ಬೆಂಗಳೂರು, ಫೆ.6: ನಕಲಿ ದಾಖಲೆ ಸೃಷ್ಟಿಸಿ 16 ಎಕರೆ ಜಮೀನು ಕಬಳಿಸಿದ ಆರೋಪ ಸಂಬಂಧ ಮಾಜಿ ರೌಡಿಶೀಟರ್ ಆಗಿರುವ ಜೆಕೆ ಅಲಿಯಾಸ್ ಜೇಡರಹಳ್ಳಿ ಕೃಷ್ಣಪ್ಪನನ್ನು ಬ್ಯಾಡರಹಳ್ಳಿ (Byadarahalli) ಠಾಣಾ ಪೊಲೀಸರು ಆರ್ಟಿ ನಗರದಲ್ಲಿ ಬಂಧಿಸಿದ್ದಾರೆ. ಜೇಡರಹಳ್ಳಿ ಕೃಷ್ಣಪ್ಪ ವಿರುದ್ಧ ಬಸವರಾಜ್ ಎಂಬವರು ಠಾಣೆಗೆ ದೂರು ನೀಡಿದ್ದರು.
ಚಿತ್ರದುರ್ಗ: ಟೈರ್ ಸ್ಫೋಟಗೊಂಡು ಕಾರು ಪಲ್ಟಿಯಾಗಿ ಇಬ್ಬರು ದುರ್ಮರಣ ಹೊಂದಿದ ಘಟನೆ ಚಿತ್ರದುರ್ಗ ತಾಲೂಕಿನ ಕಾತ್ರಾಳ್ ಕೆರೆ ಬಳಿ ನಡೆದಿದೆ. ಮುತ್ತುಸ್ವಾಮಿ (69), ಪಾಂಡುರಂಗ (32) ಮೃತ ದುರ್ದೈವಿಗಳು. ಘಟನೆಯಲ್ಲಿ ಮತ್ತೊಬ್ಬನಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ದಾವಣಗೆರೆ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ: ಆನೇಕಲ್ ನಲ್ಲಿ ಫಲವತ್ತಾದ ಪಿತ್ರಾರ್ಜಿತ ಜಮೀನು 2005ರಲ್ಲಿ ನೋಟಿಫಿಕೇಶನ್: ಪ್ರಭಾವಿಗಳಿಗೆ ನೀಡಲು ಕೆಐಎಡಿಬಿ ಹುನ್ನಾರ ಆರೋಪ
ಮಂಡ್ಯ: ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ತೆಂಗು ಹಾಗೂ ಅಡಿಕೆ ಮರಗಳು ನಾಶಗೊಂಡ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸಾಗ್ಯ ಗ್ರಾಮದಲ್ಲಿ ನಡೆದಿದೆ. ತೋಟಕ್ಕೆ ಅಳವಡಿಸಿದ್ದ ಪೈಪ್ಗಳು ಕೂಡ ಬೆಂಕಿಗೆ ಭಸ್ಮವಾಗಿವೆ. ಗ್ರಾಮದ ರಾಮಣ್ಣ ಎಂಬವರಿಗೆ ಸೇರಿದ ತೋಟದಲ್ಲಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