Bengaluru News: ಜನಜಂಗುಳಿ ತಪ್ಪಿಸಲು ಮಾರುಕಟ್ಟೆಗಳ ಸ್ಥಳಾಂತರಕ್ಕೆ ಸಿದ್ಧತೆ, ಬೆಂಗಳೂರಿನ ಬೃಹತ್ ಮಾರ್ಕೆಟ್ಗಳು ಶಿಫ್ಟ್?
ಬೆಂಗಳೂರಿನ ಮಾರ್ಕೆಟ್‌ನಲ್ಲಿ ಜನಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ಮಾರ್ಕೆಟ್‌ಗಳ ವಿಕೇಂದ್ರೀಕರಣಕ್ಕೆ BBMP ಮುಂದಾಗಿದೆ. ಕಲಾಸಿಪಾಳ್ಯ ಮಾರ್ಕೆಟ್ ಅನ್ನು ಸಿಂಗೇನ ಅಗ್ರಹಾರ ಅಥವಾ ಬ್ಯಾಟರಾಯನಪುರಕ್ಕೆ ಸ್ಥಳಾಂತರ ಮಾಡುವ ಪ್ಲಾನ್ ಮಾಡಿಕೊಂಡಿದೆ.
ಬೆಂಗಳೂರು: ಮಹಾಮಾರಿ ಕೊರೊನಾ 2ನೇ ಅಲೆಯ ನಡುವೆಯೂ ಜನರ ನಿರ್ಲಕ್ಷ್ಯ ಮಾತ್ರ ಕಡಿಮೆಯಾಗುತ್ತಿಲ್ಲ. ಮಾರುಕಟ್ಟೆಗಳಲ್ಲಿ ಜನ ಸಾಮಾಜಿಕ ಅಂತರ ಮರೆತು ತರಕಾರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದರು. ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ತರಕಾರಿ ಮಾರುಕಟ್ಟೆಗಳ ಸ್ಥಳಾಂತರಕ್ಕೆ ಮುಂದಾಗಿದೆ. ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಬೃಹತ್ ಮಾರುಕಟ್ಟೆಗಳನ್ನು ಸ್ಥಳಾಂತರಿಸಲಾಗುತ್ತಿದೆ.
ಬೆಂಗಳೂರಿನ ಬೃಹತ್ ಮಾರ್ಕೆಟ್ಗಳು ಶಿಫ್ಟ್? ಬೆಂಗಳೂರಿನ ಮಾರ್ಕೆಟ್‌ನಲ್ಲಿ ಜನಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರತಿ ವಾರ್ಡ್ ಮಟ್ಟದಲ್ಲಿ ಮಾರ್ಕೆಟ್‌ಗಳ ವಿಕೇಂದ್ರೀಕರಣಕ್ಕೆ BBMP ಮುಂದಾಗಿದೆ. ಕಲಾಸಿಪಾಳ್ಯ ಮಾರ್ಕೆಟ್ ಅನ್ನು ಸಿಂಗೇನ ಅಗ್ರಹಾರ ಅಥವಾ ಬ್ಯಾಟರಾಯನಪುರಕ್ಕೆ ಸ್ಥಳಾಂತರ ಮಾಡುವ ಪ್ಲಾನ್ ಮಾಡಿಕೊಂಡಿದೆ. ಕೆ.ಆರ್ ಮಾರ್ಕೆಟ್ ಹೂವಿನ ಮಾರ್ಕೆಟ್ ನ ಬಸವನಗುಡಿಯ ನ್ಯಾಷನಲ್ ಕಾಲೇಜ್ ಮೈದಾನಕ್ಕೆ ಶಿಫ್ಟ್ ಮಾಡುವ ಬಗ್ಗೆ ಪ್ಲಾನ್ ಮಾಡಿಕೊಂಡಿದೆ. ಇಂದು ಮಾರುಕಟ್ಟೆ ಸ್ಥಳಾಂತರಿಸುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಆದ್ರೆ ಇನ್ನೂ ಯಾವುದೇ ಅಧಿಕಾರಿಯೂ ಸ್ಥಳಕ್ಕೆ ಬಂದಿಲ್ಲ. ಮಾರುಕಟ್ಟೆ ಶಿಫ್ಟ್ ಮಾಡಿಲ್ಲ. ಅಲ್ಲದೆ ಮಾರ್ಕೆಟ್ ಸ್ಥಳಾಂತರ ಬಗ್ಗೆ ಮಾಹಿತಿ ಇಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.
