ಕೊಲೆ ಆರೋಪಿಗೆ ಗುಂಡೇಟು ಪ್ರಕರಣ: ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದ ವಿಡಿಯೋ ಲಭ್ಯ

|

Updated on: Apr 26, 2021 | 7:26 AM

ರೌಡಿಶೀಟರ್ ರವಿವರ್ಮಾ ಹತ್ಯೆಗೆ ಸಂಬಂಧಿಸಿದಂತೆ ಸ್ಥಳೀಯರು ಚಿತ್ರೀಕರಿಸಿದ ಆರೋಪಿಗಳ ಅಟ್ಟಹಾಸದ ದೃಶ್ಯ ಪೊಲೀಸರಿಗೆ ಲಭ್ಯವಾಗಿದೆ. ಗುಂಪುಗಟ್ಟಿಕೊಂಡು ಬಂದ ಆರೋಪಿಗಳು ಮಚ್ಚು, ಲಾಂಗುಗಳಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲಿನಲ್ಲಿ ಚಿತ್ರೀಕರಿಸಿದ್ದು ಈ ವಿಡಿಯೋ ಇದೀಗ ಪೊಲೀಸರ ಕೈ ಸೇರಿದೆ.

ಕೊಲೆ ಆರೋಪಿಗೆ ಗುಂಡೇಟು ಪ್ರಕರಣ: ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದ ವಿಡಿಯೋ ಲಭ್ಯ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಅಶೋಕನಗರ ಠಾಣಾ ವ್ಯಾಪ್ತಿಯ ಫಾತಿಮಾ ಗಲ್ಲಿಯಲ್ಲಿ ಏಪ್ರಿಲ್ 20 ರಂದು ನಡೆದಿದ್ದ ರೌಡಿಶೀಟರ್ ರವಿವರ್ಮಾ ಹತ್ಯೆಗೆ ಸಂಬಂಧಿಸಿದಂತೆ ಸ್ಥಳೀಯರು ಚಿತ್ರೀಕರಿಸಿದ ಆರೋಪಿಗಳ ಅಟ್ಟಹಾಸದ ದೃಶ್ಯ ಪೊಲೀಸರಿಗೆ ಲಭ್ಯವಾಗಿದೆ. ಗುಂಪುಗಟ್ಟಿಕೊಂಡು ಬಂದ ಆರೋಪಿಗಳು ಮಚ್ಚು, ಲಾಂಗುಗಳಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲಿನಲ್ಲಿ ಚಿತ್ರೀಕರಿಸಿದ್ದು ಈ ವಿಡಿಯೋ ಇದೀಗ ಪೊಲೀಸರ ಕೈ ಸೇರಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ 24ರಂದು ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದರು. ನಂತರ ಪ್ರಕರಣದ ಪ್ರಮುಖ ಆರೋಪಿ ದಿನೇಶ್​ ಎಂಬಾತನನ್ನು ಲ್ಯಾಂಗ್​ಫೋರ್ಡ್​ ರಸ್ತೆಯ ಕ್ರಿಶ್ಚಿಯನ್ ಸ್ಮಾರಕದ ಬಳಿ ಮಾರಕಾಸ್ತ್ರ ವಶಕ್ಕೆ ಪಡೆಯಲು ಕರೆದೊಯ್ದಿದ್ದಾಗ ಆತ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಅಶೋಕನಗರ ಠಾಣಾ ಇನ್ಸ್​ಪೆಕ್ಟರ್ ಭರತ್ ಆರೋಪಿಯ ಕಾಲಿಗೆ ಗುಂಡೇಟು ನೀಡಿದ್ದರು. ಇದೀಗ ಈ ಆರೋಪಿಗಳ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ದಾಖಲೆಯೂ ಲಭ್ಯವಾಗಿದೆ.

ಎಳನೀರು ಕೀಳುವ ವೇಳೆ ವಿದ್ಯುತ್ ಸ್ಪರ್ಶಿಸಿ 39 ವರ್ಷದ ವ್ಯಕ್ತಿ ಸಾವು
ಹಾಸನ: ಲಾಕ್​ಡೌನ್​ ಹಿನ್ನೆಲೆ ನೆಂಟರ ಮನೆಗೆ ತೆರಳಿದ್ದ ಯುವಕ ಎಳನೀರು ಕೀಳಲು ಹೋದಾಗ ವಿದ್ಯುತ್​ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಬಾಳಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಧರಣಿ ಎಂಬ 39 ವರ್ಷದ ವ್ಯಕ್ತಿ ಕಾಮತಿಕೂಡಿಗೆ ಗ್ರಾಮದಲ್ಲಿ ರಸಗೊಬ್ಬರ ವ್ಯಾಪಾರ ಮಾಡಿಕೊಂಡಿದ್ದರು. ಕೊರೊನಾ ನಿಮಿತ್ತ ವಾರಾಂತ್ಯದಲ್ಲಿ ಲಾಕ್​ಡೌನ್ ಇದ್ದ ಕಾರಣದಿಂದ ನೆಂಟರ ಮನೆಗೆ ಬಂದಿದ್ದರು. ಈ ವೇಳೆ ಎಳನೀರು ಕೀಳಲು ಮುಂದಾಗಿದ್ದು ಅಚಾನಕ್ ಆಗಿ ವಿದ್ಯುತ್ ಸ್ಪರ್ಶಿಸಿ ಮೃತಮಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಆಲೂರು ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:
ಮೈಸೂರು: ಈಜಲು ತೆರಳಿದ್ದ ನಾಲ್ವರು ಬಾಲಕರು ಜಲಸಮಾಧಿ, ವಿದ್ಯುತ್ ಹರಿದು ಪವರ್‌ಮ್ಯಾನ್ ಸಾವು 

ಬೆಂಗಳೂರು: ಹಲ್ಲೆ ಮಾಡಲು ಯತ್ನಿಸಿದ ರೌಡಿಶೀಟರ್ ಕಾಲಿಗೆ​ ಪೊಲೀಸರಿಂದ ಫೈರಿಂಗ್‌