Crude Oil Price: ದಶಕಗಳಲ್ಲೇ ಗರಿಷ್ಠ ಮಟ್ಟವಾದ ಬ್ಯಾರೆಲ್​ಗೆ 121 ಯುಎಸ್​ಡಿ ತಲುಪಿದ ಕಚ್ಚಾ ತೈಲ

ಭಾರತದ ಕಚ್ಚಾ ತೈಲ ಬ್ಯಾಸ್ಕೆಟ್ ದಶಕದಲ್ಲೇ ಗರಿಷ್ಠ ಮಟ್ಟವಾದ 121 ಯುಎಸ್​ಡಿ ಮುಟ್ಟಿದೆ. ಅದರ ಬಗ್ಗೆ ವಿವರ ಈ ಲೇಖನದಲ್ಲಿ ಇದೆ.

Crude Oil Price: ದಶಕಗಳಲ್ಲೇ ಗರಿಷ್ಠ ಮಟ್ಟವಾದ ಬ್ಯಾರೆಲ್​ಗೆ 121 ಯುಎಸ್​ಡಿ ತಲುಪಿದ ಕಚ್ಚಾ ತೈಲ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 10, 2022 | 6:34 PM

ಭಾರತವು ಖರೀದಿಸುವ ಕಚ್ಚಾ ತೈಲದ (Crude Oil) ಬುಟ್ಟಿಯು ಪ್ರತಿ ಬ್ಯಾರೆಲ್‌ಗೆ 121 ಯುಎಸ್​ಡಿ ಮುಟ್ಟಿ, ದಶಕದ ಗರಿಷ್ಠ ಮಟ್ಟವನ್ನು ತಲುಪಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್‌ನ ರೀಟೇಲ್ ಮಾರಾಟದ ಬೆಲೆಗಳು ಯಾವುದೇ ಬದಲಾವಣೆ ಆಗದೆ ಬಹಳ ಕಾಲವಾಗಿದೆ. ತೈಲ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ವಿಭಾಗದಿಂದ (PPAC) ಲಭ್ಯವಿರುವ ಮಾಹಿತಿಯ ಪ್ರಕಾರ, ಜೂನ್ 9ರಂದು ಭಾರತೀಯ ಬ್ಯಾಸ್ಕೆಟ್ 121.28 ಡಾಲರ್ ಅನ್ನು ಮುಟ್ಟಿದ್ದು, 2012ರ ಫೆಬ್ರವರಿ ಮತ್ತು ಮಾರ್ಚ್​ನಲ್ಲಿ ಇದ್ದ ಮಟ್ಟಕ್ಕೆ ಈ ಬೆಲೆ ಹೋಲಿಕೆ ಆಗುತ್ತಿದೆ. PPAC ಪ್ರಕಾರ, ಫೆಬ್ರವರಿ 25 ಮತ್ತು ಮಾರ್ಚ್ 29ರ ಮಧ್ಯೆ ಭಾರತೀಯ ಬುಟ್ಟಿಯ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಸರಾಸರಿ ಯುಎಸ್​ಡಿ 111.86 ಆಗಿತ್ತು – ರಷ್ಯಾವು ಉಕ್ರೇನ್ ಮೇಲೆ ದಾಳಿ ಆರಂಭಿಸಿದ ಮೇಲೆ ತಕ್ಷಣದಿಂದಲೇ ತೈಲದ ಬೆಲೆಯು ಭಾರೀ ಏರಿಕೆಗೆ ಕಾರಣ ಆಯಿತು. ಇದು ಮಾರ್ಚ್ 30 ಮತ್ತು ಏಪ್ರಿಲ್ 27ರ ಮಧ್ಯೆ ಬ್ಯಾರೆಲ್‌ಗೆ ಸರಾಸರಿ ಯುಎಸ್​ಡಿ 103.44 ಆಗಿತ್ತು. ಅಂತರರಾಷ್ಟ್ರೀಯ ತೈಲ ಬೆಲೆಗಳು ಗುರುವಾರದಂದು 13 ವಾರಗಳ ಗರಿಷ್ಠ ಮಟ್ಟದಲ್ಲಿದ್ದು, ಅಮೆರಿಕದಂಥ ಪ್ರಮುಖ ಖರೀದಿದಾರರಿಂದ ದೃಢವಾದ ಬೇಡಿಕೆಯಿಂದ ದೃಢವಾಯಿತು.

