ಡಾ. ರಾಜ್​ ತಂದೆ, ಫ್ಯಾಮಿಲಿ ಬಗ್ಗೆ ವಿವರಿಸುವ ಅಪರೂಪದ ವಿಡಿಯೋ; 53 ವರ್ಷಗಳ ಹಿಂದಿನ ಅಣ್ಣಾವ್ರ ಮಾತು

ರಾಜ್​ಕುಮಾರ್​ ಕುರಿತಾದ ಈ ವಿಡಿಯೋ ತುಂಬ ವಿಶೇಷವಾಗಿದೆ. ಯಾಕೆಂದರೆ, ಇದು ಬರೋಬ್ಬರಿ 53 ವರ್ಷಗಳಷ್ಟು ಹಳೇ ವಿಡಿಯೋ. ಇದನ್ನು ಚಿತ್ರೀಕರಿಸಿದ್ದು 1968ರ ಸಂದರ್ಭದಲ್ಲಿ.

ಡಾ. ರಾಜ್​ ತಂದೆ, ಫ್ಯಾಮಿಲಿ ಬಗ್ಗೆ ವಿವರಿಸುವ ಅಪರೂಪದ ವಿಡಿಯೋ; 53 ವರ್ಷಗಳ ಹಿಂದಿನ ಅಣ್ಣಾವ್ರ ಮಾತು
ರಾಜ್​ಕುಮಾರ್​ ಕುಟುಂಬ
Follow us
TV9 Web
| Updated By: ಮದನ್​ ಕುಮಾರ್​

Updated on: Sep 25, 2021 | 8:25 AM

ನಟ ಡಾ. ರಾಜ್​ಕುಮಾರ್​ ಮಾಡಿದ ಸಾಧನೆಗೆ ಸಾಟಿಯೇ ಇಲ್ಲ. ಹಲವು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ನೂರಾರು ಪಾತ್ರಗಳ ಮೂಲಕ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಆ ಮೂಲಕ ಅವರು ಎಂದೆಂದಿಗೂ ಅಮರ. ಅಣ್ಣಾವ್ರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಅಭಿಮಾನಿಗಳ ಸದಾ ಬಯಸುತ್ತಾರೆ. ಅದರಲ್ಲೂ ಡಾ. ರಾಜ್​ ಕುಟುಂಬದ ಹಿನ್ನೆಲೆ ಬಗ್ಗೆ ತಿಳಿಯಲು ಎಲ್ಲರಿಗೂ ಆಸಕ್ತಿ. ಅದನ್ನು ವಿವರಿಸುವ ಒಂದು ವಿಡಿಯೋವನ್ನು ಅವರ ಪುತ್ರ ರಾಘವೇಂದ್ರ ರಾಜ್​ಕುಮಾರ್​ ಹಂಚಿಕೊಂಡಿದ್ದಾರೆ. ಅದೀಗ ಸಖತ್ ವೈರಲ್​ ಆಗುತ್ತಿದೆ.

ರಾಜ್​ಕುಮಾರ್​ ಅವರಿಗೆ ಸಂಬಂಧಿಸಿದ ಅನೇಕ ಫೋಟೋ ಮತ್ತು ವಿಡಿಯೋಗಳನ್ನು ರಾಘವೇಂದ್ರ ರಾಜ್​ಕುಮಾರ್​ ಅವರು ಆಗಾಗ ಶೇರ್​ ಮಾಡಿಕೊಳ್ಳುತ್ತಾ ಇರುತ್ತಾರೆ. ಅದೇ ರೀತಿ ಈಗ ಅವರು ಹಂಚಿಕೊಂಡಿರುವ ವಿಡಿಯೋ ತುಂಬ ವಿಶೇಷವಾಗಿದೆ. ಯಾಕೆಂದರೆ, ಅದು ಬರೋಬ್ಬರಿ 53 ವರ್ಷಗಳಷ್ಟು ಹಳೇ ವಿಡಿಯೋ. ಅದನ್ನು ಚಿತ್ರೀಕರಿಸಿದ್ದು 1968ರ ಸಂದರ್ಭದಲ್ಲಿ.

