ಪ್ರೇಯಸಿ ಜೊತೆ ಸಿಕ್ಕಿಬಿದ್ದ ಪತಿ; ಪತ್ನಿಯ ಚೀರಾಟಕ್ಕೆ ಹೆದರಿ ಮನೆ ಖಾಲಿ ಮಾಡಿದ್ದ ಪತಿ ಶವವಾಗಿ ಪತ್ತೆ

ತನಗೊಬ್ಬಳು ಪತ್ನಿ ಇದ್ದರೂ ಬೇರೊಬ್ಬ ಮಹಿಳೆಯೊಂದಿಗೆ ಲವ್ವಿಡವ್ವಿಯಲ್ಲಿ ತೊಡಗಿದ್ದನು. ಒಂದು ದಿನ ಪ್ರೇಯಸಿಯೊಂದಿಗೆ ಪತಿ ಇರುವಾಗ ಪತ್ನಿ ಆಕ್ರೋಶಭರಿತವಾಗಿ ಎಂಟ್ರಿಕೊಟ್ಟಿದ್ದಾಳೆ. ಪರಿಣಾಮವಾಗಿ ಪತಿ ಮನೆ ಬಿಟ್ಟು ಓಡುವಂತಾಗಿತ್ತು. ಹೀಗೆ ಹೋದಾತ ಇದೀಗ ಶವವಾಗಿ ಪತ್ತೆಯಾಗಿದ್ದಾನೆ.

ಪ್ರೇಯಸಿ ಜೊತೆ ಸಿಕ್ಕಿಬಿದ್ದ ಪತಿ; ಪತ್ನಿಯ ಚೀರಾಟಕ್ಕೆ ಹೆದರಿ ಮನೆ ಖಾಲಿ ಮಾಡಿದ್ದ ಪತಿ ಶವವಾಗಿ ಪತ್ತೆ
ಸಾಂದರ್ಭಿಕ ಚಿತ್ರ
Image Credit source: istock
Edited By:

Updated on: Feb 19, 2023 | 4:57 PM

ಬೆಂಗಳೂರು: ಆತ ಹೆಂಡತಿಗೆ ಕೈಕೊಟ್ಟು ಆಕೆಗೆ ತಿಳಿಯದಂತೆ ನಮ್ಮ ಸಂಸಾರ ಆನಂದ ಸಾಗರ ಅಂತ ಪ್ರೇಯಸಿ ಜೊತೆ ಕಾಲ ಕಳೆಯುತ್ತಿದ್ದನು (Illicit relationship). ಒಂದು ದಿನ ತನ್ನನ್ನು ಬಿಟ್ಟು ಪ್ರೇಯಸಿ ಜೊತೆ ಲವ್ವಿಡವ್ವಿಯಲ್ಲಿ ತೊಡಗಿರುವುದು ತಿಳಿದು ಆಕ್ರೋಶಭರಿತಳಾಗಿ ಪತ್ನಿ ಎಂಟ್ರಿಕೊಟ್ಟಿದ್ದಾಳೆ. ಇತ್ತ ಸಿಕ್ಕಿಬಿದ್ದ ಗಂಡ ಮತ್ತು ಮಹಿಳೆಗೆ ದಿಕ್ಕು ತೋಚದಂತಾಗಿದೆ. ಪರಿಣಾಮ ತನ್ನ ಪತ್ನಿಯಿಂದ ಗಂಡ ಹಾಗೂ ಆತನ ಪ್ರೇಯಸಿ ಹಿಗ್ಗಾಮುಗ್ಗ ಬೈಗುಳ ತಿನ್ನಬೇಕಾಯಿತು. ಇನ್ನು ಪತ್ನಿಯ ಕೋಪಕ್ಕೆ ತುತ್ತಾಗಿ ಎದುರಿಗೆ ನಿಂತವರಿದ್ದಾರೆಯೇ? ಪತ್ನಿಯ ಚೀರಾಟಕ್ಕೆ ಹೆದರಿದ ಪತಿರಾಯ ಮನೆಬಿಟ್ಟೇ ಹೋಗುವಂತಾಯಿತು. ಆದರೀಗ ಆತ ಶವವಾಗಿ ಪತ್ತೆಯಾಗಿದ್ದು (Dead Body Found), ಬೆಂಗಳೂರು ನಗರದ ಜ್ಞಾನಭಾರತಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

ನಾಗೇಶ್ ಎಂಬಾತ ತನ್ನ ಪತ್ನಿಯನ್ನು ಬಿಟ್ಟು ಸುನೀತ ಎಂಬಾಕೆಯೊಂದಿಗೆ ಅಕ್ರಮ ಸಂಬಂಧವನ್ನು ನಡೆಸುತ್ತಿದ್ದನು. ಹೀಗೆ ಪ್ರೇಯಸಿ ಜೊತೆ ಇರುವಾಗ ಪತ್ನಿ ಎಂಟ್ರಿ ಕೊಟ್ಟು ಇಬ್ಬರಿಗೂ ಹಿಗ್ಗಾಮುಗ್ಗ ಬೈದಿದ್ದಾಳೆ. ಪತ್ನಿಯ ಚೀರಾಟಕ್ಕೆ ಹೆದರಿದ ನಾಗೇಶ್, ತನ್ನ ಮನೆ ಖಾಲಿ ಮಾಡಿ ಪ್ರೇಯಸಿ ಜೊತೆ ಎಸ್ಕೇಪ್ ಆಗಿದ್ದನು. ಈ ಬಗ್ಗೆ ಪತ್ನಿ ಕುಂಬಳಗೋಡು ಠಾಣೆಯಲ್ಲಿ ಪತಿ ಮಿಸ್ಸಿಂಗ್ ಅಂತಾ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇದನ್ನೂ ಓದಿ: Kunigal: ಸ್ಪುರದ್ರೂಪಿ ಜೋಡಿ ಮದುವೆಯಾಗಿ ವರ್ಷ ಪೂರೈಸಿಲ್ಲ, ಆದ್ರೆ ದೊಡ್ಡಮ್ಮನ ಮಗನ ಜೊತೆ ಪತ್ನಿಯ ಅಕ್ರಮ ಸಂಬಂಧ, ಸುಪಾರಿ ಕೊಟ್ಟು ಅನಾಥ ಗಂಡನ ಹತ್ಯೆ

ಪ್ರಕರಣ ದಾಖಲಿಸಿಕೊಂಡಿರುವ ಕೊಂಬಳಗೋಡು ಠಾಣಾ ಪೊಲೀಸರು, ತನಿಖೆ ಆರಂಭಿಸಿದ್ದಾರೆ. ಈ ನಡುವೆ ನಾಪತ್ತೆಯಾಗಿದ್ದ ನಾಗೇಶ್ ಶವವಾಗಿ ಪತ್ತೆಯಾಗಿದ್ದಾನೆ. ಹೌದು, ಇಂದು ಬೆಳಗ್ಗೆ 9.30ರ ಸುಮಾರಿಗೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ವಿಶ್ವೇಶ್ವರ ಲೇಔಟ್​ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನಾಗೇಶ್ ಪತ್ತೆಯಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸದ್ಯ ನಾಗೇಶ್ ದಂಪತಿ ನಡುವೆ ಸುನೀತಾಳ ಎಂಟ್ರಿಯಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದಂತು ಸತ್ಯ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:39 pm, Sun, 19 February 23