ಬೆಂಗಳೂರು: ಭಿಕ್ಷುಕನ ಯಡವಟ್ಟಿಗೆ ಬೆಚ್ಚಿಬಿದ್ದ ಇಡೀ ಏರಿಯಾ, ಸ್ಥಳಕ್ಕೆ ಬಂದಿತ್ತು ಬಾಂಬ್ ಸ್ಕ್ವಾಡ್

ಫೆಬ್ರವರಿ 12ರ ಬೆಳಿಗ್ಗೆ ಹತ್ತು ಘಂಟೆ ಸುಮಾರಿಗೆ ಮಿನರ್ವ ಸರ್ಕಲ್ ಬಳಿಯ ಕೋಟಕ್ ಮಹೇಂದ್ರ ಬ್ಯಾಂಕ್​ ಎಟಿಎಂನ ಪಕ್ಕದಲ್ಲಿ ಭಿಕ್ಷುಕನೋರ್ವ ಇಟ್ಟು ಹೋಗಿದ್ದ ಬಾಕ್ಸ್​ನಿಂದ ಭಾರೀ ಗೊಂದಲ ಸೃಷ್ಟಿಯಾಗಿತ್ತು. ಆ ಬಾಕ್ಸ್​ಗಳಲ್ಲಿ ಏನಿದೆ ಎಂದು ಪತ್ತೆ ಹಚ್ಚಲು ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಆಗಮಿಸಿತ್ತು. ಆಬಾಕ್ಸ್​ಗಳನ್ನು ಸಾಮಾನ್ಯವಾಗಿ ಹಣ ತುಂಬಲು ಬಳಸುತ್ತಾರೆ. ಹೀಗಾಗಿ ಅನುಮಾನ ವ್ಯಕ್ತವಾಗಿ ಯಡವಟ್ಟು ನಡೆದಿದೆ.

ಬೆಂಗಳೂರು: ಭಿಕ್ಷುಕನ ಯಡವಟ್ಟಿಗೆ ಬೆಚ್ಚಿಬಿದ್ದ ಇಡೀ ಏರಿಯಾ, ಸ್ಥಳಕ್ಕೆ ಬಂದಿತ್ತು ಬಾಂಬ್ ಸ್ಕ್ವಾಡ್
ಕೋಟಕ್ ಮಹೇಂದ್ರ ಬ್ಯಾಂಕ್​ ಎಟಿಎಂನ ಪಕ್ಕದಲ್ಲಿ ಭಿಕ್ಷುಕನೋರ್ವ ಇಟ್ಟು ಹೋಗಿದ್ದ ಬಾಕ್ಸ್​
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Feb 14, 2024 | 8:04 AM

ಬೆಂಗಳೂರು, ಫೆ.14: ಎಲ್ಲೆಂದರಲ್ಲಿ ಮಲಗಿ, ಅಲ್ಲಿ ಇಲ್ಲಿ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದ ಭಿಕ್ಷುಕನೊಬ್ಬನ (Beggar) ಯಡವಟ್ಟಿನಿಂದ ಇಡೀ ಏರಿಯಾದ ಜನರು ಆತಂಕಗೊಂಡಿದ್ದರು. ಬಾಂಬ್ ನಿಷ್ಕ್ರಿಯ ದಳ (Bomb Squad) ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿತ್ತು.ಒಂದು ಕ್ಷಣ ಎಲ್ಲರೂ ಉಸಿರು ಬಿಗಿ ಹಿಡಿಯುವಂತ ಸ್ಥಿತಿ ನಿರ್ಮಾಣವಾಗಿತ್ತು. ಎಟಿಎಂ ಮಷೀನ್ ಬಳಿ ಭಿಕ್ಷುಕ ಇಟ್ಟು ಹೋದ ಬಾಕ್ಸ್​ನಿಂದ ಭಾರೀ ಸಮಸ್ಯೆ ಉದ್ಭಾವಿಸಿತ್ತು. ಫೆಬ್ರವರಿ 12 ರಂದು ಮಿನರ್ವ ಸರ್ಕಲ್ ಬಳಿ ನಡೆದಿದ್ದ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಫೆಬ್ರವರಿ 12ರ ಬೆಳಿಗ್ಗೆ ಹತ್ತು ಘಂಟೆ ಸುಮಾರಿಗೆ ಮಿನರ್ವ ಸರ್ಕಲ್ ಬಳಿ ಹೈ ಡ್ರಾಮಾ ನಡೆದಿದೆ. ಭಿಕ್ಷುಕನೋರ್ವ ಕೋಟಕ್ ಮಹೇಂದ್ರ ಬ್ಯಾಂಕ್​ ಎಟಿಎಂನ ಪಕ್ಕದಲ್ಲಿ ಬಾಕ್ಸ್ ಇಟ್ಟು ಪರಾರಿಯಾಗಿದ್ದ. ಆ ಬಾಕ್ಸ್ ಗಳನ್ನು ಎಟಿಎಂ ಒಳಭಾಗದಲ್ಲಿ ಹಣವನ್ನು ತುಂಬಲು ಉಪಯೋಗ ಮಾಡಲಾಗುತ್ತೆ. ಇಂತಹ ಮೂರು ಬಾಕ್ಸ್​ಗಳನ್ನು ಇಟ್ಟು ಭಿಕ್ಷುಕ ಓಡಿ ಹೋಗಿದ್ದ. ಎಟಿಎಂ ಬಳಿ ಬಾಕ್ಸ್ ಇರುವುದನ್ನು ಗಮನಿಸಿದ ಸೆಕ್ಯೂರಿಟಿ ಗಾರ್ಡ್​ಗೆ ಅನುಮಾನ ಹುಟ್ಟಿಕೊಂಡಿತ್ತು. ಒಂದು ಕ್ಷಣ ಶಾಕ್​ಗೆ ಒಳಗಾಗಿದ್ದು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕರೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಸ್ಥಳಕ್ಕೆ ಧಾವಿಸಿದರು.

ಇದನ್ನೂ ಓದಿ: ಮಂಡ್ಯದಲ್ಲಿ ವಿಚಾರಣೆ ನೆಪದಲ್ಲಿ ಮಹಿಳೆ ಮೇಲೆ PSI ಹಲ್ಲೆ; ಮಹಿಳೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಸ್ಥಳಕ್ಕೆ ಬಂದ ಪೊಲೀಸರಿಗೆ, ಎಟಿಎಂನಲ್ಲಿದ್ದ ಹಣವನ್ನು ಕಳ್ಳತನ ಮಾಡಿ ಬಾಕ್ಸ್ ಇಟ್ಟಿರಬೇಕು. ಇಲ್ಲವಾದಲ್ಲಿ ಬಾಕ್ಸ್‌ನಲ್ಲಿ ಏನಾದ್ರು ಅನುಮಾನಾಸ್ಪದ ವಸ್ತುಗಳು ಇದೆಯಾ ಎಂಬ ಭಯ ಹುಟ್ಟಿಕೊಂಡಿತ್ತು. ಇದ್ರಿಂದ ಫುಲ್ ಅಲರ್ಟ್ ಆದ ಪೊಲೀಸರು ಏರಿಯಾ ತುಂಬ ಹೈ ಅಲರ್ಟ್ ಮಾಡಿದರು. ಬಾಂಬ್ ನಿಷ್ಕ್ರಿಯ ದಳ ಬಂದ ನಂತರ ಅಲ್ಲಿ ಏನು ಇಲ್ಲ ಎಂಬುವುದು ಪತ್ತೆಯಾಗಿದೆ. ಬಾಕ್ಸ್​ನಲ್ಲಿ ಏನೂ ಇಲ್ಲ. ಅವು ಖಾಲಿಯಾಗಿವೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಬೇರೊಂದು ಎಟಿಎಂ ಬಾಕ್​ನಲ್ಲಿದ್ದ ಬಾಕ್​ಗಳನ್ನು ಇಲ್ಲಿ ತಂದಿಟ್ಟಿದ್ದಾನೆಂದು ಅನುಮಾನ ವ್ಯಕ್ತವಾಗಿದೆ. ಸಿಸಿಟಿವಿಯಲ್ಲಿ ಭಿಕ್ಷುಕನ ಚಲನವಲನ ಪತ್ತೆಯಾಗಿದೆ. ಸದ್ಯ ಹಣ ತುಂಬುವ ಬಾಕ್ಸ್‌ ಎಲ್ಲಿಂದ ಬಂತು ಎಂಬುವುದೇ ಯಕ್ಷಪ್ರಶ್ನೆಯಾಗಿದೆ. ಸದ್ಯ ಪೊಲೀಸರು ಭಿಕ್ಷುಕನಿಗಾಗಿ ಹುಡುಕಾಡುತ್ತಿದ್ದು ತನಿಕೆ ಮುಂದುವರೆದಿದೆ. ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