Paytm Charges: ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದಲ್ಲಿ ಶುಲ್ಕ

ಇದೀಗ ಮೊಬೈಲ್ ಫೋನ್ ರೀಚಾರ್ಜ್ ಮೇಲೆ ಪೇಟಿಎಂನಿಂದ ಪ್ಲಾಟ್​ಫಾರ್ಮ್ ಶುಲ್ಕ ವಿಧಿಸಲು ಆರಂಭಿಸಲಾಗಿದೆ. ಆ ಬಗ್ಗೆ ವಿವರಗಳು ಇಲ್ಲಿವೆ.

Paytm Charges: ಪೇಟಿಎಂ ಮೂಲಕ ಮೊಬೈಲ್ ರೀಚಾರ್ಜ್ ಮಾಡಿದಲ್ಲಿ ಶುಲ್ಕ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on: Jun 11, 2022 | 7:23 AM

ಯಾವುದೇ ರೀಚಾರ್ಜ್ ಮಾಡುವಾಗ ಪೇಟಿಎಂನಲ್ಲಿ (Paytm) ಆದ ಬದಲಾವಣೆಯನ್ನು ನೀವು ಗಮನಿಸಿದ್ದೀರಾ? ಅದರ ಮೂಲಕ ಮಾಡುವ ರೀಚಾರ್ಜ್‌ಗಳಿಗೆ ‘ಪ್ಲಾಟ್‌ಫಾರ್ಮ್ ಶುಲ್ಕ’ ವಿಧಿಸಲು ಆರಂಭಿಸಲಾಗಿದೆ. ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದ ರೀಚಾರ್ಜ್‌ಗಳಿಗೆ ಕನ್ವೆಯನ್ಸ್ ಶುಲ್ಕ, ಪ್ಲಾಟ್‌ಫಾರ್ಮ್ ಶುಲ್ಕ, ಸರ್‌ಚಾರ್ಜ್, ನೀವು ಏನೇ ಕರೆದರೂ ಪೇಟಿಎಂ 1 ರಿಂದ 6 ರೂಪಾಯಿವರೆಗೆ ಶುಲ್ಕ ವಿಧಿಸುತ್ತಿದೆ. ಇದು ಕೇವಲ ಪೇಟಿಎಂ ವ್ಯಾಲೆಟ್‌ಗೆ ಸೀಮಿತವಾಗಿಲ್ಲ. ಆದರೆ ಯುಪಿಐ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಮಾಡಿದ ರೀಚಾರ್ಜ್‌ಗಳಿಗೂ ಅನ್ವಯಿಸುತ್ತದೆ. ಇದು ಅಪ್ಲಿಕೇಷನ್ ಅಥವಾ ವೆಬ್‌ಸೈಟ್ ಮೂಲಕ ಎರಡಕ್ಕೂ ಅನ್ವಯಿಸುತ್ತದೆ. ಈ ಹೊಸ ಪೇಟಿಎಂ ಫೀಚರ್ ಹೊರತರಲಾಗುತ್ತಿದೆ ಮತ್ತು ಇದೀಗ ಅದರ ಎಲ್ಲ ಬಳಕೆದಾರರಿಗೆ ಲಭ್ಯ ಇಲ್ಲದಿರಬಹುದು. ಆದರೆ ಶೀಘ್ರದಲ್ಲೇ ಅಥವಾ ನಂತರ ಇದನ್ನು ಎಲ್ಲರಿಗೂ ಅಳವಡಿಸಲಾಗುವುದು.

ರೂ. 100ಕ್ಕಿಂತ ಹೆಚ್ಚಿನ ರೀಚಾರ್ಜ್‌ಗಳಿಗೆ ಪೇಟಿಎಂ ಪ್ಲಾಟ್‌ಫಾರ್ಮ್ ಶುಲ್ಕವನ್ನು ವಿಧಿಸುತ್ತಿದೆ. ಈ ಟ್ರೆಂಡ್​ನ ಪ್ರಾರಂಭಿಸಿದ ಫೋನ್​ಪೇ ಹೆಜ್ಜೆಗಳನ್ನು ಪೇಟಿಎಂ ಅನುಸರಿಸಿದೆ. ಇಂದು ಪ್ರಿಪೇಯ್ಡ್ ಮೊಬೈಲ್ ಅನ್ನು ರೀಚಾರ್ಜ್ ಮಾಡುವಾಗ ಇದನ್ನು ಬಳಕೆದಾರರೊಬ್ಬರಿಗೆ ವೈಯಕ್ತಿಕವಾಗಿ ಖಚಿತಪಡಿಸಿದೆ. ನಿಜವಾದ ರೀಚಾರ್ಜ್ ಮೊತ್ತವು 239 ಆಗಿತ್ತು. ಆದರೆ ಈ ‘ಪ್ಲಾಟ್‌ಫಾರ್ಮ್ ಶುಲ್ಕ’ದಿಂದಾಗಿ ರೂ. 241, ಹೆಚ್ಚುವರಿ ರೂ. 2 ಅನ್ನು ಕನ್ವೆಯನ್ಸ್ ಶುಲ್ಕವಾಗಿ ಪಾವತಿಸಲಾಗಿದೆ. ಟ್ವಿಟ್ಟರ್​ನಲ್ಲಿ ಗಮನಸೆಳೆದಾಗ, ಪೇಟಿಎಂ ಪ್ರತಿಕ್ರಿಯಿಸಿದ್ದು, “ಪೇಟಿಎಂ ಅಪ್ಲಿಕೇಷನ್ ಅಥವಾ ವೆಬ್‌ಸೈಟ್‌ನಲ್ಲಿ ಮಾಡಿದ ಕೆಲವು ಮೊಬೈಲ್ ರೀಚಾರ್ಜ್‌ಗಳಿಗೆ ಅತ್ಯಲ್ಪ ಶುಲ್ಕವನ್ನು ವಿಧಿಸಬಹುದು. ಈ ಶುಲ್ಕವು ಎಲ್ಲ ಪಾವತಿ ವಿಧಾನಗಳಿಗೆ ಅನ್ವಯಿಸುತ್ತದೆ ಮತ್ತು ನೀವು ರೀಚಾರ್ಜ್‌ನೊಂದಿಗೆ ಮುಂದುವರಿಯುವ ಮೊದಲು ಪಾವತಿ ಪುಟದಲ್ಲಿ ಪ್ರದರ್ಶಿಸಲಾಗುತ್ತದೆ.”

ಇದಕ್ಕೆ ವಿರುದ್ಧವಾಗಿ, ಅಮೆಜಾನ್ ಪೇ ಮತ್ತು ಗೂಗಲ್ ಪೇ ಯಾವುದೇ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುತ್ತಿಲ್ಲ. ಪ್ಲಾಟ್‌ಫಾರ್ಮ್ ಶುಲ್ಕ/ಕನ್ವೆಯನ್ಸ್ ಶುಲ್ಕ/ಪ್ರೊಸೆಸಿಂಗ್ ಶುಲ್ಕವನ್ನು ಉಳಿಸಲು ಜನರು ಈ ಆಯ್ಕೆಗಳಲ್ಲಿ ಒಂದನ್ನು ಆರಿಸಿಕೊಳ್ಳಬಹುದು. ಈ ಕ್ರಮವು ಬಹುಶಃ ಹೆಚ್ಚಿನ ಆದಾಯವನ್ನು ಗಳಿಸುವ ಗುರಿಯನ್ನು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