್ಗೆ (retired teacher murder) ಮಾಹಿತಿ ಸಿಕ್ಕಿದೆ.

ತಕ್ಷಣ ಅಲರ್ಟ್ ಆದ ಚೇತನ್ ತಮ್ಮ ಸಿಬ್ಬಂದಿ ಜೊತೆ ಶವ ಪತ್ತೆಯಾದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಶವ ನೋಡುತ್ತಿದ್ದಂತೆ ಇದೊಂದು ಕೊಲೆ ಪ್ರಕರಣ ಅನ್ನೋದು ಚೇತನ್ ಅವರಿಗೆ ಗೊತ್ತಾಗಿದೆ. ಸುಮಾರು 60 ವರ್ಷದ ವೃದ್ದನನ್ನು ಯಾರೋ ಕೊಲೆ ಮಾಡಿ ತಂದು ಇಲ್ಲಿ ಹಾಕಿದ್ದರು. ಮೈ ಮೇಲೆ ರಕ್ತದ ಕಲೆಗಳಿದ್ದವು. ತಕ್ಷಣ ಚೇತನ್ ತಮ್ಮ ಮೇಲಧಿಕಾರಿಗಳಿಗೆ ವಿಚಾರ ತಿಳಿಸಿ ಶವದ ಗುರುತು ಪತ್ತೆಗೆ ಮುಂದಾಗಿದ್ದಾರೆ.

ತನಿಖೆ ಆರಂಭಿಸಿದ ಚೇತನ್ ಅವರು ಅತ್ಯಂತ ಸಮರ್ಪಕವಾಗಿ ಇದರ ಜಾಡು ಹಿಡಿದು ಸಾಗಿದ ಕಾರಣ ಮೃತರ ಗುರುತು ಸುಲಭವಾಗಿ ಪತ್ತೆಯಾಗಿದೆ. ಅಲ್ಲಿ ಸಾವನ್ನಪ್ಪಿದ್ದವರು ನಾಗರಾಜ್. ನಾಗರಾಜ್ ನಿವೃತ್ತ ಶಿಕ್ಷಕರಾಗಿದ್ದರು. ವಯಸ್ಸು 70. ಮೂಲತಃ ಚಾಮರಾಜನಗರ ತಾಲ್ಲೂಕು ದೇವಲಪುರದವರು. ಹಾಲಿ ನಂಜನಗೂಡಿನಲ್ಲಿ ಪತ್ನಿ, ಮಗ ಮತ್ತು ಮಗಳ ಜೊತೆ ವಾಸವಾಗಿದ್ದರು.

ಪತ್ನಿ ಗೃಹಿಣಿ ಮಗ ಹಾಗೂ ಮಗಳು ಸಾಫ್ಟವೇರ್ ಇಂಜಿನಿಯರ್ ಆಗಿದ್ದರು. ನಾಗರಾಜ್ ತುಂಬಾ ಶಾಂತ ಸ್ವಭಾವದವರು. ಯಾರ ಜೊತೆಯೂ ಜಗಳ ಮಾಡಿಕೊಂಡವರಲ್ಲ. ತಾವಾಯ್ತು ತಮ್ಮ ಕುಟುಂಬವಾಯ್ತು ಅಂತಾ ಇದ್ದವರು. ಆಸ್ತಿ ವಿಚಾರವಾಗಲಿ ಅಥವಾ ಹಣಕಾಸು ವಿಚಾರವಾಗಲಿ ನಾಗರಾಜು ಅವರಿಗೆ ಯಾವುದೇ ವ್ಯಾಜ್ಯಗಳಿರಲಿಲ್ಲ.

