3ನೇ ಕ್ಲಾಸ್​ ಓದಿದ ಡಾ. ರಾಜ್​ಕುಮಾರ್​ ಇಂಗ್ಲಿಷ್​ ಕಲಿತಿದ್ದು ಹೇಗೆ? ಇಲ್ಲಿದೆ ಅದರ ಸೀಕ್ರೆಟ್​

ಡಾ. ರಾಜ್​ಕುಮಾರ್​ ಮತ್ತು ಬೆಂಗಳೂರು ನಾಗೇಶ್​ ಅವರ ನಡುವೆ 30 ವರ್ಷಗಳ ಒಡನಾಟ ಇತ್ತು. ಆ ನೆನಪುಗಳನ್ನು ನಾಗೇಶ್​ ಮೆಲುಕು ಹಾಕಿದ್ದಾರೆ. ಅಣ್ಣಾವ್ರು ಇಂಗ್ಲಿಷ್​ ಕಲಿತಿದ್ದು ಹೇಗೆ ಎಂಬುದನ್ನು ಅವರು​ ವಿವರಿಸಿದ್ದಾರೆ.

TV9kannada Web Team

| Edited By: Madan Kumar

Sep 30, 2021 | 9:58 AM

ಕೋಟ್ಯಂತರ ಜನರಿಗೆ ಡಾ. ರಾಜ್​ಕುಮಾರ್​ ಸ್ಫೂರ್ತಿ. ಅಣ್ಣಾವ್ರು ಓದಿದ್ದು 3ನೇ ತರಗತಿವರೆಗೆ ಮಾತ್ರ. ಆದರೆ ಸಿನಿಮಾಗಳಲ್ಲಿ ಇಂಗ್ಲಿಷ್​ನಲ್ಲೂ ಡೈಲಾಗ್​ ಹೊಡೆದು ಅವರು ಅಭಿಮಾನಿಗಳಿಂದ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಸಿನಿಮಾದಲ್ಲಿ ಸಾಧನೆ ಮಾಡಿ ಗೌರವ ಡಾಕ್ಟರೇಟ್​ ಪಡೆದ ಕಲಾವಿದ ಅವರು. ಯಾವುದೇ ವಯಸ್ಸಿನಲ್ಲೂ ಹೊಸದನ್ನು ಕಲಿಯುವ ಹಂಬಲ ಅವರಲ್ಲಿತ್ತು. ರಾಜ್​ಕುಮಾರ್​ ಇಂಗ್ಲಿಷ್​ ಕಲಿತಿದ್ದು ಹೇಗೆ ಎಂಬುದನ್ನು ಹಿರಿಯ ನಟ ಬೆಂಗಳೂರು ನಾಗೇಶ್​ ಅವರು ವಿವರಿಸಿದ್ದಾರೆ.

ಡಾ. ರಾಜ್​ ಮತ್ತು ಬೆಂಗಳೂರು ನಾಗೇಶ್​ ಅವರದ್ದು ಹಲವು ವರ್ಷಗಳ ಒಡನಾಟ. ‘ನಾನು ಎಜುಕೇಡೆಟ್​ ಆಗಿದ್ದರಿಂದ ಅಣ್ಣಾವ್ರಿಗೆ ನನ್ನನ್ನು ಕಂಡರೆ ಬಹಳ ಇಷ್ಟ. ಶೂಟಿಂಗ್​ ಇಲ್ಲದಿರುವ ದಿನಗಳಲ್ಲಿ ನಾನು ಅವರ ಮನೆಗೆ ತೆರಳುತ್ತಿದ್ದೆ. ಸಂಜೆ ಅವರ ಜೊತೆ ವಾಕಿಂಗ್​ ಹೋಗುತ್ತಿದ್ದೆ. ಅಣ್ಣಾ ನೀವು ಇಂಗ್ಲಿಷ್​ನಲ್ಲಿ ಮಾತನಾಡಬೇಕು ಅಂತ ಅವರಿಗೆ ಒಂದು ದಿನ ಹೇಳಿದೆ. ಮೂರನೇ ಕ್ಲಾಸ್​ ಓದಿದವನಿಗೆ ಇಂಗ್ಲಿಷ್​ ಎಲ್ಲಿ ಬರುತ್ತದೆ ಅಂತ ಅವರು ಹೇಳಿದರು. ಪ್ರತಿ ದಿನ ಎರಡೆರಡೇ ವಾಕ್ಯ ಹೇಳಿಕೊಡಲು ಶುರುಮಾಡಿದೆ. ಹೀಗೆ ಎಷ್ಟೋ ದಿನಗಳ ಕಾಲ ನಡೆಯಿತು. ಎಲ್ಲವನ್ನೂ ಪರ್ಫೆಕ್ಟ್​ ಆಗಿ ಅವರು ಕಲಿತರು. ಅವರ ಜೊತೆಗಿನ ಒಡನಾಟ ನನ್ನ ಭಾಗ್ಯ ಎಂದೇ ಹೇಳಬೇಕು’ ಎನ್ನುತ್ತಾರೆ ಬೆಂಗಳೂರು ನಾಗೇಶ್​.

ಇದನ್ನೂ ಓದಿ:

‘ಡಾ. ರಾಜ್​ಕುಮಾರ್​ ನೋಡಿ ಮೆಚ್ಚಿದ್ದ ಧಾರಾವಾಹಿ ಅದು’; ಅಪರೂಪದ ಕ್ಷಣ ನೆನಪಿಸಿಕೊಂಡ ಶ್ರೀದೇವಿ

ಡಾ. ರಾಜ್​ ತಂದೆ, ಫ್ಯಾಮಿಲಿ ಬಗ್ಗೆ ವಿವರಿಸುವ ಅಪರೂಪದ ವಿಡಿಯೋ; 53 ವರ್ಷಗಳ ಹಿಂದಿನ ಅಣ್ಣಾವ್ರ ಮಾತು

Follow us on

Click on your DTH Provider to Add TV9 Kannada