ಬೆಂಗಳೂರು: ಬಾಗಲಗುಂಟೆ ಪೊಲೀಸ್​​ರಿಂದ ಕುಖ್ಯಾತ ಸರಗಳ್ಳರ ಗ್ಯಾಂಗ್ ಬಂಧನ

| Updated By: ವಿವೇಕ ಬಿರಾದಾರ

Updated on: Oct 10, 2022 | 2:55 PM

ರಾಜ್ಯದ ಮೂಲೆ ಮೂಲೆಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್​ನ್ನು ಬಾಗಲಗುಂಟೆ ಪೊಲೀಸ್​​ರು ಬಂಧಿಸಿದ್ದಾರೆ.

ಬೆಂಗಳೂರು: ಬಾಗಲಗುಂಟೆ ಪೊಲೀಸ್​​ರಿಂದ ಕುಖ್ಯಾತ ಸರಗಳ್ಳರ ಗ್ಯಾಂಗ್ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜ್ಯದ ಮೂಲೆ ಮೂಲೆಗಳಲ್ಲಿ ಸರಗಳ್ಳತನ (Chain snatching) ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್​ನ್ನು ಬಾಗಲಗುಂಟೆ ಪೊಲೀಸ್​​ರು ಬಂಧಿಸಿದ್ದಾರೆ. ಅಚ್ಯತ್ ಕುಮಾರ್ ಅಲಿಯಾಸ್ ಗಣಿ, ಪ್ರಸನ್ನ, ಸಿದ್ದರಾಜು ಬಂಧಿತ ಆರೋಪಿಗಳು. ಗ್ಯಾಂಗ್​​ ಹಲವು ಬಾರಿ ಜೈಲು ವಾಸ ಅನುಭವಿಸಿದ್ದಾರೆ. ಆದರೂ ತಮ್ಮ ಚಾಳಿ ಬಿಡದೆ ಸರಗಳ್ಳತನದಲ್ಲಿ ತೊಡಗಿಸಿಕೊಂಡಿದ್ದರು.ಈ ಗ್ಯಾಂಗ್ ನಾಯಕ ಮೇಲೆ 157 ಪ್ರಕರಣಗಳು ದಾಖಲಾಗಿವೆ.

ಗ್ಯಾಂಗ್​ ಬಾಗಲಗುಂಟೆ, ನಂದಿನಿಲೇಔಟ್, ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಗಳ್ಳತನ ಮಾಡಿತ್ತು. ಸುಮಾರು 30 ಸರಗಳ್ಳತನ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಗ್ಯಾಂಗ್​ನ್ನು ಬೆನ್ನಟ್ಟಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 5 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಬಾಗಲಗುಂಟೆ ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

 ಸ್ವಿಗ್ಗಿ ಡಿಲವರಿ ಬೈಕ್​ಗೆ ಕಾರು ಡಿಕ್ಕಿ; ಇಬ್ಬರಿಗೆ ಗಾಯ

ನಿನ್ನೆ (ಅ. 9) ರಾತ್ರಿ 10.30 ರ ಸುಮಾರಿಗೆ ನಗರದ ಸರ್ಜಾಪುರ ರಸ್ತೆಯಲ್ಲಿ ವೇಗವಾಗಿ ಬಂದ ಕಿಯಾ ಸೊನೆಟ್ ಕಾರು, ಹಿಂಬದಿಯಿಂದ ಸ್ವಿಗ್ಗಿ ಡಿಲವರಿ ಮಾಡುವ ಯವಕನ ಬೈಕ್​ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ರವಿ ಸೋನಿ ( 24), ಆಯುಸ್ ಸಿಂಗ್ (21) ಯುವಕರಿಗೆ ಗಾಯಗಳಾಗಿದ್ದು, ಆಸ್ಪತ್ರಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಕಾರಿನ ಚಕ್ರಕ್ಕೆ ಬೈಕ್ ಸಿಲುಕಿಕೊಂಡಿದೆ. ಕಿಯಾ ಕಾರು ಮತ್ತೆ ಮತ್ತೊಂದು ಕಾರಿಗೂ ಹಿಂಬದಿಯಿಂದ ಡಿಕ್ಕಿಯಾಗಿದೆ. ಹೆಚ್ಎಸ್ಆರ್ ಲೇಔಟ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹೃದಯಾಘಾತದಿಂದ ಪ್ರವಾಸಿ ಸಾವು

ಕೊಡಗು: ಹೃದಯಾಘಾತದಿಂದ ಪ್ರವಾಸಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಟಿಶೆಟ್ಟಿಗೇರಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಬಳ್ಳಾಪುರ ಮೂಲದ ಅಭಿಷೇಕ್ (31) ಮೃತ ದುರ್ದೈವಿ. ಬೆಂಗಳೂರಿನ ಸಿನರ್ಜಿ ಟೆಕ್ನಾಲಜಿಸ್ ಸಂಸ್ಥೆಯ ಉದ್ಯೋಗಿಯಾಗಿದ್ದ ಅಭಿಷೇಕ್, ಸಹೋದ್ಯೋಗಿಗಳೊಂದಿಗೆ ಕೊಡಗು ಪ್ರವಾಸ ಕೈಗೊಂಡಿದ್ದರು. ಪ್ರವಾಸಿಗರು ಟಿಶೆಟ್ಟಿಗೇರಿ ಗ್ರಾಮದ ಹೋಂಸ್ಟೇ ಒಂದರಲ್ಲಿ ತಂಗಿದ್ದರು. ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ.

ರಾಜ್ಯದ ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