ಹೀಗಾಗಿ ಅವರ ಕೊಲೆ ಯಾರು ಮಾಡಿರಬಹುದೆಂಬುದನ್ನು ಪತ್ತೆ ಹಚ್ಚುವುದು‌ ಪೊಲೀಸರಿಗೆ ಸವಾಲಾಗಿತ್ತು. ಈ ಘಟನೆ ನಡೆದಿದ್ದು ಜುಲೈ 2023ರಲ್ಲಿ. ಸುಮಾರು 6 ತಿಂಗಳ ಸತತ ಪರಿಶ್ರಮದ ನಂತರ ನಾಗರಾಜು ಅವರನ್ನು ಕೊಲೆ‌ ಮಾಡಿದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಆರೋಪಿ ಏಕೆ ಹೇಗೆ ಕೊಲೆ ಮಾಡಿದ ಅನ್ನೋ ರೋಚಕ‌ ಕಥೆಯನ್ನು ಹೇಳುವ ಮುನ್ನ ಪೊಲೀಸರಿಗೆ ಇದು ಏಕೆ ಸವಾಲಿನದ್ದಾಗಿತ್ತು ಅನ್ನೋದನ್ನು ನೀವು ತಿಳಿಯಬೇಕು.

ನಿವೃತ್ತ ಶಿಕ್ಷಕ ನಾಗರಾಜ ಅವರ ಕೊಲೆ ಮಾಡಿದವನು ಒಬ್ಬ ಪೊಲೀಸ್ ಆಗಿದ್ದ!

ನಾಗರಾಜ ಅವರನ್ನು ಕೊಲೆ ಮಾಡಿದವನು ಒಬ್ಬ ಪೊಲೀಸ್ ಆಗಿದ್ದ! ಅಚ್ಚರಿಯಾದ್ರೂ ಇದು ಸತ್ಯ. ಜೊತೆಗೆ ಆತ ಕೊಲೆಯಾದ ನಾಗರಾಜು ಅವರ ನಿಕಟ ಸಂಬಂಧಿಯಾಗಿದ್ದ. ಕೊಲೆಗೂ ಮುನ್ನ ಕೊಲೆಯಾದ ನಂತರವೂ ಆತ ನಾಗರಾಜು ಕುಟುಂಬದ ಜೊತೆಗಿದ್ದ. ಕೊಲೆಯಾದ ನಂತರ ಆತನೇ ನಿಂತು ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದ, ಪೊಲೀಸರ ಪ್ರತಿ ತನಿಖೆಗೂ ಸಾಥ್ ನೀಡಿದ್ದ.

6 ತಿಂಗಳು ಕಾಲ ಈತ ಪೊಲೀಸರ ಜೊತೆಯಲ್ಲಿ ಓಡಾಡಿಕೊಂಡಿದ್ದರೂ ಸಹ ಈತನೇ ಕೊಲೆಗಾರ ಅಂತಾ ಪೊಲೀಸರಿಗೆ ಸಣ್ಣ ಅನುಮಾನ ಕೂಡ ಬಂದಿರಲಿಲ್ಲ. ಇದಕ್ಕೆ ಕಾರಣ ಕೊಲೆ, ಕೊಲೆ ಮಾಡಿದ ನಂತರ ಶವವನ್ನು ಸಾಗಿಸುವುದು, ನಂತರದ ಎಲ್ಲಾ ಹಂತಗಳಲ್ಲೂ ತಪ್ಪಿಸಿಕೊಳ್ಳಲು ಪೊಲೀಸ್ ಶೈಲಿಯಲ್ಲೇ ಎಲ್ಲವನ್ನೂ ಪ್ಲ್ಯಾನ್ ಮಾಡಿದ್ದ. ಕೊಲೆ ಮಾಡಿದ ಸ್ಥಳದಲ್ಲಿ ಎಲ್ಲೂ ಮೊಬೈಲ್ ಬಳಕೆ ಮಾಡಿರಲಿಲ್ಲ. ಈ ಸಂದರ್ಭದಲ್ಲಿ ಎಲ್ಲಾ ಕಡೆಗೂ ಇಂಟರನೆಟ್ ಕಾಲ್ ಮಾಡಿದ್ದ. ಕೊಲೆ ಮಾಡಿದ ಸ್ಥಳದಲ್ಲಿ ಯಾವುದೇ ಕುರುಹು ಸಹ ಬಿಟ್ಟಿರಲಿಲ್ಲ. ಆದರೂ ಆತ ಚಾಪೆ ಕೆಳಗೆ ನುಸುಳಿದ್ರೆ ತನಿಖೆ‌ ಮಾಡಿದ ಪೊಲೀಸರು ರಂಗೋಲಿ ಕೆಳಗೆ ನುಗ್ಗಿ ಆರೋಪಿಯನ್ನು ಬಂಧಿಸಿದ್ದಾರೆ.