1954ರಲ್ಲಿ ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಹೀರೋ ಆಗಿ ಬಡ್ತಿ ಪಡೆದ ರಾಜ್​ಕುಮಾರ್​ ಅವರು 1968ನೇ ಇಸವಿ ಸಮೀಪಿಸಿದಾಗ ಬರೋಬ್ಬರಿ 100 ಸಿನಿಮಾಗಳಲ್ಲಿ ನಟಿಸಿದರು. ಅಂಥ ಸಾಧನೆ ಮಾಡಿದ್ದಕ್ಕಾಗಿ ಅವರನ್ನು ಸನ್ಮಾನಿಸಲಾಯಿತು. ಆ ಸಂದರ್ಭದ ವಿಡಿಯೋ ಇದಾಗಿದ್ದು, ತಮ್ಮ ಕುಟುಂಬದ ಬಗ್ಗೆ ಸ್ವತಃ ರಾಜ್​ಕುಮಾರ್​ ಅವರು ವಿವರಿಸಿದ್ದರು. ಕುಟುಂಬದ ಸದಸ್ಯರ ಬಗ್ಗೆ ಪರಿಚಯ ಮಾಡಿಕೊಟ್ಟಿದ್ದರು. ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಿದ್ದರು. ಅಲ್ಲದೇ ತಮ್ಮ ಹುಟ್ಟೂರಿನ ಬಗ್ಗೆ ಅಪಾರ ಅಭಿಮಾನದಿಂದ ಅಣ್ಣಾವ್ರು ಹೇಳಿಕೊಂಡಿದ್ದರು.

‘ಅಪ್ಪಾಜಿಯವರು 100 ಚಿತ್ರಗಳನ್ನು ಪೂರೈಸಿದಕ್ಕೆ 1968ರಲ್ಲಿ ಬೆಂಗಳೂರಿನಲ್ಲಿ ನಡೆದ ಬೃಹತ್ ಮೆರವಣಿಗೆ ನಂತರ ಅವರನ್ನು ಚಿತ್ರರಂಗದ ಹಲವು ಗಣ್ಯರು ನಮ್ಮ ನಿವಾಸದಲ್ಲಿ ಭೇಟಿಯಾದ ಅಪರೂಪದ ಸಮಯ’ ಎಂದು ರಾಘವೇಂದ್ರ ರಾಜ್​ಕುಮಾರ್​ ಅವರು ಈ ವಿಡಿಯೋಗೆ ಕ್ಯಾಪ್ಷನ್​ ನೀಡಿದ್ದಾರೆ.​ ಈ ವಿಡಿಯೋ ಹಂಚಿಕೊಂಡಿರುವುದಕ್ಕೆ ಅಭಿಮಾನಿಗಳು ಸಂಸತ ವ್ಯಕ್ತಪಡಿಸುತ್ತಿದ್ದಾರೆ. ಮೇರು ನಟನ ಬಗ್ಗೆ ತಮಗಿರುವ ಅಭಿಮಾನವನ್ನು ಕಮೆಂಟ್​ಗಳ ಮೂಲಕ ತಿಳಿಸುತ್ತಿದ್ದಾರೆ. ಪುನೀತ್​ ರಾಜ್​ಕುಮಾರ್​ ಕೂಡ ಸೆ.24ರಂದು ಒಂದು ಅಪರೂಪದ ಫೋಟೋ ಶೇರ್​ ಮಾಡಿಕೊಂಡಿದ್ದರು.

ಇದನ್ನೂ ಓದಿ:

‘ಎಲ್ಲರಿಗೂ ಇಂಥ ಆಸೆ ಇರುತ್ತೆ, ನಂಗೆ ಇರಲ್ವಾ?’ ವಜ್ರೇಶ್ವರಿ ಕಂಬೈನ್ಸ್​ ಬಗ್ಗೆ ಡಾ. ರಾಜ್​ ಮೊಮ್ಮಗಳ ಮನದ ಮಾತು

‘ಡಾ. ರಾಜ್​ಕುಮಾರ್​ ನೋಡಿ ಮೆಚ್ಚಿದ್ದ ಧಾರಾವಾಹಿ ಅದು’; ಅಪರೂಪದ ಕ್ಷಣ ನೆನಪಿಸಿಕೊಂಡ ಶ್ರೀದೇವಿ

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