ಬೆಂಗಳೂರಿಗೆ ವಿಮಾನದಲ್ಲಿ ಬಂದು ಮನೆಗಳ್ಳತನ ಮಾಡುತ್ತಿದ್ದರು! ನಾಲ್ವರು ಆರೋಪಿಗಳನ್ನು ಬಂಧಿಸಿದ ಬಸವನಗುಡಿ ಪೊಲೀಸರು

| Updated By: guruganesh bhat

Updated on: Aug 30, 2021 | 3:50 PM

ಸಲೀಂ ಶೇಖ್, ಬಿಲಾಲ್ ಮಂಡಲ್, ಜಾಲಿಕ್ ಬಂಧಿತರು. ಇವರಿಂದ 3.3 ಕೆಜಿ ಚಿನ್ನದ ಆಭರಣ, 18 ಕೆಜಿ ಬೆಳ್ಳಿ ಸಾಮಾಗ್ರಿಗಳೂ ಸೇರಿ ಒಟ್ಟು ₹1.60 ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬೆಂಗಳೂರಿಗೆ ವಿಮಾನದಲ್ಲಿ ಬಂದು ಮನೆಗಳ್ಳತನ ಮಾಡುತ್ತಿದ್ದರು! ನಾಲ್ವರು ಆರೋಪಿಗಳನ್ನು ಬಂಧಿಸಿದ ಬಸವನಗುಡಿ ಪೊಲೀಸರು
ಪೊಲೀಸರೊಂದಿಗೆ ಬಂಧಿತರು
Follow us on

ಬೆಂಗಳೂರು: ಕಳೆದ ನಾಲ್ಕು ವರ್ಷದಿಂದ ಮನೆಗಳ್ಳತನ ಮಾಡುತ್ತಿದ್ದ ಆರೋಪದಡಿ ಬೆಂಗಳೂರಿನ ಬಸವನಗುಡಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರು ಬೆಂಗಳೂರಿನಲ್ಲಿ ಒಟ್ಟು 12 ಮನೆಗಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಗಳಾಗಿದ್ದಾರೆ. ಬೆಂಗಳೂರಿಗೆ ವಿಮಾನದಲ್ಲಿ ಬಂದು ಕಳ್ಳತನ ಮಾಡುತ್ತಿದ್ದರು. ಕದ್ದ ಮಾಲನ್ನು ಹೈದರಾಬಾದದ್​ನಲ್ಲಿ ಮಾರಾಟ ಮಾಡುತ್ತಿದ್ದರು ಎಂದು ಪೊಳಿಸರು ತಿಳಿಸಿದ್ದಾರೆ. ಸ್ವಂತ ಊರಿನಲ್ಲಿ ತಾವು ಬೆಂಗಳೂರಿನಲ್ಲಿ ಬ್ಯುಸಿನೆಸ್ ಮಾಡುವುದಾಗಿ ಆರೋಪಿಗಳು ಹೇಳಿಕೊಂಡಿದ್ದರು.

ಸಲೀಂ ಶೇಖ್, ಬಿಲಾಲ್ ಮಂಡಲ್, ಜಾಲಿಕ್ ಬಂಧಿತರು. ಇವರಿಂದ 3.3 ಕೆಜಿ ಚಿನ್ನದ ಆಭರಣ, 18 ಕೆಜಿ ಬೆಳ್ಳಿ ಸಾಮಾಗ್ರಿಗಳೂ ಸೇರಿ ಒಟ್ಟು ₹1.60 ಕೋಟಿ ಮೌಲ್ಯದ ಚಿನ್ನಾಭರಣ, ಬೆಳ್ಳಿ ಸಾಮಗ್ರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ವಶ. ಈ ಆರೋಪಿಗಳನ್ನು ಕರ್ನಾಟಕ‌ ಪೊಲೀಸರು ಇದೇ ಮೊದಲ ಬಾರಿಗೆ ಬಂಧಿಸಿದ್ದಾರೆ. ಬಂಧಿತರಲ್ಲಿ ಓರ್ವನಾದ ಸಲೀಂ ಅಲಿಯಾಸ್ ಶೋಕಿ ಸಲೀಂ ಈಹಿಂದೆ ಮುಂಬೈ ಪೊಲೀಸರಿಂದಲೂ ಬಂಧಿಸಲ್ಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬಳ್ಳಾರಿ: ವಾಟ್ಸ್​ಆ್ಯಪ್​ನಲ್ಲಿ ಪಾಕಿಸ್ತಾನದ ಪರ ಸ್ಟೇಟಸ್​ ಹಾಕಿದ ವ್ಯಕ್ತಿಯ ಬಂಧನ
ಬಳ್ಳಾರಿ: ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿ ಪಾಕಿಸ್ತಾನದ ಪರ ಸ್ಟೇಟಸ್ ಹಾಕಿದ್ದ  ವ್ಯಕ್ತಿಯೋರ್ವನನ್ನು ಸಿರುಗುಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದ ನಿವಾಸಿ, ಕಾರು ಚಾಲಕನೋರ್ವ ಈ ಕೃತ್ಯ ಎಸಗಿದ್ದು ಇದೀಗ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾನೆ. ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ವಿಶ್ವ ಹಿಂದೂ ಪರಿಷತ್​ನ ಕಾರ್ಯಕರ್ತರು ಸಿರುಗುಪ್ಪ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: 

ಸಿಎಂ ಬೊಮ್ಮಾಯಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲೇ 13 ಜನರ ಕಿಸೆಗೆ ಬಿತ್ತು ಕತ್ತರಿ! 1.50 ಲಕ್ಷ ಕಳ್ಳತನದ ಆರೋಪ

Crime Story: ಕಿಂಗ್ ಆಫ್ ಕ್ರೈಮ್: ದಾವೂದ್ ಇಬ್ರಾಹಿಂಗೆ ನಡುಕ ಹುಟ್ಟಿಸಿದ್ದ ಸ್ಲಂ ಡಾನ್

(Bengaluru Basavanagudi Police Arrest 4 accused who theft gold from 4 years) 

Published On - 3:25 pm, Mon, 30 August 21