ಕೇವಲ ಯಲಹಂಕ ವಲಯದ ಕೋವಿಡ್ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಮಾತ್ರ ಇಲ್ಲಿ ಅವಕಾಶ: ಬಿಬಿಎಂಪಿ ಹೊಸ ರೂಲ್ಸ್​

ಕೊರೊನಾಗೆ ಆಹುತಿಯಾದವರ ಶವಸಂಸ್ಕಾರಕ್ಕಾಗಿ ಹಾಹಾಕಾರ ಎದ್ದಿದೆ. ರಾಜಧಾನಿ ಬೆಂಗಳೂರಿನಲ್ಲಂತೂ ಮೃತರ ಕುಟುಂಬಗಳಿಗೆ ಶವಸಂಸ್ಕಾರ ಮಾಡುವುದು ನರಕಸದೃಶವಾಗಿದೆ.

ಕೇವಲ ಯಲಹಂಕ ವಲಯದ ಕೋವಿಡ್ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಮಾತ್ರ ಇಲ್ಲಿ ಅವಕಾಶ: ಬಿಬಿಎಂಪಿ ಹೊಸ ರೂಲ್ಸ್​
ಕೇವಲ ಯಲಹಂಕ ವಲಯದ ಕೋವಿಡ್ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಮಾತ್ರ ಇಲ್ಲಿ ಅವಕಾಶ: ಬಿಬಿಎಂಪಿ ಹೊಸ ರೂಲ್ಸ್​
Follow us
ಸಾಧು ಶ್ರೀನಾಥ್​
|

Updated on:Apr 23, 2021 | 11:17 AM

ಬೆಂಗಳೂರು: ಕೊರೊನಾಗೆ ಆಹುತಿಯಾದವರ ಶವಸಂಸ್ಕಾರಕ್ಕಾಗಿ ಹಾಹಾಕಾರ ಎದ್ದಿದೆ. ರಾಜಧಾನಿ ಬೆಂಗಳೂರಿನಲ್ಲಂತೂ ಮೃತರ ಕುಟುಂಬಗಳಿಗೆ ಶವಸಂಸ್ಕಾರ ಮಾಡುವುದು ನರಕಸದೃಶವಾಗಿದೆ. ಪರಿಸ್ಥಿತಿ ಅರ್ಥಮಾಡಿಕೊಂಡು ತಡವಾಗಿ ಎಚ್ಚೆತ್ತಿರುವ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಖಾಲಿಬಿದ್ದಿರುವ ಸರ್ಕಾರಿ ಜಮೀನನ್ನು ಗುರುತಿಸಿ, ಅಂತಹ ಸ್ಥಳಗಳಲ್ಲಿ ಶವಸಂಸ್ಕಾರ ಮಾಡಬಹುದು ಎಂದು ಸೂಚಿಸಿದೆ. ಇದಕ್ಕೆ ಸ್ಥಳೀಯರೂ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಂದರೆ ನಗರದ ಮತ್ಯಾವುದೋ ಭಾಗದಲ್ಲಿ ಮೃತಪಟ್ಟಿದ್ದರೂ ಇಂತಹ ಜಾಗಕ್ಕೆ ತೆಗೆದುಕೊಂಡು ಶವಸಂಸ್ಕಾರ ಮಾಡಬಹುದು. ಆದರೆ ಈ ಮಧ್ಯೆ, ಯಲಹಂಕದ ಮೇಡಿ ಅಗ್ರಹಾರದಲ್ಲಿರುವ ಬಿಬಿಎಂಪಿ ಚಿತಾಗಾರವು ಅನಿವಾರ್ಯ/ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ.

ಹಾಗಾಗಿ ಸ್ವತಃ ಬಿಬಿಎಂಪಿಯೇ ನಿರೀಕ್ಷೆಗೂ ಮೀರಿ ಹೆಚ್ಚು ಆ್ಯಂಬುಲೆನ್ಸ್ ಆಗಮಿಸುತ್ತಿರುವ ಹಿನ್ನೆಲೆ ಕೇವಲ ಯಲಹಂಕ ವಲಯದ ಮೃತದೇಹಗಳ ಅಂತ್ಯಸಂಸ್ಕಾರಕ್ಕೆ ಮಾತ್ರ ಅನುವು ಮಾಡಿಕೊಡುವಂತೆ ಮೇಡಿ ಅಗ್ರಹಾರದ ಚಿತಾಗಾರ ಸಿಬ್ಬಂದಿಗೆ ಸೂಚನೆ ನೀಡಿದೆ.

