ದಾವಣಗೆರೆ: ಹಾಡಹಗಲೇ ಸಿಮೆಂಟ್ ಅಂಗಡಿ ಮಾಲೀಕನ ಮೇಲೆ ರಾಡ್ ಹಾಗೂ ಚಾಕುವಿನಿಂದ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ನಗರದ ಶಾಮನೂರು ರಸ್ತೆಯಲ್ಲಿ ನಡೆದಿದೆ. ಮಾಲೀಕ ಡಿ.ಪಿ.ಮಹಾದೇವಪ್ಪ(60) ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಾಮನೂರು ರಸ್ತೆಯಲ್ಲಿರುವ ಮಹಾದೇವಪ್ಪ ಅವರ ಅಂಗಡಿಗೆ ಬೈಕ್ನಲ್ಲಿ ಇಬ್ಬರು ಯುವಕರು ಆಗಮಿಸಿದ್ದಾರೆ. ಅಂಗಡಿ ಬಳಿ ಆಗಮಿಸುತ್ತಿದ್ದಂತೆ ರಾಡ್ ಹಾಗು ಚಾಕುವಿನಿಂದ ಮಹಾದೇವಪ್ಪ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಕೇಸ್ ದಾಖಲಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.