AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಂಧದ ಗುಡಿ’ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಕಾಕನಕೋಟೆ ಬೆಟ್ಟದಲ್ಲಿ ನಡೆದಿದ್ದೇನು ಎಂಬುದನ್ನು ವಿವರಿಸಿದ್ದಾರೆ ಬೆಂಗಳೂರು ನಾಗೇಶ್

Gandhada Gudi: ‘ಗಂಧದ ಗುಡಿ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಬಂದೂಕಿನಿಂದ ಗುಂಡು ಸಿಡಿದ ಘಟನೆಯ ಸಂದರ್ಭದ ಸಂಪೂರ್ಣ ವಿವರವನ್ನು ಕನ್ನಡದ ಹಿರಿಯ ನಟ, ಆ ಘಟನೆಯ ಪ್ರತ್ಯಕ್ಷದರ್ಶಿ ಬೆಂಗಳೂರು ನಾಗೇಶ್ ಟಿವಿ9ನೊಂದಿಗೆ ಮಾತನಾಡುತ್ತಾ ಹಂಚಿಕೊಂಡಿದ್ದಾರೆ.

‘ಗಂಧದ ಗುಡಿ’ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಕಾಕನಕೋಟೆ ಬೆಟ್ಟದಲ್ಲಿ ನಡೆದಿದ್ದೇನು ಎಂಬುದನ್ನು ವಿವರಿಸಿದ್ದಾರೆ ಬೆಂಗಳೂರು ನಾಗೇಶ್
ಬೆಂಗಳೂರು ನಾಗೇಶ್
TV9 Web
| Edited By: |

Updated on: Sep 30, 2021 | 8:07 PM

Share

ಕನ್ನಡ ಚಿತ್ರರಂಗದಲ್ಲಿ ಬೆಂಗಳೂರು ನಾಗೇಶ್ ದೊಡ್ಡ ಹೆಸರು. ಅವರು ‘ಗಂಧದಗುಡಿ’, ‘ಮಯೂರ’ದಂತಹ ಕ್ಲಾಸಿಕ್ ಸಿನಿಮಾಗಳನ್ನೂ ಒಳಗೊಂಡಂತೆ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ‘ಗುರುಶಿಷ್ಯರು’, ‘ಬಂಗಾರದ ಮನುಷ್ಯ’, ‘ಶರಪಂಜರ’ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟನಾಗಿ, ಪೋಷಕನಟನಾಗಿ ಕನ್ನಡ ಚಿತ್ರರಂಗದಲ್ಲಿ ಕೃಷಿ ಮಾಡಿದ್ದಾರೆ. ನಾಗೇಶ್ ಹಾಗೂ ಡಾ.ರಾಜಕುಮಾರ್ ನಡುವೆ 30ಕ್ಕೂ ಅಧಿಕ ವರ್ಷಗಳ ಒಡನಾಟವಿತ್ತು. ಟಿವಿ9ನೊಂದಿಗೆ ಮಾತನಾಡಿರುವ ನಾಗೇಶ್, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

‘ಗಂಧದ ಗುಡಿ’ ಚಿತ್ರದ ಚಿತ್ರೀಕರಣದ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ನಿಜವಾಗಿಯೂ ನಡೆದಿದ್ದೇನು ಎಂಬುದನ್ನು ಅವರು ಇದೇ ವೇಳೆ ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ. ಗಂಧದ ಗುಡಿ ಚಿತ್ರದ ಸಮಯದಲ್ಲಿ ವಿಷ್ಣುವರ್ಧನ್ ಅವರಿಗೆ ‘ನಾಗರಹಾವು’ ಚಿತ್ರದಿಂದ ಯಶಸ್ಸು ಸಿಕ್ಕಿತ್ತು. ಡಾ.ರಾಜಕುಮಾರ್ ಅದಾಗಲೇ ಚಿತ್ರರಂಗದಲ್ಲಿ ಬಹುದೊಡ್ಡ ಹೆಸರು ಮಾಡಿದ್ದರು. ಆದರೂ ಸೆಟ್​ನಲ್ಲಿ ಇತರ ಕಲಾವಿದರೊಂದಿಗೆ ಎಲ್ಲಾ ನಟರೂ ಸಂತೋಷದಿಂದ, ಜೊತೆಯಾಗಿ ಕಾಲ ಕಳೆಯುತ್ತಿದ್ದರು ಎಂದು ಹಿರಿಯ ನಟರ ದೊಡ್ಡ ಗುಣಗಳನ್ನು ನಾಗೇಶ್ ತೆರೆದಿಟ್ಟಿದ್ದಾರೆ.

