ರೌಡಿಶೀಟರ್ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ ಪ್ರಕರಣ: ಆರೋಪಿಗಳ ಬಂಧನಕ್ಕೆ ಮೂರು ತನಿಖಾ ತಂಡ ರಚನೆ

ಬದ್ಧ ವೈರತ್ವದಲ್ಲಿ ಮೂರು ಕೊಲೆ ಮತ್ತು ಒಂದು ಕೊಲೆ ಯತ್ನದಲ್ಲಿ ಭಾಗಿಯಾಗಿದ್ದ ಶಿವಶಂಕರ್ ರೆಡ್ಡಿ ಮೇಲಿನ ಗುಂಡಿನ ದಾಳಿ ಪ್ರಕರಣ ಸಂಬಂಧ ಆರೋಪಿಗಳ ಬಂಧನಕ್ಕೆ ಮೂರು ತನಿಖಾ ತಂಡಗಳನ್ನು ರಚಿಸಲಾಗಿದೆ.

ರೌಡಿಶೀಟರ್ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ ಪ್ರಕರಣ: ಆರೋಪಿಗಳ ಬಂಧನಕ್ಕೆ ಮೂರು ತನಿಖಾ ತಂಡ ರಚನೆ
ರೌಡಿಶೀಟರ್ ಶಿವಶಂಕರ್ ರೆಡ್ಡಿ ಮತ್ತು ಅಶೋಕ್ ರೆಡ್ಡಿ
Updated By: Rakesh Nayak Manchi

Updated on: Dec 09, 2022 | 11:40 AM

ಬೆಂಗಳೂರು: ನಗರದಲ್ಲಿ ಆಂಧ್ರದ ರೌಡಿಶೀಟರ್ ಶಿವಶಂಕರ್ ರೆಡ್ಡಿ ಸೇರಿದಂತೆ ಇಬ್ಬರ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣ (Fire case) ಸಂಬಂಧ ಆರೋಪಿಗಳ ಬಂಧನಕ್ಕೆ ಪೊಲೀಸರು ಮೂರು ತನಿಖಾ ತಂಡಗಳನ್ನು ರಚಿಸಿದ್ದಾರೆ. ಮೂರು ಕೊಲೆ ಮತ್ತು ಒಂದು ಕೊಲೆ ಯತ್ನದಲ್ಲಿ ಶಿವಶಂಕರ್ ರೆಡ್ಡಿ ಭಾಗಿಯಾಗಿದ್ದನು. ಶಿವಶಂಕರ್ ರೆಡ್ಡಿ ಹಾಗೂ ಬೈರಾ ರೆಡ್ಡಿ ಕುಟುಂಬಗಳ ನಡುವೆ ಹಲವು ವರ್ಷಗಳಿಂದ ದ್ವೇಷ ಹೊಂದಿತ್ತು. ಅದರಂತೆ 17ನೇ ವಯಸ್ಸಿನಲ್ಲಿ ಮೊದಲ ಕೊಲೆ ಮಾಡಿದ್ದ ಶಿವಶಂಕರ್ ರೆಡ್ಡಿ, 18ನೇ ವಯಸ್ಸಿನಲ್ಲಿ ಎರಡನೇ ಕೊಲೆ ಮಾಡಿದ್ದನು. ಬಳಿಕ 23ನೇ ವರ್ಷದಲ್ಲಿ ಮೂರನೇ ಕೊಲೆ ಮಾಡಿದ್ದ. 2021ರಲ್ಲಿ ಶಿವಶಂಕರ್ ವಿರುದ್ಧ ಕೊಲೆ ಯತ್ನ ಪ್ರಕರಣ ಕೂಡ ದಾಖಲಾಗಿತ್ತು.

