ಭಾರತ್ ಬಂದ್ ವೇಳೆ ಪೊಲೀಸ್ ಇನ್ಸ್​ಪೆಕ್ಟರ್​ ವಾಕಿಟಾಕಿ ಕಳವು

| Updated By: guruganesh bhat

Updated on: Oct 03, 2021 | 4:23 PM

ಇದುವರೆಗೆ ಎಲ್ಲೂ ವಾಕಿಟಾಕಿ ಪತ್ತೆಯಾಗದ ಹಿನ್ನಲೆಯಲ್ಲಿ ದೂರು ದಾಖಲಾಗಿದೆ.

ಭಾರತ್ ಬಂದ್ ವೇಳೆ ಪೊಲೀಸ್ ಇನ್ಸ್​ಪೆಕ್ಟರ್​ ವಾಕಿಟಾಕಿ ಕಳವು
ಸಾಂಕೇತಿಕ ಚಿತ್ರ
Follow us on

ಬೆಂಗಳೂರು: ಸೆಪ್ಟೆಂಬರ್ 27ರ ಭಾರತ್ ಬಂದ್ ವೇಳೆ ಪೊಲೀಸ್ ಇನ್ಸ್‌ಪೆಕ್ಟರ್ ಓರ್ವರ ವಾಕಿಟಾಕಿ ಕಳವಾಗಿದೆ. ಎಸ್.ಜೆ.ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ಅವರ ವಾಕಿಟಾಕಿ ಭಾರತ್ ಬಂದ್ ವೇಳೆ ಟೌನ್​ಹಾಲ್ ಮುಂಭಾಗದಲ್ಲಿ ಕಳ್ಳತನ ನಡೆದಿದೆ. ಬಂದ್ ವೇಳೆ ಟೌನ್​ಹಾಲ್ ಮುಂಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಸಂಘಟನೆಗಳು ಸೇರಿದ್ದವು. ರಸ್ತೆ ತಡೆಗೆ ಮುಂದಾಗಿದ್ದ ವೇಳೆ ಗುಂಪನ್ನು ತಡೆಯಲು ಪೊಲೀಸರು ಯತ್ನಿಸಿದ್ದರು. ರೈತರ ಪ್ರತಿಭಟನಾ ಜಾಥಾದ ವೇಳೆ ಟೌನ್ ಹಾಲ್ ಬಳಿ ಇನ್ಸ್‌ಪೆಕ್ಟರ್ ಶಿವಕುಮಾರ್ ಕರ್ತವ್ಯಕ್ಕೆ ನಿಯೋಜನೆಯಾಗಿದ್ದರು. ಈವೇಳೆಯೇ ವಾಕಿ ಟಾಕಿ ಮಾರಾಟವಾಗಿದೆ ಎಂದು ಊಹಿಸಲಾಗಿದೆ. ಇದುವರೆಗೆ ಎಲ್ಲೂ ವಾಕಿಟಾಕಿ ಪತ್ತೆಯಾಗದ ಹಿನ್ನಲೆಯಲ್ಲಿ ದೂರು ದಾಖಲಾಗಿದೆ.

ಚಿತ್ರದುರ್ಗ: ಎಎಸ್​ಐ ಆತ್ಮಹತ್ಯೆ
ಚಿತ್ರದುರ್ಗ ತಾಲೂಕಿನ ಕುರುಬರಹಟ್ಟಿ ಬಳಿ ನಾಯಕನಹಟ್ಟಿ ಠಾಣೆ ಎಎಸ್ಐ ಗುರುಮೂರ್ತಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುಮೂರ್ತಿ ಅವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಚಿತ್ರದುರ್ಗ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 

‘ಗಂಧದ ಗುಡಿ’ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಕಾಕನಕೋಟೆ ಬೆಟ್ಟದಲ್ಲಿ ನಡೆದಿದ್ದೇನು ಎಂಬುದನ್ನು ವಿವರಿಸಿದ್ದಾರೆ ಬೆಂಗಳೂರು ನಾಗೇಶ್

ನಾಲ್ಕು ವ್ಯಕ್ತಿಗಳು, 20 ಜಾನುವಾರುಗಳನ್ನು ಕೊಂದ ನರಭಕ್ಷಕ ಹುಲಿಯ ಬೇಟೆಗೆ ಅರಣ್ಯ ಇಲಾಖೆ ಆದೇಶ

Published On - 4:16 pm, Sun, 3 October 21