ನಿವೃತ್ತ ಶಿಕ್ಷಕ ನಾಗರಾಜ್ ಅವರನ್ನು‌ ಕೊಲೆ ಮಾಡಿದ್ದು ನಾಗರಾಜ್ ಅವರ ಪತ್ನಿಯ ಅಕ್ಕನ ಮಗಳ ಗಂಡ ಮಹೇಶ್. ಮಹೇಶ್ ಡಿಎಆರ್ ಪೊಲೀಸ್. ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ. ಮಹೇಶ್ ಮೂಲತಃ ಗುಂಡ್ಲುಪೇಟೆ ತಾಲ್ಲೂಕಿನ ಹಸುಗುಲಿ ಗ್ರಾಮದವನು. ಈತ 8 ವರ್ಷದ ಹಿಂದೆ ಕೊಲೆಯಾದ ನಾಗರಾಜ್ ಅವರ ಪತ್ನಿಯ ಸಹೋದರಿ ಮಗಳನ್ನು ಮದುವೆಯಾಗಿದ್ದ.

ಮದುವೆಯ‌ ದಿನವೇ ಮಹೇಶ್‌ಗೆ ಕೊಲೆಯಾದ ನಾಗರಾಜ್ ಅವರ ಸಾಫ್ಟವೇರ್ ಇಂಜಿನಿಯರ್ ಮಗಳ ಮೇಲೆ ಕ್ರಷ್ ಆಗಿದೆ. ಅಂದಿನಿಂದ ಆತ ನಾಗರಾಜ್ ಅವರ ಮಗಳ ಹಿಂದೆ ಬಿದ್ದಿದ್ದ. ಮದುವೆಯಾಗಿ ಮಗುವಾದರೂ ಮಹೇಶನ ಕ್ರಷ್ ಕಡಿಮೆಯಾಗಿರಲಿಲ್ಲ. ಮಹೇಶ್ ಈ ವಿಚಾರದಲ್ಲಿ ಎಷ್ಟರಮಟ್ಟಿಗೆ ಕ್ರಷ್ ಆಗಿದ್ದ ಅಂದ್ರೆ ಹೇಗಾದರೂ ಮಾಡಿ‌ ಆಕೆಯನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ವಶೀಕರಣ ಪೂಜೆ ಸಹಾ ಮಾಡಿಸಿದ್ದ!

ಒಂದು ಕಡೆಯಲ್ಲ ಹಲವು ಕಡೆ ವಶೀಕರಣ ಪೂಜೆ ಮಾಡಿಸಿದ್ದ. ಅದು ಇಲ್ಲಿಂದ ಸಾವಿರಾರು ಕಿಲೋ ಮೀಟರ್ ದೂರದ ಅಸ್ಸಾಂ ಗುವಾಹಟಿಯ ಕಾಮಾಕ್ಯ ದೇಗುಲದಲ್ಲಿ ಹಾಗೂ ಶಿರಾದ ಸಾಗದಾಟು ಗ್ರಾಮದ ಭೂತಪ್ಪ ದೇಗುಲದಲ್ಲಿ ವಶೀಕರಣ ಪೂಜೆ ಮಾಡಿಸಿದ್ದ. ಒಟ್ಟು 108 ದಿನ ಪೂಜೆ ಮಾಡಿಸಿದ್ರೆ ಆಕೆ ಶಾಶ್ವತವಾಗಿ ತನ್ನವಳಾಗುತ್ತಾಳೆ ಅನ್ನೋದು ಮಹೇಶ್ ನಂಬಿಕೆಯಾಗಿತ್ತು.

