Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ: ಬ್ಲಡ್​ ಕ್ಯಾನ್ಸರ್​ ದೃಢಪಟ್ಟ ಹಿನ್ನೆಲೆ ಗೃಹಿಣಿ ನೇಣಿಗೆ ಶರಣು

ಎಸ್ಎಸ್ಐಟಿ ಕಾಲೇಜ್ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಕಾಲೇಜ್ ಹಾಸ್ಟೆಲ್​​ನ ಸಂಗಮಿತ್ರ ಬ್ಲಾಕ್​ನಲ್ಲಿ ನಡೆದಿದೆ.

ಅನಾರೋಗ್ಯದಿಂದ ಬೇಸತ್ತು ಆತ್ಮಹತ್ಯೆ: ಬ್ಲಡ್​ ಕ್ಯಾನ್ಸರ್​ ದೃಢಪಟ್ಟ ಹಿನ್ನೆಲೆ ಗೃಹಿಣಿ ನೇಣಿಗೆ ಶರಣು
ದೀಪಾ(41) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 11, 2022 | 7:29 AM

ಮೈಸೂರು; ಬ್ಲಡ್​ ಕ್ಯಾನ್ಸರ್​ ದೃಢಪಟ್ಟ ಹಿನ್ನೆಲೆಯಲ್ಲಿ ಗೃಹಿಣಿ ನೇಣಿಗೆ ಶರಣಾಗಿರುವಂತಹ ಘಟನೆ ನಗರದ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ. ದೀಪಾ(41) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ವೈದ್ಯಕೀಯ ಪರೀಕ್ಷೆಯಲ್ಲಿ ಬ್ಲಡ್ ಕ್ಯಾನ್ಸರ್ ದೃಢಪಟ್ಟಿದ್ದು, ಅನಾರೋಗ್ಯದಿಂದ ಬೇಸತ್ತು ಮನೆಯಲ್ಲಿ ದೀಪಾ ನೇಣಿಗೆ ಶರಣಾಗಿದ್ದಾಳೆ. ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸ್ಟೆಲ್​​ನಲ್ಲಿ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ

ತುಮಕೂರು: ಎಸ್ಎಸ್ಐಟಿ ಕಾಲೇಜ್ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಕಾಲೇಜ್ ಹಾಸ್ಟೆಲ್​​ನ ಸಂಗಮಿತ್ರ ಬ್ಲಾಕ್​ನಲ್ಲಿ ನಡೆದಿದೆ. ಕವಿತ (21) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ನಿ. ಸಿವಿಲ್ ಇಂಜಿನಿಯರಿಂಗ್​​ ಅಂತಿಮ ವರ್ಷದಲ್ಲಿ ಓದುತ್ತಿದ್ದಳು. ಮೈಸೂರು ಮೂಲದ ವಿದ್ಯಾರ್ಥಿನಿ ಎನ್ನಲಾಗಿದೆ. ತಿಲಕ್‌ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಆನ್​ಲೈನ್​ನಲ್ಲಿ ಲ್ಯಾಪ್​ಟಾಪ್​ ಮಾರಾಟ ವಂಚನೆ

ಬೆಂಗಳೂರು: ಆನ್​ಲೈನ್​ನಲ್ಲಿ ಲ್ಯಾಪ್​ಟಾಪ್​ ಮಾರಾಟ ಮಾಡುವುದಾಗಿ ವಂಚಿಸಿದ್ದ ದೆಹಲಿ ಮೂಲದ ಆರೋಪಿ ಅಮನ್ ಕುಮಾರ್​ನನ್ನು (20) ಬೆಂಗಳೂರಿನ ಈಶಾನ್ಯ ವಿಭಾಗದ ಸಿಇಎನ್ ಪೊಲೀಸರಿಂದ ಬಂಧನ ಮಾಡಿದ್ದಾರೆ. ಓಎಲ್ಎಕ್ಸ್​ನಲ್ಲಿ 1.50 ಲಕ್ಷ ರೂ. ಮೌಲ್ಯದ ಲ್ಯಾಪ್‌ಟಾಪ್ ಜಾಹೀರಾತು ನೀಡಿದ್ದ. ಇದನ್ನು ಗಮನಿಸಿ ಅಮನ್ ಕುಮಾರ್​ನನ್ನ ಸಂಪರ್ಕಿಸಿದ್ದ ದೂರುದಾರ, ಪ್ಯಾಕಿಂಗ್ ಚಾರ್ಜ್, ಶಿಪ್ಪಿಂಗ್ ಚಾರ್ಜ್ ಅಂತಾ ಹಣ ಪಡೆದಿದ್ದ. ದೂರುದಾರನಿಂದ 72 ಸಾವಿರ ರೂ. ಪಡೆದಿದ್ದ ಅಮನ್ ಕುಮಾರ್, ಲ್ಯಾಪ್‌ಟಾಪ್ ಬದಲು‌ ಖಾಲಿ ಪಾರ್ಸೆಲ್ ಕಳುಹಿಸಿದ್ದ. ಈಶಾನ್ಯ ವಿಭಾಗದ ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಚಾಲಕನ ನಿಯಂತ್ರಣ ತಪ್ಪಿ ಲಗೇಜ್ ವಾಹನ ಪಲ್ಟಿ

ತುಮಕೂರು: ಬದರಿಕಾಶ್ರಮ ಗೇಟ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಲಗೇಜ್ ವಾಹನ ಉರುಳಿ ಬಿದ್ದಿರುವಂತಹ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ಬದರಿಕಾಶ್ರಮ ಗೇಟ್​​ ಬಳಿ ನಡೆದಿದೆ. ತುರುವೇಕೆರೆಯಿಂದ ಮಾಯಸಂದ್ರಕ್ಕೆ ಕೊಬ್ಬರಿ ಚೀಲ ತುಂಬಿಕೊಂಡು ಬರಲು ಹೋಗುತ್ತಿದ್ದಾಗ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಲಗ್ಗೇಜ್ ವಾಹನ ರಸ್ತೆ ಬದಿಗೆ ಉರುಳಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಾನವೀಯತೆ ಮೆರೆದ ಮಾಜಿ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್

ತುಮಕೂರು: ಜಿಲ್ಲೆ ಮಧುಗಿರಿ ತಾಲೂಕಿನ ಕೆರೆಗಳಪಾಳ್ಯ ಬಳಿ ತಡರಾತ್ರಿ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಬೆಂಗಾವಲು ಪಡೆ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿ ಮಾಜಿ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್​​ ಮಾನವೀಯತೆ ಮೆರೆದಿದ್ದಾರೆ. ಗಾಯಾಳನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಪರಮೇಶ್ವರ್​​ ದಾಖಲಿಸಿದ್ದಾರೆ. ಮಧುಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.