ಕಾಕನಕೋಟೆಯಲ್ಲಿ ಏನು ನಡೆಯಿತು ಎಂಬುದನ್ನು ತೆರೆದಿಟ್ಟ ಅವರು, ಕ್ಲೈಮ್ಯಾಕ್ಸ್ ಚಿತ್ರೀಕರಣದ ವೇಳೆ ಬಂದೂಕಿನಿಂದ ಗುಂಡು ಸಿಡಿದ ಸಂದರ್ಭದ ತಮ್ಮ ಪ್ರತ್ಯಕ್ಷ ಅನುಭವವನ್ನು ತೆರೆದಿಟ್ಟಿದ್ದಾರೆ.

ಟಿವಿ9ನೊಂದಿಗೆ ಅವರು ಮಾತನಾಡಿರುವ ವಿಡಿಯೊ ಇಲ್ಲಿದೆ:

ಅವತ್ತು ಘಟನೆ ನಡೆಯುವಾಗ ವಿಷ್ಣುವರ್ಧನ್ ಅವರು ಸ್ಥಳದಲ್ಲಿರಲೇ ಇಲ್ಲ. ಅವರ ಪಾಲಿನ ಚಿತ್ರೀಕರಣ ಮೊದಲೇ ಮುಗಿದಿತ್ತು. ಎಂಪಿ ಶಂಕರ್ ಅವರಿಗೆ ಶಿಕಾರಿಯ ಹವ್ಯಾಸವಿದ್ದುದರಿಂದ ಅವರು ಬಂದೂಕಿಗೆ ತುಂಬಿಸಿಟ್ಟಿದ್ದ ಗುಂಡನ್ನು ಬದಲಿಸಲು ಮರೆತಿದ್ದರು. ಒಂದು ವೇಳೆ ಹೆಚ್ಚು- ಕಡಿಮೆಯಾಗಿದ್ದರೆ ಬಹುದೊಡ್ಡ ಅಚಾತುರ್ಯ ಸಂಭವಿಸುತ್ತಿತ್ತು ಎಂದು ಆಗಿನ ಸಂದರ್ಭವನ್ನು ನಾಗೇಶ್ ವಿವರಿಸಿದ್ದಾರೆ. ಇದೇ ವೇಳೆ ಅವರು ಡಾ.ರಾಜ್ ಅವರಿಗೆ ಇಂಗ್ಲೀಷ್ ಕಲಿಸಿದ ಸುಂದರ ಅನುಭವವನ್ನೂ ತೆರೆದಿಟ್ಟಿದ್ದಾರೆ.

ಇದನ್ನೂ ಓದಿ:

3ನೇ ಕ್ಲಾಸ್​ ಓದಿದ ಡಾ. ರಾಜ್​ಕುಮಾರ್​ ಇಂಗ್ಲಿಷ್​ ಕಲಿತಿದ್ದು ಹೇಗೆ? ಇಲ್ಲಿದೆ ಅದರ ಸೀಕ್ರೆಟ್​

ಸಮಂತಾ ಅಕ್ಕಿನೇನಿ ಬಗ್ಗೆ ಹುಟ್ಟಿಕೊಂಡಿದೆ ಹೊಸದೊಂದು ಸುದ್ದಿ; ಅಭಿಮಾನಿಗಳು ಇದನ್ನು ಹೇಗೆ ಸ್ವೀಕರಿಸುತ್ತಾರೆ?