ಅದಕ್ಕಾಗಿ ಕುದುರೆ ರಕ್ತವನ್ನೆಲ್ಲಾ ತರಿಸಿದ್ದಾನೆ. ಆದ್ರೆ ಪೂಜೆ ಮುಗಿಯುತ್ತಾ ಬಂದರೂ ಆತ ಅಂದುಕೊಂಡತೆ ಏನೂ ಆಗಿರಲಿಲ್ಲ. ಮತ್ತೊಂದು ಕಡೆ ಈತನ ಪೂಜೆ ಮುಗಿಯುವ ಮುನ್ನವೇ ಸಾಫ್ಟವೇರ್ ಇಂಜಿನಿಯರ್ ಆಗಿದ್ದ ಆಕೆ ಜರ್ಮನಿಗೆ ಹೋಗಲು ಸಿದ್ದವಾಗಿದ್ದಳು. ಈ ವಿಚಾರ ಮಹೇಶನ ತಲೆ ಕೆಡುವಂತೆ ಮಾಡಿದೆ. ಹೇಗಾದರೂ ಮಾಡಿ ಆಕೆಯನ್ನು ಜರ್ಮನಿಗೆ ಹೋಗದಂತೆ ತಡೆಯಬೇಕೆಂದು ಯೋಚಿಸತೊಡಗಿದ್ದಾನೆ.

ಮಗಳ ವಿದೇಶ ಪ್ರವಾಸ ನಿಲ್ಲಿಸಲು ಅಪ್ಪನ ಕೊಲೆ!

ಹೇಳಿ ಕೇಳಿ ಮಹೇಶ್ ಪೊಲೀಸ್. ಹೀಗಾಗಿ ಆತ ತನ್ನದೇ ಧಾಟಿಯಲ್ಲಿ ಪ್ಲ್ಯಾನ್ ಮಾಡಿದ್ದಾನೆ. ಮಗಳು ಜರ್ಮನಿಗೆ ಹೋಗುವುದನ್ನು ತಡೆಯುವುದು ಅವರ ತಂದೆಯ ಸಾವಿನಿಂದ ಮಾತ್ರವೇ ಸಾಧ್ಯ ಅಂತಾ ಅರ್ಥ ಮಾಡಿಕೊಂಡ ಮಹೇಶ್ ಆಕೆಗಾಗಿ ಅವರ ಅಪ್ಪನನ್ನೇ ಮುಗಿಸಲು ಸಿದ್ದವಾಗಿದ್ದಾನೆ. ಹೀಗೆ ನಿರ್ಧರಿಸಿದವನೇ ನಾಗರಾಜ್ ಅವರ ಚಲನವಲನದ ಮೇಲೆ ಕಣ್ಣಿಟ್ಟಿದ್ದಾನೆ.

