ಅಕ್ರಮ ರೀಫಿಲ್ಲಿಂಗ್: ನಾಲ್ವರು ಆರೋಪಿಗಳು ಸಿಸಿಬಿ ಬಲೆಗೆ

|

Updated on: Jan 22, 2020 | 12:15 PM

ಬೆಂಗಳೂರು: ಆರ್​.ಟಿ.ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಮ್ಮದ್ ಮಜಾಸ್, ಸಯ್ಯದ್ ರಪೀಕ್, ಅರಾಫತ್ ಬೇಗ್, ಕಿಶೋರ್ ಬಂಧಿತ ಆರೋಪಿಗಳು. ಗೃಹ ಬಳಕೆಯ ಸಿಲಿಂಡರ್​ಗಳನ್ನು ವಾಣಿಜ್ಯ ಬಳಕೆಗಾಗಿ ರೀಫಿಲ್ಲಿಂಗ್ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ದಾಳಿ ನಡೆಸಿ 2.50 ಲಕ್ಷ ಮೌಲ್ಯದ 222 ಸಿಲಿಂಡರ್​ಗಳನ್ನು ವಶಕ್ಕೆ ಪಡೆದಿದ್ದಾರೆ. 12 ಕೆಜಿ ತೂಕದ 140 […]

ಅಕ್ರಮ ರೀಫಿಲ್ಲಿಂಗ್: ನಾಲ್ವರು ಆರೋಪಿಗಳು ಸಿಸಿಬಿ ಬಲೆಗೆ
Follow us on

ಬೆಂಗಳೂರು: ಆರ್​.ಟಿ.ನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಮ್ಮದ್ ಮಜಾಸ್, ಸಯ್ಯದ್ ರಪೀಕ್, ಅರಾಫತ್ ಬೇಗ್, ಕಿಶೋರ್ ಬಂಧಿತ ಆರೋಪಿಗಳು.

ಗೃಹ ಬಳಕೆಯ ಸಿಲಿಂಡರ್​ಗಳನ್ನು ವಾಣಿಜ್ಯ ಬಳಕೆಗಾಗಿ ರೀಫಿಲ್ಲಿಂಗ್ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ದಾಳಿ ನಡೆಸಿ 2.50 ಲಕ್ಷ ಮೌಲ್ಯದ 222 ಸಿಲಿಂಡರ್​ಗಳನ್ನು ವಶಕ್ಕೆ ಪಡೆದಿದ್ದಾರೆ. 12 ಕೆಜಿ ತೂಕದ 140 ಸಿಲಿಂಡರ್​ ಮತ್ತು 4ಕೆಜೆ ತೂಕದ 82 ಸಿಲಿಂಡರ್​ಗಳನ್ನು ಜಪ್ತಿ ಮಾಡಿದ್ದಾರೆ. ಇದೇ ವೇಳೆ ಆಟೋ, ತೂಕದ ಯಂತ್ರಗಳು, ರೀಫಿಲ್ಲಿಂಗ್ ಗನ್ಸ್, 1 ಮೋಟರ್ ಸಹ ಸೀಜ್ ಮಾಡಿದ್ದಾರೆ. ಈ ಸಂಬಂಧ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 12:14 pm, Wed, 22 January 20