ರೌಡಿಯಿಂದ ಸನ್ಮಾನ! ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಗೆ ಇದು ಬೇಕಿತ್ತಾ?
ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಸುರಕ್ಷತೆ ಕಾಪಾಡುವ ಹೊಣೆಹೊತ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ರೌಡಿಶೀಟರ್ ಸನ್ಮಾನ ಮಾಡಿರುವ ಪ್ರಸಂಗ ನಡೆದಿದೆ. ಬೆಂಗಳೂರು ನಗರದ ಹಾಲಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಹೀಗೆ ಸನ್ಮಾನ ಮಾಡಿಸಿಕೊಂಡವರು. ಇನ್ನು, ರೌಡಿಶೀಟರ್ ಯಶಸ್ವಿನಿ ತನ್ನ ಪತಿ ಸಮೇತ ಪೊಲೀಸ್ ಆಯುಕ್ತರಿಗೆ ಸನ್ಮಾನ ಮಾಡಿರುವ ಫೋಟೋ ಇದೀಗ ವೈರಲ್ ಆಗಿದೆ. ಇದಕ್ಕೆ ಸಾಕ್ಷೀಭೂತರಾಗಿ ಪ್ರಮೊದ್ ಮುತಾಲಿಕ್ ಸಹ ವೇದಿಕೆಯಲ್ಲಿರುವುದು ಗಮನಾರ್ಹವಾಗಿದೆ. ನಗರದ ಶಾಂತಿ ಸುವ್ಯವಸ್ಥೆ ಜವಾಬ್ದಾರಿ ಹೊತ್ತಿರುವ ಆಯುಕ್ತ ಭಾಸ್ಕರ್ ರಾವ್ […]
ಬೆಂಗಳೂರು: ರಾಜಧಾನಿ ಬೆಂಗಳೂರು ನಗರದ ಸುರಕ್ಷತೆ ಕಾಪಾಡುವ ಹೊಣೆಹೊತ್ತ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ರೌಡಿಶೀಟರ್ ಸನ್ಮಾನ ಮಾಡಿರುವ ಪ್ರಸಂಗ ನಡೆದಿದೆ. ಬೆಂಗಳೂರು ನಗರದ ಹಾಲಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಹೀಗೆ ಸನ್ಮಾನ ಮಾಡಿಸಿಕೊಂಡವರು.
ಇನ್ನು, ರೌಡಿಶೀಟರ್ ಯಶಸ್ವಿನಿ ತನ್ನ ಪತಿ ಸಮೇತ ಪೊಲೀಸ್ ಆಯುಕ್ತರಿಗೆ ಸನ್ಮಾನ ಮಾಡಿರುವ ಫೋಟೋ ಇದೀಗ ವೈರಲ್ ಆಗಿದೆ. ಇದಕ್ಕೆ ಸಾಕ್ಷೀಭೂತರಾಗಿ ಪ್ರಮೊದ್ ಮುತಾಲಿಕ್ ಸಹ ವೇದಿಕೆಯಲ್ಲಿರುವುದು ಗಮನಾರ್ಹವಾಗಿದೆ.
ನಗರದ ಶಾಂತಿ ಸುವ್ಯವಸ್ಥೆ ಜವಾಬ್ದಾರಿ ಹೊತ್ತಿರುವ ಆಯುಕ್ತ ಭಾಸ್ಕರ್ ರಾವ್ ಅವರಿಗೆ ಇಂತಹ ಸನ್ಮಾನ ಮಾಡಿಸಿಕೊಳ್ಳುವುದರ ಜರೂರತ್ತು ಇತ್ತಾ ಎಂದು ಬೆಂಗಳೂರಿಗರು ತಮ್ಮ ಆಕ್ರೋಶ, ಅಸಮಾಧಾನ ಹೊರಹಾಕಿದ್ದಾರೆ.
Published On - 1:13 pm, Wed, 16 October 19