AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮ್ಮನ ಗೈರು ಹಾಜರಿಯಲ್ಲಿ ಜಾಹ್ನವಿ ಕಪೂರ್ ವೃತ್ತಿಬದುಕನ್ನು ತಾವೇ ರೂಪಿಸಿಕೊಳ್ಳುತ್ತಿದ್ದಾರೆ

ಅಮ್ಮನ ಗೈರು ಹಾಜರಿಯಲ್ಲಿ ಜಾಹ್ನವಿ ಕಪೂರ್ ವೃತ್ತಿಬದುಕನ್ನು ತಾವೇ ರೂಪಿಸಿಕೊಳ್ಳುತ್ತಿದ್ದಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Sep 30, 2021 | 4:01 PM

Share

ಜಾಹ್ನವಿ ಆಕರ್ಷಕ ರೂಪ ಮತ್ತು ಸುಂದರ ಮೈಮಾಟದ ಯುವತಿ. ಅವರ ಸೌಂದರ್ಯ ಆರಾಧಕರು ಬೇಜಾನ್ ಜನ ಇದ್ದಾರೆ. ಉಡುಪು ಯಾವುದೇ ಆಗಿರಲಿ ಅವರಿಗೆ ಚೆನ್ನಾಗಿ ಒಪ್ಪುತ್ತದೆ.

ಬಾಲಿವುಡ್ ಗೆ 2018 ರಲ್ಲಿ ಪ್ರವೇಶಿಸಿದ ದಿವಂಗತ ಶ್ರೀದೇವಿ ಮತ್ತು ಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರ ಸೋನಿ ಕುಡಿ ಜಾಹ್ನವಿ ಕಪೂರ್ ತನಗೆ ಸಿಗುತ್ತಿರುವ ಸೀಮಿತ ಅವಕಾಶಗಳಲ್ಲಿ ಮಿಂಚುತ್ತಿದ್ದಾರೆ. ತನ್ನ ತಾಯಿಯಂತೆ ಸುರಸುಂದರಿ ಮತ್ತು ಅವರಷ್ಟು ಪ್ರತಿಭಾನ್ವಿತೆ ಅಲ್ಲದಿದ್ದರೂ ಜಾಹ್ನವಿ ಹೆಸರು ಮಾಡುತ್ತಿರೋದು ಸುಳ್ಳಲ್ಲ. 2018 ರಲ್ಲಿ ಜಾಹ್ನವಿಯ ಮೊದಲ ಚಿತ್ರ ಧಡಕ್ ರಿಲೀಸ್ ಆದಾಗ ಅವರ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದವು. ಬಹಳಷ್ಟು ಜನ ಅವರನ್ನು ಶ್ರೀದೇವಿ ಜೊತೆ ಕಂಪೇರ್ ಮಾಡಿ ಮಾತಾಡಲಾರಂಭಿಸಿದ್ದರು. ಶ್ರೀದೇವಿ ಒಬ್ಬ ಲೆಜೆಂಡರಿ ಕಲಾವಿದೆಯಾಗಿದ್ದರು. ಅವರೊಂದಿಗೆ ಜಾಹ್ನವಿ ಯಾಕೆ ಈಗಿನ ಯಾವುದೇ ನಟಿಯನ್ನು ಅವರೊಂದಿಗೆ ಹೋಲಿಸಲಾಗದು.

ಜಾಹ್ನವಿ ಆಕರ್ಷಕ ರೂಪ ಮತ್ತು ಸುಂದರ ಮೈಮಾಟದ ಯುವತಿ. ಅವರ ಸೌಂದರ್ಯ ಆರಾಧಕರು ಬೇಜಾನ್ ಜನ ಇದ್ದಾರೆ. ಉಡುಪು ಯಾವುದೇ ಆಗಿರಲಿ ಅವರಿಗೆ ಚೆನ್ನಾಗಿ ಒಪ್ಪುತ್ತದೆ. ಇಲ್ಲಿರುವ ವಿಡಿಯೋನಲ್ಲಿ ಅವರು ವಿಧವಿಧವಾದ ಹಸಿರು ಬಣ್ಣದ ಉಡುಗೆಗಳಲ್ಲಿ ಕಂಗೊಳಿಸುತ್ತಿದ್ದಾರೆ. ಗ್ರೀನ್ ಅವರ ಅಚ್ಚುಮೆಚ್ಚಿನ ಬಣ್ಣವಂತೆ. ಪ್ರತಿಯೊಬ್ಬ ನಟಿಗೆ ಯಾವುದೋ ಒಂದು ಬಣ್ಣ ಬಹಳ ಇಷ್ಟವಾಗುತ್ತದೆ, ಹಾಗೆಯೇ, ಜಾಹ್ನವಿಗೆ ಹಸಿರು ಇಷ್ಟ.

ಹಸಿರು ಉಡುಗೆಯಲ್ಲಿ ಜಾಹ್ನವಿ ನಿಸ್ಸಂದೇಹವಾಗಿ ತುಂಬಾ ಮುದ್ದುಮುದ್ದಾಗಿ ಕಾಣುತ್ತಾರೆ. ಅವರ ಫೋಟೋಗಳನ್ನು ನೋಡಿದ ಬಳಿಕ ನೀವು ಸಹ ಇದೇ ಮಾತನ್ನು ಹೇಳುತ್ತೀರಿ. ಶ್ರೀದೇವಿ ಬದುಕಿರುವವರೆಗೆ ಅವರೇ ಜಾಹ್ನವಿಗೆ ಮೆಂಟರ್ ಆಗಿದ್ದರು. ಆದರೆ, ತಮ್ಮ ಮಗಳು ಸ್ಟಾರ್ ಆಗುವ ಮೊದಲೇ ಅವರು ಇಹಲೋಕದ ಯಾತ್ರೆಯನ್ನು ಪೂರ್ತಿಗೊಳಿಸಿದರು. ಅವರು ಗತಿಸಿದ ವರ್ಷವೇ ಧಡಕ್ ಸಿನಿಮಾ ರಿಲೀಸ್ ಆಗಿತ್ತು.

ಅಮ್ಮನ ಗೈರು ಹಾಜರಿಯಲ್ಲಿ ಜಾಹ್ನವಿ ಕರೀಯರ್ ಅನ್ನು ತಾವೇ ರೂಪಿಸಿಕೊಳ್ಳುತ್ತಿದ್ದಾರೆ. ಅವರ ಕೈಯಲ್ಲೀಗ ಮೂರು ಚಿತ್ರಗಳಿವೆ-ದೋಸ್ತಾನಾ-2, ಗುಡ್ ಲಕ್ ಜೆರ್ರಿ ಮತ್ತು ಮಿಲಿ.

ಇದನ್ನೂ ಓದಿ:  ಬಾಲಿವುಡ್​ ನಟಿ ಜಾಹ್ನವಿ ಕೇಳಿದ ಪ್ರಶ್ನೆಗೆ ನಿಮ್ಮಿಂದ ಉತ್ತರ ಕೊಡೋಕೆ ಸಾಧ್ಯವೇ?