ಯಲಹಂಕ ವಲಯ ಹೊರತುಪಡಿಸಿ ಬರ್ತಿದ್ದ ಆ್ಯಂಬುಲೆನ್ಸ್ ಗೆ ನೋ ಎಂಟ್ರಿ: ಇಷ್ಟು ದಿನ ವೈಟ್ ಫೀಲ್ಡ್, ಮಾರತಹಳ್ಳಿ ಭಾಗಗಳಿಂದ ಆ್ಯಂಬುಲೆನ್ಸ್ ಗಳು ಬರ್ತಿದ್ದವು. ನಿರೀಕ್ಷೆಗೂ ಮೀರಿ ಹೆಚ್ಚು ಆ್ಯಂಬುಲೆನ್ಸ್ ಆಗಮನ ಹಿನ್ನೆಲೆ ಇನ್ನು ಹೆಬ್ಬಾಳ, ಹೆಸರಘಟ್ಟ, ದೇವನಹಳ್ಳಿ, ಯಲಹಂಕದಿಂದ ಬರುವ ಮೃತದೇಹಗಳಿಗಷ್ಟೇ ಇಲ್ಲಿ ಅಂತ್ಯಸಂಸ್ಕಾರ ಎಂದು ಚಿತಾಗಾರ ಸಿಬ್ಬಂದಿ ಹೇಳಿದ್ದಾರೆ.

ಈ ಮಧ್ಯೆ, ನಗರದ ಉತ್ತರ ಭಾಗದಲ್ಲಿರುವ ಸುಮನಹಳ್ಳಿ ಚಿತಾಗಾರದ ಗೇಟ್ ಇನ್ನೂ ಓಪನ್ ಆಗಿಲ್ಲ. ಇದರಿಂದ ಹೊರಗೆ ಆ್ಯಂಬುಲೆನ್ಸ್ ಗಳು ಸಾಲಾಗಿ ನಿಂತಿವೆ. ಹೊಗೆ ಹೋಗುವ ಪೈಪ್ ರಿಪೇರಿ ಕಾರ್ಯ ಹಿನ್ನೆಲೆ ಇಂತಹ ಪರಿಸ್ಥಿತಿ ಎದುರಾಗಿದೆ. ಹೊಗೆ ಪೈಪ್ ರಿಪೇರಿ ಇನ್ನೂ ಮುಗಿದಿಲ್ಲ. ಯಂತ್ರ ರಿಪೇರಿ ಬಳಿಕವೇ ಚಿತಾಗಾರಕ್ಕೆ ಆ್ಯಂಬುಲೆನ್ಸ್ ಎಂಟ್ರಿ ಕೊಡಲಾಗುವುದು ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಶವಸಂಸ್ಕಾರ ಎಂಬುದು ನಗರದಲ್ಲಿ ಕೊರೊನಾ ಕಾಲದಲ್ಲಿ ನರಕಸದೃಶವೇ ಆಗಿದೆ.

ಇದನ್ನು ಓದಿ: ಹೆಣ ಸುಡೋಕು ಹೆಣಗಾಟ ಶುರು? ಬೇಡಿಕೆ ಈಡೇರಿಲ್ಲ ಅಂದರೆ ಹೋರಾಟ ಮಾಡ್ತೀವಿ ಎಂದ ಚಿತಾಗಾರ ಸಿಬ್ಬಂದಿ!

(only yelahanka zone coronavirus dead bodies to be cremated in medi agrahara declares bbmp)

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಕೊರೊನಾ ಸೋಂಕಿತರ ಮರಣ ಪ್ರಮಾಣ; ಅಂತ್ಯಸಂಸ್ಕಾರಕ್ಕೆ 13 ಚಿತಾಗಾರಗಳಿಗೆ ಅನುಮತಿ ನೀಡಿದ ಸರ್ಕಾರ

Published On - 9:56 am, Fri, 23 April 21

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