Crime News: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಡ್ರಗ್ಸ್ ಮಾರಿ ಸಂಪಾದಿಸಿದ್ದ ಹಣ ಮುಟ್ಟುಗೋಲು

| Updated By: guruganesh bhat

Updated on: Sep 04, 2021 | 4:51 PM

ಆನೇಕಲ್​ ಬಳಿಯ ಬ್ಯಾಗಡದೇನಹಳ್ಳಿಯಲ್ಲಿನ 30X40 ಸೈಟ್, ಎರಡು 60X40 ಸೈಟ್​ಗಳು, ಒಂದು ಫ್ಲ್ಯಾಟ್, ಸ್ಕಾರ್ಪಿಯೊ,  ₹9.75 ಲಕ್ಷ ಹಣವಿದ್ದ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.

Crime News: ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಡ್ರಗ್ಸ್ ಮಾರಿ ಸಂಪಾದಿಸಿದ್ದ ಹಣ ಮುಟ್ಟುಗೋಲು
ಅಜಯ್ ಕುಮಾರ್ ಸಿಂಗ್ ಮತ್ತು ಮಾದಕ ದ್ರವ್ಯ
Follow us on

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಡ್ರಗ್ಸ್ ಮಾರಿ ಸಂಪಾದಿಸಿದ್ದ ಸ್ಥಿರ ಮತ್ತು ಚರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಬಿಹಾರದ ಅಜಯ್​ ಕುಮಾರ್ ಸಿಂಗ್ ಎಂಬ ವ್ಯಕ್ತಿಯ ಆಸ್ತಿಯನ್ನೇ NDPS ಆ್ಯಕ್ಟ್ 1985ರ 5ಎ ಅಡಿ ಮುಟ್ಟುಗೋಲು ಹಾಕಿಕೊಂಡಿರುವುದು. ಆರೋಪಿಯನ್ನು ಬಂಧಿಸಿದ್ದ ಸೂರ್ಯನಗರ ಪೊಲೀಸರು ಅಕ್ರಮ ಆಸ್ತಿ ಗಳಿಕೆಯ ಆಯಾಮದಲ್ಲೂ ತನಿಖೆ ನಡೆಸಿದ್ದರು. ಆನೇಕಲ್​ ಬಳಿಯ ಬ್ಯಾಗಡದೇನಹಳ್ಳಿಯಲ್ಲಿನ 30X40 ಸೈಟ್, ಎರಡು 60X40 ಸೈಟ್​ಗಳು, ಒಂದು ಫ್ಲ್ಯಾಟ್, ಸ್ಕಾರ್ಪಿಯೊ,  ₹9.75 ಲಕ್ಷ ಹಣವಿದ್ದ ಖಾತೆಯನ್ನು ಸ್ಥಗಿತಗೊಳಿಸಲಾಗಿದೆ.

2019ರಲ್ಲಿ ಸೂರ್ಯನಗರ ಪೊಲೀಸ್ ಠಾಣೆಯ ಪೊಲೀಸರು ಅಜಯ್ ಕುಮಾರ್ ಸಿಂಗ್​ನನ್ನು ಬಂಧಿಸಿದ್ದರು. ಈತ ಮತ್ತು ಈತನ ಸಹಚರರಿಂದ ಒಟ್ಟು 2 ಕೋಟಿ ಮೌಲ್ಯದ 822 ಕೆಜಿ ಗಾಂಜಾ ಜಪ್ತಿ ಮಾಡಲಾಗಿತ್ತು. ಈ ಹಿಂದೆ ಬಿಹಾರದಲ್ಲೂ ಸಹ ಇಂತಹುದೇ ಕೃತ್ಯ ಎಸಗಿದ್ದ ಆರೋಪಿ ಬಿಹಾರದಲ್ಲಿ ದಾಖಲಾಗಿದ್ದ ಐದು ಪ್ರಕರಣಕ್ಕೆ ಸಂಬಂಧಧಿಸಿದಂತೆ ಸಜೆ ಅನುಭವಿಸಿದ್ದ. ಬಿಡುಗಡೆಗೊಂಡ ಬಳಿಕ ದೆಹಲಿಯಲ್ಲೂ ತನ್ನ ದುಷ್ಕತ್ಯವನ್ನು ಮುಂದುವರೆಸಿದ್ದ. ಬಳಿಕ 2016ರಲ್ಲಿ ಆನೇಕಲ್ ತಾಲೂಕಿಗೆ ವಲಸೆ ಬಂದಿದ್ದ ಅಜಯ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗಾಂಜಾ ಮಾರಾಟವನ್ನು ಮುಂದುವರೆಸಿದ್ದ. ಸದ್ಯ ಆರೋಪಿ ಅಜಯ್ ಮತ್ತು ಆತನ ಕುಟುಂಬದ ಆಸ್ತಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.

ಗಾಂಜಾ ಮಾರಾಟವನ್ನೇ ಉದ್ಯೋಗವನ್ನಾಗಿಸಿಕೊಂಡಿದ್ದವನ ಬಂಧನ
ಹಲವು ಸಲ ಜೈಲಿಗೆ ಹೋಗಿದ್ದರೂ ಗಾಂಜಾ ಮಾರುತ್ತಿದ್ದ ಈತನನ್ನು 2020ರಲ್ಲಿ ಗೂಂಡಾ ಕಾಯ್ದೆ ಅಡಿ ಪೊಲೀಸರು ಬಂಧಿಸಿದ್ದರು. ಆದರೆ 8 ತಿಂಗಳು ಜೈಲಿನಲ್ಲಿದ್ದು ಬಿಡುಗಡೆಯಾದ ಬಳಿಕವೂ ಗಾಂಜಾ ಮಾರಾಟ ದಂದೆಯನ್ನು ಈತ ಮುಂದುವರೆಸಿದ್ದ. ವಸೀಂ ಮೇಲೆ ಬೆಂಗಳೂರು ನಗರ, ಗ್ರಾಮಾಂತರದಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಸದ್ಯ ಬಂಧಿತನಾಗಿರುವ ವಸೀಂ ಮೇಲೆ PIT NDPS ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ:

ಬೆಂಗಳೂರಿನ ಮಾದಕ ದ್ರವ್ಯ ಜಾಲದಲ್ಲಿ ಸಕ್ರಿಯರಾಗಿದ್ದ ನಾಲ್ವರು ನೈಜೀರಿಯಾ ಪ್ರಜೆಗಳ ಬಂಧನ

2500 ಕೋಟಿ ರೂ.ಮೌಲ್ಯದ ಹೆರಾಯಿನ್​ ವಶಪಡಿಸಿಕೊಂಡ ದೆಹಲಿ ಪೊಲೀಸರು; ಅಫ್ಘಾನಿಸ್ತಾನದಿಂದ ಪೂರೈಕೆ, ಪಾಕಿಸ್ತಾನದಿಂದ ಧನ ಸಹಾಯ !

(Bengaluru First time in Karnataka that money was seized earned by drugs)