ಆಂಧ್ರಪ್ರದೇಶದ ಮದನಪಲ್ಲಿ ಠಾಣೆ ರೌಡಿಶೀಟರ್​ ಆಗಿರುವ ಆರೋಪಿ ಶಿವಶಂಕರ್ ರೆಡ್ಡಿ ಮೇಲೆ ಸುಪಾರಿ ಕಿಲ್ಲರ್ಸ್ ಮೂಲಕ ಗುಂಡು ಹಾರಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಇನ್ಸ್​ಪೆಕ್ಟರ್ ನೇತೃತ್ವದಲ್ಲಿ 3 ತನಿಖಾ ತಂಡಗಳನ್ನು ರಚನೆ ಮಾಡಲಾಗಿದೆ. ವೈಎಸ್​​ಆರ್​ಸಿಪಿಯಲ್ಲಿ ಗುರುತಿಸಿಕೊಂಡಿದ್ದ ರೌಡಿಶೀಟರ್ ರೆಡ್ಡಿ, ಮದನಪಲ್ಲಿ ವಿಧಾನಸಭಾ ಕ್ಷೇತ್ರದ ಯೂತ್ ಘಟಕದಲ್ಲಿ ಸಕ್ರಿಯವಾಗಿದ್ದ.

ಇದನ್ನೂ ಓದಿ: ನಾಪತ್ತೆಯಾಗಿದ್ದ ಗ್ವಾಟೆಮಾಲಾದ ಹಿಪ್ ಹಾಪ್ ಗಾಯಕಿ ನೆಸ್ಲೀ ಶವವಾಗಿ ಪತ್ತೆ, ದೇಶದಲ್ಲಿ ಕೊಲೆಗಳ ಸಂಖ್ಯೆ ಹೆಚ್ಚುತ್ತಿದೆ

ಏನಿದು ಪ್ರಕರಣ?

ಬಿಲ್ಡರ್ ಅಶೋಕ್ ಮತ್ತು ಕಟ್ಟಡದ ಮಾಲೀಕ ಶಿವಶಂಕರ್ ರೆಡ್ಡಿ ಮೇಲೆ ಗುಂಡಿನ ದಾಳಿ (Gun fire) ನಡೆಸಿರುವಂತಹ ಘಟನೆ ಕೆ.ಆರ್.ಪುರಂನ ಸೀಗೆಹಳ್ಳಿ ಬಳಿಯ ಹಾಸ್ಯಗಾರ್ಡನ್​ನಲ್ಲಿ ಡಿ.8ರಂದು ಮಧ್ಯಾಹ್ನ ನಡೆದಿತ್ತು. ಕೆ.ಆರ್ ಪುರಂ ಲಿಮಿಟ್ಸ್​ನಲ್ಲಿ ಅಪಾರ್ಟ್ಮೆಂಟ್ ನಿರ್ಮಾಣ ಮಾಡಿಸುತ್ತಿದ್ದ. ಮಧ್ಯಾಹ್ನದ ವೇಳೆಗೆ ಕಾಮಗಾರಿ ವೀಕ್ಷಿಸಲು ತನ್ನ ಡ್ರೈವರ್ ಅಶೋಕ್ ರೆಡ್ಡಿ ಜೊತೆ ಹೋಗಿದ್ದ. ಈ ವೇಳೆ ಅಶೋಕ್​ ಮೇಲೆ ಒಂದು ಸುತ್ತು ಗುಂಡಿನ ದಾಳಿ ನಡೆದಿದ್ದು, ಶಿವಶಂಕರ್ ರೆಡ್ಡಿ ಮೇಲೆ ನಾಲ್ಕೈದು ಸುತ್ತು ಫೈರಿಂಗ್ ಮಾಡಲಾಗಿತ್ತು.

ಆಂಧ್ರ ಪ್ರದೇಶದಿಂದ ಬಂದಿರುವ ಗ್ಯಾಂಗ್​ನಿಂದ ಕೃತ್ಯವೆಸಗಲಾಗಿದೆ ಎಂದು ಶಂಕಿಸಲಾಗಿದೆ. ರಸ್ತೆ ಬದಿ ನಿಂತಿದ್ದಾಗ ಏಕಾಏಕಿ ಬಂದು ಗುಂಡಿನ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.


ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:36 am, Fri, 9 December 22