ಬೆಂಗಳೂರು: ಪ್ರತಿಷ್ಠಿತ ಹೋಟೆಲ್​​ಗಳಲ್ಲಿ ಹಣ ಕದಿಯುತ್ತಿದ್ದ ಆರೋಪಿ ಬಂಧನ

| Updated By: ಆಯೇಷಾ ಬಾನು

Updated on: Feb 19, 2024 | 7:33 AM

ಪ್ರತಿಷ್ಠಿತ ಹೋಟೆಲ್​ಗಳನ್ನು​​ ಗುರಿಯಾಗಿಸಿಕೊಂಡು ಹಣ ಎಗರಿಸುತ್ತಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ಈ ಆರೋಪಿ ದೊಡ್ಡ ದೊಡ್ಡ ಹೋಟೆಲ್​ಗಳನ್ನು ಟಾರ್ಗೆಟ್ ಮಾಡಿ ಅಲ್ಲಿ ಕೆಲಸಕ್ಕೆ ಸೇರಿ ಮಾಲೀಕರ ನಂಬಿಕೆ ಗಳಿಸಿ ಬಳಿಕ ಹಣ ಕದ್ದು ಪರಾರಿಯಾಗುತ್ತಿದ್ದ. ಬಳಿಕ ಮತ್ತೆ ಬೇರೊಂದು ಹೋಟೆಲ್​ಗೆ ಕೆಲಸಕ್ಕೆ ಸೇರಿ ಅಲ್ಲೂ ತನ್ನ ಕೈ ಚಳಕ ತೋರಿಸುತ್ತಿದ್ದ.

ಬೆಂಗಳೂರು: ಪ್ರತಿಷ್ಠಿತ ಹೋಟೆಲ್​​ಗಳಲ್ಲಿ ಹಣ ಕದಿಯುತ್ತಿದ್ದ ಆರೋಪಿ ಬಂಧನ
ಎಂ.ಎಸ್.ರವಿಕುಮಾರ್
Follow us on

ಬೆಂಗಳೂರು, ಫೆ.19: ಪ್ರತಿಷ್ಠಿತ ಹೋಟೆಲ್​​ಗಳಲ್ಲಿ (Hotels) ಹಣ ಕದಿಯುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬನಶಂಕರಿ ನಿವಾಸಿ ಎಂ.ಎಸ್.ರವಿಕುಮಾರ್ ಬಂಧಿತ ಆರೋಪಿ. ಈತ ಪ್ರತಿಷ್ಠಿತ ಹೋಟೆಲ್​ಗಳನ್ನೇ ಟಾರ್ಗೆಟ್ ಮಾಡಿ ಹಣ ಎಗರಿಸ್ತಿದ್ದ. ಮೊದಲಿಗೆ ತನಗೆ ವಯಸ್ಸಾಗಿದೆ, ಆರ್ಥಿಕ ಸಂಕಷ್ಟದ ನೆಪವೊಡ್ಡಿ ಸಿಂಪತಿ ಗಿಟ್ಟಿಸಿ ಹೋಟೆಲ್​ನಲ್ಲಿ ಕೆಲಸ ಪಡೆಯುತ್ತಿದ್ದ. ಬಳಿಕ ಹೋಟೆಲ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಲೇ ಹೊಂಚುಹಾಕಿ ಹಣ ಎಗರಿಸ್ತಿದ್ದ.

ಆರೋಪಿ ರವಿಕುಮಾರ್, ಕಳೆದ ವರ್ಷ ಫೆ.19ರಂದು ಕೆ.ಆರ್.ಪುರದ ಭಟ್ಟರಹಳ್ಳಿಯ ಹೋಟೆಲ್​​​​​​ನಲ್ಲಿ ಹಣ ಕಳವು ಮಾಡಿದ್ದ. ಹೋಟೆಲ್​​​​​​​​ನ ಕ್ಯಾಷ್​​​ಕೌಂಟರ್​​​​ನಲ್ಲಿದ್ದ 1 ಲಕ್ಷ ಹಣ ಕದ್ದಿದ್ದ. ಸತೀಶ್​ ಶೆಟ್ಟಿ ಎಂಬುವರ ಹೋಟೆಲ್​​ನಲ್ಲಿ ಹಣ ಕದ್ದು ಪರಾರಿಯಾಗಿದ್ದ. ಇದಾದ ಬಳಿಕ ಇತ್ತೀಚೆಗೆ ದೇವನಹಳ್ಳಿ ಬಳಿ ಹೋಟೆಲ್​ನಲ್ಲಿ ಕೆಲಸ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ​​ಹಣ ಕಳೆದುಕೊಂಡಿದ್ದ ಮಾಲೀಕ ಸತೀಶ್ ಶೆಟ್ಟಿಯಿಂದಲೇ ಆರೋಪಿ ಲಾಕ್ ಆಗಿದ್ದಾನೆ. ಸತೀಶ್ ಶೆಟ್ಟಿ ಅವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿತ್ತು. ಪ್ರತಿಷ್ಠಿತ ಹೋಟೆಲ್​​ ಗುರಿಯಾಗಿಸಿಕೊಂಡು ಹಣ ಎಗರಿಸುತ್ತಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ.

ಇದನ್ನೂ ಓದಿ:ಯಾದಗಿರಿ: ಲಾರಿ ಡಿಕ್ಕಿಯಾಗಿ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ದುರ್ಮರಣ 

ಇನ್ನು ