ಬೆಂಗಳೂರು: ಬೆಂಗಳೂರಿನ (Bengaluru) ಕಿಮ್ಸ್ (Kims) ವಿದ್ಯಾರ್ಥಿ ವಿಜಯ್ ಭಾರದ್ವಾಜ್ ಮತ್ತೆ ಸುದ್ದಿಯಾಗಿದ್ದು, ಮದ್ಯದ ಅಮಲಿನಲ್ಲಿ ವಿಜಯ್ ಕಾರು ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರನ ಜೊತೆ ಜಗಳ ತೆಗೆದಿರುವ ಘಟನೆ ಮಡಿವಾಳದ ಅಯ್ಯಪ್ಪ ದೇವಸ್ಥಾನದ ಅಂಡರ್‌ಪಾಸ್ ಬಳಿ ನಡೆದಿದೆ. ಮದ್ಯದ ಅಮಲಿನಲ್ಲಿ ಕಾರು ರಿವರ್ಸ್ ತೆಗೆದುಕೊಂಡು ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಕೂಡಲೇ ವಿಜಯ್‌ನನ್ನು ಠಾಣೆಗೆ ಕರೆದೊಯ್ದಿದ್ದ ಸವಾರ ರಮೇಶ್ ಪರಿಶೀಲನೆ ವೇಳೆ ವಿಜಯ್ ಕುಡಿದು ಕಾರು ಚಲಾಯಿಸಿದ್ದು ಪತ್ತೆಯಾಗಿದೆ. ಮಡಿವಾಳ ಸಂಚಾರಿ ಪೊಲೀಸರು ವಿಜಯ್ ಕಾರು ಜಪ್ತಿ ಮಾಡಿದ್ದಾರೆ. ಮಡಿವಾಳ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಿಮ್ಸ್‌ನಲ್ಲಿ ಎಂಎಸ್ ವ್ಯಾಸಂಗ ಮಾಡ್ತಿರುವ ವಿಜಯ್ ಭಾರದ್ವಾಜ್ ಕಳೆದ ವರ್ಷ ತಡರಾತ್ರಿ ಯುವತಿಯನ್ನು ಹಿಂಬಾಲಿಸಿ ಸುದ್ದಿಯಾಗಿದ್ದನು. ಕಾರಿನಲ್ಲಿ ಹಿಂಬಾಲಿಸಿ ಅಸಭ್ಯ ವರ್ತನೆ ತೋರಿದ ಹಿನ್ನೆಲೆ ಪೊಲೀಸರು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದರು.
ಇದನ್ನು ಓದಿ: ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ: ಬ್ಲಡ್ ಕ್ಯಾನ್ಸರ್ ದೃಢಪಟ್ಟ ಹಿನ್ನೆಲೆ ಗೃಹಿಣಿ ನೇಣಿಗೆ ಶರಣು
ಹಾಡಹಗಲೇ ಯುವಕನಿಗೆ ಚಾಕು ಇರಿದು ಕೊಲೆಗೆ ಯತ್ನ
ಕಲಬುರಗಿ: ನಗರದಲ್ಲಿ ಹಾಡಹಗಲೇ ಯುವಕನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಗರದ ಕೆಬಿಎನ್ ಆಸ್ಪತ್ರೆಯ ಮುಂಭಾಗದಲ್ಲಿ ನಡೆದಿದೆ. ನಗರದ ಫಿಲ್ಟರ್ ಬೆಡ್ ನಿವಾಸಿ ವಿಜಯ್ಗೆ ಚಾಕು ಇರಿದು ಹಲ್ಲೆ ಮಾಡಲಾಗಿದೆ. ವಿಜಯ್ನನ್ನ ಕಲಬುರಗಿ ಜಿಮ್ಸ್ ಆಸ್ಪತ್ರೆ ಪೊಲೀಸರು ದಾಖಲಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರ್ಷದ ಹಿಂದೆ ರೌಡಿ ಕರಣ್ ವಿಜಯ್‌ನನ್ನು ಅಪಹರಿಸಿಕೊಂಡು ಹೋಗಿ ಬಬಲಾದ್ ಬಳಿ ಕಾಲು ಕತ್ತರಿಸಿದ್ದರು. ರೌಡಿ ಕರಣ್ ಸೇರಿದಂತೆ 8 ಜನರ ವಿರುದ್ಧ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ವಿಜಯ್ ದೂರು ದಾಖಲಿಸಿದನು. ಪೊಲೀಸರು ಕರಣ್ ಸೇರಿ ಎಂಟು ಜನರನ್ನು ಬಂಧಿಸಿ ಜೈಲಿಗಟ್ಟಿದ್ದರು. ಜೈಲಿಗೆ ಹೋದ ಮೇಲೆ ಪ್ರಕರಣ ರಾಜಿ ಮಾಡಿಕೊಳ್ಳಲು ಕರಣ್, ವಿಜಯ ಮೇಲೆ ಒತ್ತಡ ಹಾಕಿದ್ದರು. ಕೇಸ್ ಹಿಂಪಡೆಯದಿದ್ದಕ್ಕೆ ಇಂದು ಸಹಚರರ ಮೂಲಕವಿಜಯ್ ಮೇಲೆ 10 ರೌಡಿಗಳು ದಾಳಿ ಮಾಡಿದ್ದಾರೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:31 pm, Sat, 11 June 22