ಅದೊಂದು ದಿನ ನಾಗರಾಜ್ ಒಬ್ಬರೇ ಇರುವಾಗ ತನ್ನ ಸ್ನೇಹಿತ ಇಸ್ಮಾಯಿಲ್ ಜೊತೆ ನಾಗರಾಜ್ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಕಾರಿನಲ್ಲೇ ಕುತ್ತಿಗೆಗೆ ಹಗ್ಗ ಬಿಗಿದು ಕುತ್ತಿಗೆ ಕೂಯ್ದು ನಾಗರಾಜ್ ಕೊಲೆ ಮಾಡಿ ವರುಣ ಪೊಲೀಸ್ ಠಾಣಾ ವ್ಯಾಪ್ಯಿಯ ದೇವಲಾಪುರ ಬಳಿ ಮೃತದೇಹ ಬಿಸಾಕಿ ಹೋಗಿದ್ದಾನೆ. ಇತ್ತ ಕೊಲೆ ಮಾಡಿ ಮನೆಗೆ ಹೋಗಿ ಆರಾಮಾಗಿದ್ದಾನೆ. ಅಷ್ಟೇ ಅಲ್ಲ ತಾನೇ ಮುಂದೆ ನಿಂತು ಪೊಲೀಸರಿಗೂ ದೂರು ಕೊಡಿಸಿದ್ದಾ‌ನೆ. ಪೊಲೀಸರ ಜೊತೆ ತನಿಖೆಯ ಭಾಗವಾಗಿದ್ದಾನೆ.

ಕುದುರೆ ರಕ್ತ ವಾಮಾಚಾರದ ಪೋಟೋದಿಂದ ಸಿಕ್ಕಿ ಬಿದ್ದ ಪಾಪಿ

ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಿದ ಮೈಸೂರು ಜಿಲ್ಲಾ ಎಸ್ ಪಿ ಸೀಮಾ ಲಾಟ್ಕರ್ ಒಟ್ಟು ನಾಲ್ಕು ತಂಡವನ್ನು ರಚಿಸಿದರು. ವರುಣ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಚೇತನ್, ಸೆನ್ ಇನ್ಸಪೆಕ್ಟರ್ ಪುರುಷೋತ್ತಮ, ಇನ್ಸಪೆಕ್ಟರ್‌ಗಳಾದ ಸ್ವರ್ಣ ಶಿವನಂಜ ಶೆಟ್ಟಿ‌ ಹಾಗೂ ಟೆಕ್ನಿಕಲ್ ವಿಭಾಗದ ಎಎಸ್.ಐ ವಸಂತಕುಮಾರ್ ಒಳಗೊಂಡ ರಚನೆಯಾಗುತ್ತದೆ.

ತನಿಖೆ ಆರಂಭಿಸಿದ ವೇಳೆ ಮಹೇಶ್ ಸಹಾ ತಾನು ಸಹಾಯ ಮಾಡುವುದಾಗಿ ಹೇಳಿ ತಂಡವನ್ನು ಸೇರಿಕೊಳ್ಳುತ್ತಾನೆ. ಈ ಮೂಲಕ ಪೊಲೀಸರ ತನಿಖೆಯ ಪ್ರತಿ ಹಂತದ ಮಾಹಿತಿ ಕಲೆ ಹಾಕುತ್ತಾನೆ. ಪೊಲೀಸರ ಸಾಕ್ಷ್ಯವನ್ನು ಒಂದೊಂದೆ ನಾಶ ಮಾಡುತ್ತಿರುತ್ತಾನೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಿದ ಪೊಲೀಸರು ಕೊನೆಗೆ ಮಹೇಶ್ ಹೆಗಲ ಮೇಲೆ ಕೈ ಹಾಕುತ್ತಾರೆ. ಆದರೆ ಮಹೇಶ್ ಸಾರಾಸಗಟಾಗಿ‌ ತನ್ನ ಮೇಲಿನ ಆರೋಪವನ್ನು ನಿರಾಕರಿಸುತ್ತಾನೆ. ಯಾವಾಗ ಪೊಲೀಸರು ತಮ್ಮ ಭಾಷೆಯಲ್ಲಿ ವಿಚಾರಿಸಿದರೋ ತಪ್ಪು ಒಪ್ಪಿಕೊಂಡಿದ್ದಾನೆ. ಎಲ್ಲಾ ವಿಚಾರಗಳನ್ನು ಬಾಯಿ ಬಿಟ್ಟಿದ್ದಾನೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:24 am, Wed, 14 February 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