SPB Death Anniversary: ಎಸ್ಪಿಬಿ ನಿಧನರಾಗಿ ಒಂದು ವರ್ಷ; ಮಹಾನ್ ಗಾಯಕನ ಪುಣ್ಯಸ್ಮರಣೆಗೆ ವಿಶೇಷ ಹಾಡು, ನುಡಿ ನಮನ
ಎಸ್ಪಿಬಿ ಪುಣ್ಯತಿಥಿ: ಮಹಾನ್ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಭೌತಿಕವಾಗಿ ನಮ್ಮನ್ನೆಲ್ಲ ಅಗಲಿ ಇಂದಿಗೆ (ಸೆ.25) ಒಂದು ವರ್ಷ ಕಳೆದಿದೆ. ಮೊದಲ ವರ್ಷದ ಪುಣ್ಯಸ್ಮರಣೆಯ ಈ ಸಂದರ್ಭದಲ್ಲಿ ಅವರಿಗೆ ಅಭಿಮಾನಿಗಳು ನಮನ ಸಲ್ಲಿಸುತ್ತಿದ್ದಾರೆ.
2020ರ ಸೆ.25. ಅದು ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಅಭಿಮಾನಿಗಳ ಪಾಲಿಗೆ ಅತ್ಯಂತ ನೋವಿನ ದಿನ. ಬಹಳ ದಿನಗಳಿಂದ ಚೈನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್ಪಿಬಿ ಬದುಕಿ ಬರಲಿ ಎಂದು ಕೋಟ್ಯಂತರ ಅಭಿಮಾನಿಗಳು ಮಾಡಿದ್ದ ಪ್ರಾರ್ಥನೆ ಅಂದು ಫಲಿಸಲೇ ಇಲ್ಲ. ಆ ಘಟನೆ ನಡೆದು ಇಂದಿಗೆ ಒಂದು ವರ್ಷ ಕಳೆದಿದೆ. ಸಿನಿಮಾ ಸಂಗೀತ ಲೋಕದಲ್ಲಿ ದಿಗ್ಗಜ ಗಾಯಕರಾಗಿದ್ದ ಎಸ್.ಪಿ.ಬಿ. ಅವರ ಮೊದಲ ವರ್ಷದ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ.
ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದುಕೊಂಡ ನೋವು ಎಂದೂ ಮರೆಯಾಗುವಂಥದ್ದಲ್ಲ. ಭೌತಿಕವಾಗಿ ಎಸ್ಪಿಬಿ ಅವರು ಇಹಲೋಕ ತ್ಯಜಿಸಿದ್ದರೂ ಕೂಡ ಹಾಡುಗಳ ಮೂಲಕ ಸದಾ ಜೀವಂತವಾಗಿದ್ದಾರೆ. ಇಂದು ಅವರ ಮೊದಲ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನೂರಾರು ಸೆಲೆಬ್ರಿಟಿಗಳು ನಮನ ಸಲ್ಲಿಸುತ್ತಿದ್ದಾರೆ. ವಿಶೇಷ ಹಾಡುಗಳ ಮೂಲಕ ಬಾಲಸುಬ್ರಹ್ಮಣ್ಯಂ ಅವರನ್ನು ನೆನಪಿಸಿಕೊಳ್ಳಲಾಗುತ್ತಿದೆ. ಸಿನಿಸಂಗೀತ ಕ್ಷೇತ್ರದ ಹಲವರು ಟ್ವೀಟ್ ಮಾಡಿ ತಮ್ಮ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಕನ್ನಡದ ‘ಅಕ್ಷಿ’ ಚಿತ್ರಕ್ಕೆ ಇತ್ತೀಚೆಗೆ ರಾಷ್ಟ್ರಪ್ರಶಸ್ತಿ ಒಲಿದು ಬಂತು. ಆ ಚಿತ್ರದ ಸಂಗೀತ ನಿರ್ದೇಶಕ ಕಲಾದೇಗುಲ ಶ್ರೀನಿವಾಸ್ ಅವರು ರಚಿಸಿದ ‘ಎಸ್ಪಿಬಿ ನಮ್ಮ ಎಸ್ಪಿಬಿ..’ ಹಾಡು ಬಿಡುಗಡೆ ಆಗಿದೆ. ಕಲಾದೇಗುಲ ಶ್ರೀನಿವಾಸ್ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಗೀತೆಗೆ ಖ್ಯಾತ ಗಾಯಕರಾದ ಹೇಮಂತ್ ಕುಮಾರ್ ಮತ್ತು ಎಂ.ಡಿ. ಪಲ್ಲವಿ ಧ್ವನಿ ನೀಡಿದ್ದಾರೆ. ಈ ಹಾಡಿನ ಮೂಲಕ ಅವರನ್ನು ಸ್ಮರಿಸಿಕೊಳ್ಳಲಾಗುತ್ತಿದೆ.
“ There is no end to a song . It travels with us forever” – SPB And,so do you, S P Balasubhramanyam Garu. Your legacy lives on. Heartfelt tributes on the first Punyatithi of the legendary #SPBalasubhramanyam pic.twitter.com/pLDGUWl8Ry
— VVS Laxman (@VVSLaxman281) September 25, 2021
ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ ಬಾಲಸುಬ್ರಹ್ಮಣ್ಯಂ ಅವರಿಗೆ ನುಡಿ ನಮನ ಸಲ್ಲಿಸಿದ್ದಾರೆ. ‘ಒಂದು ಹಾಡಿಗೆ ಕೊನೆ ಎಂಬುದಿಲ್ಲ. ಅದು ನಮ್ಮೊಂದಿಗೆ ಮುಂದುವರಿಯುತ್ತದೆ ಅಂತ ನೀವು ಹೇಳಿದ್ರಿ. ಅದೇ ರೀತಿ ನಿಮಗೂ ಕೊನೆ ಇಲ್ಲ. ನಿಮ್ಮ ಪರಂಪರೆ ಮುಂದುವರೆಯುತ್ತದೆ. ಲೆಜೆಂಡರಿ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮೊದಲ ವರ್ಷದ ಪುಣ್ಯತಿಥಿಯ ನಮನಗಳು’ ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:
ಎಸ್.ಪಿ. ಬಾಲಸುಬ್ರಹ್ಮಣ್ಯಂ ನೆನೆದು ಹಾಡುವಾಗಲೇ ಕಣ್ಣೀರಿಟ್ಟ ರಾಜೇಶ್ ಕೃಷ್ಣನ್
‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಎಸ್ಪಿಬಿ ಧ್ವನಿ; ಭಾವುಕರಾದ ಪುತ್ರ ಚರಣ್