ಮೈಸೂರು: ಈಜಲು ತೆರಳಿದ್ದ ನಾಲ್ವರು ಬಾಲಕರು ಜಲಸಮಾಧಿ, ವಿದ್ಯುತ್ ಹರಿದು ಪವರ್‌ಮ್ಯಾನ್ ಸಾವು
Mysore News: ಕಿಶೋರ್ 8ನೇ ತರಗತಿ ವಿದ್ಯಾರ್ಥಿ ಉಳಿದವರು 10ನೇ ತರಗತಿ ವಿದ್ಯಾರ್ಥಿಗಳು. ಶಾಲೆಗೆ ರಜೆ ಇದ್ದ ಕಾರಣ ಕಾವೇರಿ ನದಿಗೆ ಈಜಲು ತೆರಳಿದ್ದರು. ಈ ವೇಳೆ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ.
ಮೈಸೂರು: ಈಜಲು ತೆರಳಿದ್ದ ನಾಲ್ವರು ಬಾಲಕರು ಜಲಸಮಾಧಿ ಆಗಿರುವ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಹೆಮ್ಮಿಗೆ ಗ್ರಾಮದ ಬಳಿ ನಡೆದಿದೆ. ಗ್ರಾಮದ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ನಾಲ್ವರು ಮೃತಪಟ್ಟಿದ್ದಾರೆ. ಕಿಶೋರ್(14), ಆಕಾಶ್(15), ಯಶವಂತ್(15) ಮಹದೇವ ಪ್ರಸಾದ್(15) ಮೃತ ಬಾಲಕರು.
ಕಿಶೋರ್ 8ನೇ ತರಗತಿ ವಿದ್ಯಾರ್ಥಿ ಉಳಿದವರು 10ನೇ ತರಗತಿ ವಿದ್ಯಾರ್ಥಿಗಳು. ಶಾಲೆಗೆ ರಜೆ ಇದ್ದ ಕಾರಣ ಕಾವೇರಿ ನದಿಗೆ ಈಜಲು ತೆರಳಿದ್ದರು. ಈ ವೇಳೆ ನದಿಯಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಹರಿದು ಪವರ್‌ಮ್ಯಾನ್ ಸಾವು ಇನ್ನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಗ್ರಾಮವೊಂದರ ಸುಬ್ಬಯ್ಯನಕೊಪ್ಪಲು ಬಳಿ ಟ್ರಾನ್ಸ್‌ಫಾರ್ಮರ್ ದುರಸ್ತಿ ವೇಳೆ ವಿದ್ಯುತ್ ಹರಿದು ಕಿರಿಯ ಪವರ್‌ಮ್ಯಾನ್ ಮೃತಪಟ್ಟಿದ್ದಾರೆ. ಜೂನಿಯರ್ ಪವರ್‌ಮ್ಯಾನ್ ಅಮೀರ್ ಖಾನ್(25) ಮೃತ ದುರ್ದೈವಿ.
ದಾವಣಗೆರೆ ನಿವಾಸಿ ಅಮೀರ್ ಖಾನ್ ಕಣಗಾಲು ವಿದ್ಯುತ್ ಉಪಕೇಂದ್ರದ ಕಿರಿಯ ಪವರ್‌ಮ್ಯಾನ್. ಟ್ರಾನ್ಸ್‌ಫಾರ್ಮರ್ ದುರಸ್ತಿ ಕಾರ್ಯ ಮಾಡಲು ಬಂದಿದ್ದರು. ಈ ವೇಳೆ ವಿದ್ಯುತ್ ಹರಿದು ಮೃತಪಟ್ಟಿದ್ದಾರೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮುಂಬೈನ ವಿರಾರ್‌ನ ವಿಜಯ ವಲ್ಲಭ ಕೊವಿಡ್ ಆಸ್ಪತ್ರೆಯಲ್ಲಿ ಅಗ್ನಿ ದುರಂತ, 13 ಜನರ ಸಾವು
Published On - 8:21 am, Fri, 23 April 21