ಕೊರೊನಾ ಎರಡನೇ ಅಲೆಗೆ ಜನ ಡೋಂಟ್ ಕೇರ್ ಬೆಂಗಳೂರಿನ ಕೆಆರ್ ಮಾರ್ಕೆಟ್ನಲ್ಲಿ ಇಂದು ಜನ ಜಂಗುಳಿಯೇ ಕಂಡು ಬಂದಿದೆ. ಬಹುತೇಕರು ಮಾಸ್ಕ್, ಸಾಮಾಜಿಕ ಅಂತರ ಕಾಪಾಡದೆ ಖರೀದಿಯಲ್ಲಿ ಮುಗಿಬಿದ್ದಿದ್ದಾರೆ. ಎಷ್ಟೇ ಮನವರಿಕೆ ಮಾಡಿದರೂ ಜನರಿಂದ ನಿಯಮ ಉಲ್ಲಂಘನೆಯಾಗುತ್ತಿದೆ.
ಬನಹಟ್ಟಿಯ ತರಕಾರಿ ಮಾರುಕಟ್ಟೆ ಶಿಫ್ಟ್ ಬಾಗಲಕೋಟೆ ಜಿಲ್ಲೆ ಬನಹಟ್ಟಿ ನಗರದ ಬನಹಟ್ಟಿಯ ತರಕಾರಿ ಮಾರುಕಟ್ಟೆಯನ್ನು ಎಸ್.ಆರ್.ಎ. ಹೈಸ್ಕೂಲ್ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ. ಬನಹಟ್ಟಿ ನಗರಸಭೆ ಸಿಬ್ಬಂದಿ ತರಕಾರಿ ಮಾರ್ಕೆಟ್ ಶಿಫ್ಟ್ ಮಾಡಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡು ಕೊವಿಡ್ ನಿಯಮಾನುಸಾರ ವ್ಯಾಪಾರ ವಹಿವಾಟು ನಡೆಸುವಂತೆ ಸೂಚಿಸಿದ್ದಾರೆ.
ಕೋಟೆನಾಡು ಚಿತ್ರದುರ್ಗದಲ್ಲಿ ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಎಪಿಎಂಸಿ ಮಳಿಗೆಗೆ ತಾತ್ಕಾಲಿಕ ಮಾರುಕಟ್ಟೆ ಶಿಫ್ಟ್ ಮಾಡಲಾಗುತ್ತಿದೆ.
ಇನ್ನು ನಾಳೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗೋ ಹಿನ್ನೆಲೆಯಲ್ಲಿ ಇಂದೇ ತರಕಾರಿ ಖರೀದಿಗೆ ಜನ ಮುಗಿಬಿದ್ದಿದ್ದಾರೆ. ನಾಳೆ ಮುಂಜಾನೆ ಹತ್ತು ಗಂಟೆವರಗೆ ಸಮಯವಿದ್ರು ಇಂದೇ ತರಕಾರಿ ಖರೀದಿ ಮಾಡ್ತಿದ್ದಾರೆ. ಹೀಗಾಗಿ ರಾಜ್ಯದ ಬಹುತೇಕ ಮಾರುಕಟ್ಟೆಗಳಲ್ಲಿ ಕೊರೊನಾ ನಿಯಮಗಳು ಮಾಯವಾಗಿವೆ.
Published On - 9:02 am, Fri, 23 April 21