AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Wage Code: ಹೊಸ ಕಾನೂನು ಜಾರಿ ಹೇಗೆ ಬದಲಿಸಲಿದೆ ವೇತನ ರಚನೆ ತಿಳಿದಿದೆಯೇ?

ಹೊಸ ವೇತನ ಸಂಹಿತೆ ಜಾರಿ ಆದ ಮೇಲೆ ಸಂಬಳ ರಚನೆಯಲ್ಲಿ ಬದಲಾವಣೆ ಆಗಲಿದೆ. ಅದು ಯಾವ ರೀತಿ ಹಾಗೂ ಹೇಗೆ ಎಂಬುದರ ವಿವರ ಇಲ್ಲಿದೆ.

New Wage Code: ಹೊಸ ಕಾನೂನು ಜಾರಿ ಹೇಗೆ ಬದಲಿಸಲಿದೆ ವೇತನ ರಚನೆ ತಿಳಿದಿದೆಯೇ?
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Jun 11, 2022 | 12:40 PM

Share

ಎಲ್ಲ ರಾಜ್ಯಗಳು ಅಧಿಸೂಚನೆ ಹೊರಡಿಸಿದ ಮೇಲೆ ಹೊಸ ವೇತನ ಸಂಹಿತೆಯು (New Wage Code) ದೇಶದಲ್ಲಿ ಶೀಘ್ರದಲ್ಲೇ ಜಾರಿಗೆ ಬರಲು ಸಿದ್ಧವಾಗಿದೆ. ಈ ಸಂಹಿತೆ ಜಾರಿಗೆ ಬಂದ ಮೇಲೆ ಅದು ಸಂಬಳದ ರಚನೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ವೇತನದ ಸ್ಲಿಪ್ ಮಾತ್ರವಲ್ಲದೆ, ಗ್ರಾಚ್ಯುಟಿ ಮೊತ್ತ ಮತ್ತು ಟಿಡಿಎಸ್ ಮೇಲೆ ಅನೇಕ ಬದಲಾವಣೆಗಳು ಆಗುತ್ತದೆ. ವೇತನದ ಸ್ಲಿಪ್‌ಗಳಲ್ಲಿ ಮೂಲ ವೇತನ, ಭತ್ಯೆಗಳು, ಎಚ್‌ಆರ್‌ಎ, ಕನ್ವೇಯನ್ಸ್, ಪಿಎಫ್ ಕಡಿತ, ಉದ್ಯೋಗಿಗಳ ಗುಂಪು ವಿಮೆ ಮತ್ತು ಟಿಡಿಎಸ್‌ ಇವೆಲ್ಲ ಒಳಗೊಂಡಿರುತ್ತವೆ. ಈ ಹೊಸ ಸಂಹಿತೆಯೊಂದಿಗೆ ಈ ಕೆಲವು ಅಂಶಗಳು ಸಂಪೂರ್ಣವಾಗಿ ಬದಲಾಗುತ್ತವೆ. ಇದು ಪೇ ಸ್ಲಿಪ್ ಅನ್ನು ಹೇಗೆ ಬದಲಾಯಿಸುತ್ತದೆ ಎಂಬುದನ್ನು ನೋಡೋಣ.

ಮೂಲ ವೇತನವು ಒಟ್ಟು ವೇತನದ ಶೇ 50ಕ್ಕಿಂತ ಕಡಿಮೆ ಇರುವಂತಿಲ್ಲ

ಹೊಸ ನಿಯಮಗಳ ಪ್ರಕಾರ, ಮೂಲ ವೇತನವು ಒಟ್ಟಾರೆ ವೇತನದ ಕನಿಷ್ಠ ಶೇ 50ರಷ್ಟು ಇರುತ್ತದೆ. ಮೂಲಭೂತ ಬದಲಾವಣೆಗಳ ನಂತರ, ಇಡೀ ರಚನೆಯು ಉದ್ಯೋಗಿಗಳ ಸಂಬಳದ ಸ್ಲಿಪ್‌ಗಳಲ್ಲಿ ಹೆಚ್ಚಿನ ಬದಲಾವಣೆಗೆ ಕಾರಣ ಆಗುತ್ತದೆ. ವೇತನ ಸಂಹಿತೆ ಮಸೂದೆ 2019ರಲ್ಲಿ ‘ವೇತನ’ದ ಅರ್ಥವನ್ನು ಬದಲಾಯಿಸಲಾಗಿದೆ. ಈಗ ಮೂಲ ವೇತನದ ಶೇಕಡಾವಾರು ಬದಲಾವಣೆಗಳಿಂದಾಗಿ ಪಿಎಫ್ ಕೊಡುಗೆ, ಗ್ರಾಚ್ಯುಟಿ ಮತ್ತು ಇತರ ಅಂಶಗಳಲ್ಲಿ ಬದಲಾವಣೆಗಳು ಅನಿವಾರ್ಯವಾಗಿದೆ. ತಕ್ಷಣದ ಪರಿಣಾಮವೆಂದರೆ ಟೇಕ್-ಹೋಮ್ ಅಥವಾ ಇನ್-ಹ್ಯಾಂಡ್ ಸಂಬಳದ ಕುಸಿತ. ಆದರೆ ಪಿಎಫ್​ಗೆ ಉದ್ಯೋಗದಾತರ ಕೊಡುಗೆ ಹೆಚ್ಚಾಗುತ್ತದೆ.

ಭತ್ಯೆಗಳು ಮತ್ತು ವೇರಿಯಬಲ್ಸ್​ಗಳು ಸಹ ಕಡಿಮೆ

ಹೊಸ ನಿಯಮಗಳ ಪ್ರಕಾರ, ಮೂಲ ವೇತನವು ಒಟ್ಟು ಸಂಬಳದ ಶೇಕಡಾ 50ರಷ್ಟಿರಬೇಕು. ಆದ್ದರಿಂದ ಕಂಪೆನಿಗಳು ಇತರ ಅಂಶಗಳನ್ನು ಸರಿಹೊಂದಿಸಲು ನೋಡುತ್ತವೆ. ಸದ್ಯಕ್ಕೆ, ಮೂಲ ವೇತನವು ಒಟ್ಟು ವೇತನದ ಶೇ 10 ರಿಂದ 40ರ ವರೆಗೆ ಇರುತ್ತದೆ. ಉಳಿದಂತೆ ಎಚ್‌ಆರ್‌ಎ, ಕನ್ವೇಯನ್ಸ್, ವಿಶೇಷ ಭತ್ಯೆ, ಫೋನ್ ಬಿಲ್ ಇತ್ಯಾದಿ ಭತ್ಯೆಗಳನ್ನು ಒಳಗೊಂಡಿದೆ. ಈಗ ಮೂಲ ವೇತನ ಹೆಚ್ಚಾಗುತ್ತಿರುವುದರಿಂದ ಭತ್ಯೆಗಳು ಕಡಿಮೆಯಾಗುತ್ತವೆ.

ಪಿಎಫ್​ ಹೆಚ್ಚು ಹೋಗುತ್ತದೆ

ಪಿಎಫ್ ಅನ್ನು ಮೂಲ ವೇತನದ ಶೇಕಡಾವಾರು ಎಂದು ಲೆಕ್ಕ ಹಾಕಲಾಗುತ್ತದೆ. ಈಗ ಮೂಲ ವೇತನ ಹೆಚ್ಚಳದಿಂದ ಪಿಎಫ್ ಕೂಡ ಏರಿಕೆಯಾಗಲಿದೆ. ಇದು ಉದ್ಯೋಗಿಗಳ ಭವಿಷ್ಯವನ್ನು ಭದ್ರಪಡಿಸುತ್ತದೆ. ಆದರೆ ಒಟ್ಟು ಮೊತ್ತದಲ್ಲಿ ಹೆಚ್ಚಿನ ಪಿಎಫ್ ಅನ್ನು ಕಡಿತಗೊಳಿಸಲಾಗುತ್ತದೆ. ಇದು ಟೇಕ್-ಹೋಮ್ ಸಂಬಳದ ಮೇಲೆ ನಕಾರಾತ್ಮಕ ರೀತಿಯಲ್ಲಿ ಪರಿಣಾಮ ಬೀರಬಹುದು.

ತೆರಿಗೆ ಹೊಣೆಗಾರಿಕೆ ಹೆಚ್ಚಾಗಲಿದೆ

ಮೂಲ ವೇತನ, ಬೋನಸ್ ಮತ್ತು ಎಚ್​ಆರ್​ಎ ಕೆಲವು ಭಾಗಗಳ ಹೊರತಾಗಿ ಭತ್ಯೆಗಳು ಪ್ರಸ್ತುತ ನಿಯಮಗಳ ಅಡಿಯಲ್ಲಿ ತೆರಿಗೆಗೆ ಒಳಪಡುವುದಿಲ್ಲ. ಮೂಲವೇತನದ ಏರಿಕೆಯೊಂದಿಗೆ ತೆರಿಗೆಗಳು ಸಹ ಹೆಚ್ಚಾಗುತ್ತವೆ. ಹೊಸ ಬದಲಾವಣೆಗಳೊಂದಿಗೆ ತೆರಿಗೆಗೆ ಒಳಪಡದ ಭಾಗವು ಗಮನಾರ್ಹವಾಗಿ ಕುಗ್ಗುತ್ತದೆ. ಇದು ಶೇ 20ರಿಂದ 25 ರವರೆಗೆ ಇರುತ್ತದೆ. ಅದು ಈ ಹಿಂದೆ ಶೇ 50 ಅಥವಾ ಅದಕ್ಕಿಂತ ಹೆಚ್ಚಿತ್ತು. ಹೊಸ ನಿಯಮಗಳ ಪ್ರಕಾರ, ಎಚ್​ಆರ್​ಎ ಮೇಲಿನ ತೆರಿಗೆ ಕೂಡ ಗಣನೀಯವಾಗಿ ಏರುವ ನಿರೀಕ್ಷೆಯಿದೆ. ಮೂಲ ವೇತನ ಹೆಚ್ಚಳದಿಂದಾಗಿ ಎಚ್‌ಆರ್‌ಎ ಕೂಡ ಏರಿಕೆಯಾಗಲಿದೆ. ಇದು ಎಚ್​ಆರ್​ಎ ತೆರಿಗೆಯ ಭಾಗವನ್ನು ಹೆಚ್ಚಿಸುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: New Labour Laws: ವಾರದಲ್ಲಿ 4 ದಿನ ಕೆಲಸ, ಹೆಚ್ಚಿನ ಪಿಎಫ್​, ಗ್ರಾಚ್ಯುಟಿ; ಜುಲೈ 1ರಿಂದ ಜಾರಿಗೆ ಬರಲಿದೆ ಹೊಸ ಕಾರ್ಮಿಕ ಸಂಹಿತೆ

ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು
ರಸ್ತೆ ಕಾಮಗಾರಿಗೆ ಕಮಿಷನ್: ಕಲಬುರಗಿ ಪಂಚಾಯತ್ ರಾಜ್ ಜೆಇ ಲಂಚಾವತಾರ ಬಯಲು