ಹೊಸ ವರ್ಷಕ್ಕೆ ಸಂಗ್ರಹಿಸಿದ್ದ ವಿದೇಶಿ ಮಾದಕ ವಸ್ತು ಜಪ್ತಿ

|

Updated on: Dec 24, 2019 | 12:03 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ‌ ದಿನದಿಂದ ದಿನಕ್ಕೆ ಮಾದಕ ವಸ್ತುಗಳ ಮಾರಾಟ ಜಾಲ ಹೆಚ್ಚಾಗ್ತಿದೆ. ಅದರಲ್ಲೂ ವಿದೇಶಿಗರೇ ಡ್ರಗ್ಸ್​ ದಂಧೆಯಲ್ಲಿ ಹೆಚ್ಚಾಗಿ ತೊಡಗಿದ್ದಾರೆ. ಈಗಾಗಲೇ ಹಲವರ ದಂಧೆಕೋರರ ಹೆಡೆಮುರಿ ಕಟ್ಟಿರುವ ಪೊಲೀಸರು, ಇದೀಗ ಮತ್ತೊಂದು ವಿದೇಶಿ ಮಾದಕ ವಸ್ತು ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ. ಆರೋಪಿಗಳು ಡಾರ್ಕ್ ವೆಬ್ ಮೂಲಕ ನೆದರ್ ಲ್ಯಾಂಡ್​ನಿಂದ ಮಾದಕ ವಸ್ತುಗಳನ್ನು ತರಿಸಿದ್ದರು. ಹೊಸ ವರ್ಷಕ್ಕೆ ಮಾರಾಟ ಮಾಡಲು ಅಪಾರ ಪ್ರಮಾಣದ ಮಾದಕ ವಸ್ತುವನ್ನು ಶೇಖರಿಸಿಟ್ಟಿದ್ದರು. ಹೊಸ ವರ್ಷದ ರೇವು ಪಾರ್ಟಿಗಳಲ್ಲಿ […]

ಹೊಸ ವರ್ಷಕ್ಕೆ ಸಂಗ್ರಹಿಸಿದ್ದ ವಿದೇಶಿ ಮಾದಕ ವಸ್ತು ಜಪ್ತಿ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ‌ ದಿನದಿಂದ ದಿನಕ್ಕೆ ಮಾದಕ ವಸ್ತುಗಳ ಮಾರಾಟ ಜಾಲ ಹೆಚ್ಚಾಗ್ತಿದೆ. ಅದರಲ್ಲೂ ವಿದೇಶಿಗರೇ ಡ್ರಗ್ಸ್​ ದಂಧೆಯಲ್ಲಿ ಹೆಚ್ಚಾಗಿ ತೊಡಗಿದ್ದಾರೆ. ಈಗಾಗಲೇ ಹಲವರ ದಂಧೆಕೋರರ ಹೆಡೆಮುರಿ ಕಟ್ಟಿರುವ ಪೊಲೀಸರು, ಇದೀಗ ಮತ್ತೊಂದು ವಿದೇಶಿ ಮಾದಕ ವಸ್ತು ಮಾರಾಟ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆಹಚ್ಚಿದ್ದಾರೆ.

ಆರೋಪಿಗಳು ಡಾರ್ಕ್ ವೆಬ್ ಮೂಲಕ ನೆದರ್ ಲ್ಯಾಂಡ್​ನಿಂದ ಮಾದಕ ವಸ್ತುಗಳನ್ನು ತರಿಸಿದ್ದರು. ಹೊಸ ವರ್ಷಕ್ಕೆ ಮಾರಾಟ ಮಾಡಲು ಅಪಾರ ಪ್ರಮಾಣದ ಮಾದಕ ವಸ್ತುವನ್ನು ಶೇಖರಿಸಿಟ್ಟಿದ್ದರು. ಹೊಸ ವರ್ಷದ ರೇವು ಪಾರ್ಟಿಗಳಲ್ಲಿ ಮಾರಾಟ ಮಾಡಲು ಸಿದ್ಧತೆ ಮಾಡಿದ್ರು. ಈ ಬಗ್ಗೆ ಖಚಿತ ಮಾಹಿತಿ‌ ಮೇಲೆ‌ ದಾಳಿ ಮಾಡಿ‌ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ತುಷಾರ್ ಜೈನ್ ಹಾಗೂ ಸಾಕಿಬ್ ಬಂಧಿತ ಆರೋಪಿಗಳು. ವಿವಿಧ ಪ್ರಕಾರದಲ್ಲಿ ಮಾದಕ ವಸ್ತುಗಳನ್ನ ಅಳತೆ ಮಾಡುತ್ತಿದ್ದ ಮಾಪನ, 10 ಲಕ್ಷ ಮೌಲ್ಯದ ಎಲ್​ಎಸ್​ಡಿ, ಎಕ್ಸ್​ಟಿಸಿ ಟ್ಯಾಬ್ಲೆಟ್​ಗಳು ಹಾಗೂ 26 ಸಾವಿರ ನಗದು ವಶಕ್ಕೆ ಪಡೆದಿದ್ದಾರೆ.

Published On - 11:46 am, Tue, 24 December 19