ಸಮಂತಾ ಅಕ್ಕಿನೇನಿ ಬಗ್ಗೆ ಹುಟ್ಟಿಕೊಂಡಿದೆ ಹೊಸದೊಂದು ಸುದ್ದಿ; ಅಭಿಮಾನಿಗಳು ಇದನ್ನು ಹೇಗೆ ಸ್ವೀಕರಿಸುತ್ತಾರೆ?

ಸಮಂತಾ ಅಕ್ಕಿನೇನಿ ಇತ್ತೀಚೆಗೆ ಮಾಧ್ಯಮದ ಜತೆ ಮಾತನಾಡುತ್ತಾ, ಚಿತ್ರರಂಗದಿಂದ ಬ್ರೇಕ್​ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದರು. ಇದು ನಿಜಕ್ಕೂ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು.

ಸಮಂತಾ ಅಕ್ಕಿನೇನಿ ಬಗ್ಗೆ ಹುಟ್ಟಿಕೊಂಡಿದೆ ಹೊಸದೊಂದು ಸುದ್ದಿ; ಅಭಿಮಾನಿಗಳು ಇದನ್ನು ಹೇಗೆ ಸ್ವೀಕರಿಸುತ್ತಾರೆ?
ಸಮಂತಾ ಅಕ್ಕಿನೇನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 30, 2021 | 7:24 PM

ನಾಗ ಚೈತನ್ಯ ಜತೆ ನಟಿ ಸಮಂತಾ ವಿಚ್ಛೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ, ಅವರ ಸಂಬಂಧ ಶೀಘ್ರವೇ ಮುರಿದು ಬೀಳಲಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡುತ್ತಲೇ ಇವೆ. ಆದರೆ, ಇದಕ್ಕೆ ಅವರ ಕಡೆಯಿಂದ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಸಮಂತಾ ಅವರಂತೂ ಆ ಬಗ್ಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ. ಇನ್ನು, ಅಕ್ಕಿನೇನಿ ಕುಟುಂಬ ಮಾಧ್ಯಮದ ಎದುರು ಬರುತ್ತಿಲ್ಲ. ಹೀಗಿರುವಾಗಲೇ ಈಗ ಸಮಂತಾ ಬಗ್ಗೆ  ಹೊಸದೊಂದು ವದಂತಿ ಹುಟ್ಟಿಕೊಂಡಿದೆ. ಸಮಂತಾ ಹಾಗೂ ನಾಗ ಚೈತನ್ಯ ಮಗುವನ್ನು ಹೊಂದಲು ಆಲೋಚಿಸುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಸಮಂತಾ ಅಕ್ಕಿನೇನಿ ಇತ್ತೀಚೆಗೆ ಮಾಧ್ಯಮದ ಜತೆ ಮಾತನಾಡುತ್ತಾ, ಚಿತ್ರರಂಗದಿಂದ ಬ್ರೇಕ್​ ತೆಗೆದುಕೊಳ್ಳುವ ಬಗ್ಗೆ ಮಾತನಾಡಿದ್ದರು. ಇದು ನಿಜಕ್ಕೂ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಸಮಂತಾ ಸದ್ಯ, ಯಾವುದೇ ಕಥೆಯನ್ನು ಕೇಳುತ್ತಿಲ್ಲ. ಮಗು ಹೊಂದಬೇಕು ಎನ್ನುವ ಆಲೋಚನೆಯೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

‘ನನ್ನ ಬಾಲ್ಯ ಅಷ್ಟು ಅದ್ಭುತವಾಗಿರಲಿಲ್ಲ. ನನಗೆ ಹುಟ್ಟುವ ಮಕ್ಕಳಿಗೆ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ಹೀಗಾಗಿ, ಮಗು ಜನಿಸಿದ ನಂತರ ನಾನು ನಟನೆಯಿಂದ ಸ್ವಲ್ಪ ವರ್ಷ ಬ್ರೇಕ್​ ಪಡೆಯುತ್ತೇನೆ’ ಎಂದು ಕೆಲ ವರ್ಷಗಳ ಹಿಂದೆ ಹೇಳಿದ್ದರು ಸಮಂತಾ. ಈ ಕಾರಣಕ್ಕೆ ಅವರು ಈಗ ಯಾವುದೇ ಪ್ರಾಜೆಕ್ಟ್​ಗಳಿಗೆ ಓಕೆ ಎಂದಿಲ್ಲ ಎನ್ನಲಾಗುತ್ತಿದೆ.

‘ದಿ ಫ್ಯಾಮಿಲಿ ಮ್ಯಾನ್​ 2’ನಲ್ಲಿ ಸಮಂತಾ ನಟಿಸಿದ್ದರು. ಅವರ ಅದ್ಭುತ ನಟನೆ ಅನೇಕರಿಗೆ ಇಷ್ಟವಾಗಿತ್ತು. ಅಲ್ಲದೆ, ಹಿಂದಿ ಮಂದಿ ಸಮಂತಾ ನಟನೆಯನ್ನು ಇಷ್ಟಪಟ್ಟಿದ್ದರು. ಇದರ ಲಾಭ ಪಡೆಯೋಕೆ ಬಾಲಿವುಡ್​ನ ಕೆಲ ನಿರ್ಮಾಪಕರು ಪ್ಲ್ಯಾನ್​ ಹಾಕಿಕೊಂಡಿದ್ದಾರೆ. ಹೀಗಾಗಿ, ಸಮಂತಾಗೆ ಬಾಲಿವುಡ್​ ಕಡೆಯಿಂದ ಸಾಕಷ್ಟು ಆಫರ್​ಗಳು ಬರೋಕೆ ಆರಂಭವಾಗಿದೆ. ಆದರೆ, ಇದನ್ನು ಸಮಂತಾ ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ.

ಸಮಂತಾ ಬಗ್ಗೆ ದಿನಕ್ಕೊಂದು ವದಂತಿ ಹುಟ್ಟಿಕೊಳ್ಳುತ್ತಲೇ ಇದೆ.   ಇದರಲ್ಲಿ ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎಂಬ ಗೊಂದಲದಲ್ಲಿ ಅಭಿಮಾನಿಗಳು ಇದ್ದಾರೆ. ಈ ಪ್ರಶ್ನೆಗೆ ಸಮಂತಾ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ. ಅಲ್ಲದೆ, ಹೊಸ ವದಂತಿಯನ್ನು ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಇದೆ. ಅಕ್ಟೋಬರ್​ 6 ಸಮಂತಾ-ನಾಗ ಚೈತನ್ಯ ಮದುವೆ ವಾರ್ಷಿಕೋತ್ಸವ. ಈ ದಿನ ಏನಾಗಿದೆ ಎಂಬ ಬಗ್ಗೆ ಸ್ಪಷ್ಟನೆ ಸಿಗುವ ಸಾಧ್ಯತೆ ಇದೆ.

ಇದನ್ನೂ ಓದಿ: 10 ಕೋಟಿ ರೂ. ಖರ್ಚಿನಲ್ಲಿ ಆದ ಮದುವೆಯ ವ್ಯಾಲಿಡಿಟಿ 4 ವರ್ಷ ಮಾತ್ರವೇ? ಅ.6ಕ್ಕೆ ಸಮಂತಾ-ನಾಗ ಚೈತನ್ಯ ಭವಿಷ್ಯ ನಿರ್ಧಾರ

ಸಮಂತಾರ ಖಾಸಗಿ ಅಂಗದ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದ ನಟಿ ಶ್ರೀರೆಡ್ಡಿಗೆ ಈಗ ಅವರ ದಾಂಪತ್ಯದ್ದೇ ಚಿಂತೆ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