ಆದರೆ, ಶುಕ್ರವಾರದಂದು ಕೆಲ ಮಟ್ಟಿಗೆ ಲಾಭಗಳನ್ನು ಪಡೆದರು. ಆಗಸ್ಟ್‌ನಲ್ಲಿ ಬ್ರೆಂಟ್ ಕಚ್ಚಾ ಫ್ಯೂಚರ್ಸ್ 81 ಸೆಂಟ್‌ಗಳನ್ನು ಕಳೆದುಕೊಂಡು, ಪ್ರತಿ ಬ್ಯಾರೆಲ್‌ಗೆ ಯುಎಸ್​ಡಿ 122.26ಕ್ಕೆ ವಹಿವಾಟು ಮಾಡಿತು. ಜುಲೈನಲ್ಲಿ ಯುಎಸ್​ ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ಯುಎಸ್​ಡಿ 120.72 ಇದ್ದು, 79 ಸೆಂಟ್ಸ್ ಕಡಿಮೆಯಾಗಿದೆ. ಆದರೆ ಚಿಲ್ಲರೆ ಇಂಧನ ದರಗಳು ಭಾರತದಲ್ಲಿ ಬದಲಾಗದೆ ಹಾಗೆ ಉಳಿಯುತ್ತಲೇ ಇವೆ. ಸರ್ಕಾರಿ ಸ್ವಾಮ್ಯದ ಇಂಧನ ರೀಟೇಲರ್​ಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ವೆಚ್ಚಕ್ಕೆ ಅನುಗುಣವಾಗಿ ಬದಲಾವಣೆ ಮಾಡಬೇಕಿತ್ತು. ಆದರೆ ಅವು ನವೆಂಬರ್ 2021ರಿಂದ ಪಂಪ್ ದರಗಳು ಮಾಡರೇಟ್ ಮಾಡುತ್ತಿವೆ. ಭಾರತವು ತನ್ನ ತೈಲ ಅಗತ್ಯಗಳನ್ನು ಪೂರೈಸಲು ಆಮದುಗಳ ಮೇಲೆ ಶೇಕಡಾ 85ರಷ್ಟು ಅವಲಂಬಿತವಾಗಿದೆ ಮತ್ತು ಆದ್ದರಿಂದ ಸ್ಥಳೀಯ ಪಂಪ್ ದರಗಳಿಗೆ ಅಂತರರಾಷ್ಟ್ರೀಯ ಬೆಲೆಗಳು ಮಾನದಂಡವಾಗಿದೆ.

ಸ್ಥಳೀಯ ಪಂಪ್ ದರಗಳು ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆಗೆ ಸುಮಾರು ಯುಎಸ್​ಡಿ 85ಕ್ಕೆ ಬೆಂಚ್​ಮಾರ್ಕ್ ಎಂದು ಉದ್ಯಮ ಮೂಲಗಳು ತಿಳಿಸಿವೆ ಆದರೆ ತೈಲ ಸಂಸ್ಥೆಗಳು ಹಣದುಬ್ಬರವನ್ನು ನಿಯಂತ್ರಿಸಲು ಸರ್ಕಾರಕ್ಕೆ ಸಹಾಯ ಮಾಡುವುದರಿಂದ ದರಗಳನ್ನು ಬದಲಾಯಿಸಿಲ್ಲ, ಇದು ಈಗಾಗಲೇ ಸುಮಾರು ಎಂಟು ವರ್ಷಗಳ ಗರಿಷ್ಠ ಶೇ 7.8ರಲ್ಲಿದೆ. ಇಂಧನ ಬೆಲೆಗಳು, ನಿರ್ದಿಷ್ಟವಾಗಿ ಡೀಸೆಲ್, ಹಣದುಬ್ಬರದ ಮೇಲೆ ಕ್ಯಾಸ್ಕೇಡಿಂಗ್ ಪರಿಣಾಮವನ್ನು ಬೀರುತ್ತದೆ. ಏಕೆಂದರೆ ಹೆಚ್ಚಿನ ಬೆಲೆಯು ಹೆಚ್ಚಿನ ಸಾರಿಗೆ ವೆಚ್ಚಗಳಿಗೆ ಕಾರಣವಾಗುತ್ತದೆ, ತರಕಾರಿಗಳಂತಹ ಅಗತ್ಯಗಳನ್ನು ಒಳಗೊಂಡಂತೆ ಎಲ್ಲದರ ಬೆಲೆಗಳನ್ನು ಹೆಚ್ಚಿಸುತ್ತದೆ. ಉದ್ಯಮಕ್ಕೆ ಪ್ರತಿ ಲೀಟರ್‌ಗೆ ಪೆಟ್ರೋಲ್‌ಗೆ ಸುಮಾರು ರೂ. 18 ಮತ್ತು ಡೀಸೆಲ್‌ಗೆ ರೂ. 21 ನಷ್ಟಕ್ಕೆ ಮಾರಾಟ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ವೆಚ್ಚಕ್ಕೆ ಹೊಂದಿಸಲು ಏಪ್ರಿಲ್ 6ರಂದು ಕೊನೆಯದಾಗಿ ಪರಿಷ್ಕರಿಸಲಾಯಿತು ಮತ್ತು ಅಂದಿನಿಂದ ಬೆಲೆ ಬದಲಾವಣೆ ಆಗದೆ ಹಾಗೇ ಉಳಿದಿದೆ. ಕಳೆದ ತಿಂಗಳು ಸರ್ಕಾರವು ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ರೂ. 8 ಮತ್ತು ಡೀಸೆಲ್‌ನ ಮೇಲೆ ರೂ. 6ರಷ್ಟು ಕಡಿತಗೊಳಿಸಿದ ನಂತರ ದರಗಳನ್ನು ಕಡಿಮೆ ಮಾಡಲಾಗಿತ್ತು.

ಕಳೆದ ವಾರ, ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಮಾತನಾಡಿ, ತೈಲ ಕಂಪೆನಿಗಳು ಜವಾಬ್ದಾರಿಯುತ ಕಾರ್ಪೊರೇಟ್ ನಾಗರಿಕರು ಮತ್ತು ಸರ್ಕಾರವು ಚಿಲ್ಲರೆ ಮಾರಾಟದ ಬೆಲೆಗಳನ್ನು ನಿರ್ದೇಶಿಸುತ್ತಿಲ್ಲ ಎಂದು ಹೇಳಿದ್ದಾರೆ. ತೈಲ ಬೆಲೆಗಳ ಏರಿಕೆಯ ಹೊರತಾಗಿಯೂ ಮೂರು ರಾಜ್ಯಗಳ ಇಂಧನ ಚಿಲ್ಲರೆ ವ್ಯಾಪಾರಿಗಳು ಮೊದಲು ನವೆಂಬರ್ 2021ರ ಆರಂಭದಲ್ಲಿ ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳು ಚುನಾವಣೆಗೆ ಹೋದಾಗ ದಾಖಲೆಯ 137 ದಿನಗಳವರೆಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಸ್ಥಗಿತಗೊಳಿಸಿದವು ಮತ್ತು ನಂತರ ಏಪ್ರಿಲ್‌ನಲ್ಲಿ ಮತ್ತೆ ವಿರಾಮ ನೀಡಲಾಯಿತು. ಅದೀಗ 65 ದಿನಗಳಾಗಿವೆ.

ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪನಿಗಳು (OMC) ನಷ್ಟದ ನಡುವೆಯೂ ಚಿಲ್ಲರೆ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದರೆ, ರಿಲಯನ್ಸ್-ಬಿಪಿ ಮತ್ತು ನಯಾರಾ ಎನರ್ಜಿಯಂತಹ ಖಾಸಗಿ ವಲಯದ ರೀಟೇಲ್ ವ್ಯಾಪಾರಿಗಳು ನಷ್ಟವನ್ನು ಕಡಿತಗೊಳಿಸಲು ಕಾರ್ಯಾಚರಣೆಯನ್ನು ಮೊಟಕುಗೊಳಿಸಿದ್ದಾರೆ. ಕೆಲವೆಡೆ ಸಾರ್ವಜನಿಕ ವಲಯದ ಪೈಪೋಟಿಗಿಂತ ರೂ. 3ರಷ್ಟು ಹೆಚ್ಚಿನ ದರದಲ್ಲಿ ನಯಾರಾ ಇಂಧನವನ್ನು ಮಾರಾಟ ಮಾಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ರಷ್ಯಾದಿಂದ ತೈಲ ಆಮದನ್ನು ಸಮರ್ಥಿಸಿಕೊಂಡ ವಿದೇಶಾಂಗ ಸಚಿವ ಜೈಶಂಕರ್, ಟೀಕೆಗಳಿಗೆ ತಿರುಗೇಟು

Published On - 6:34 pm, Fri, 10 June 22

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್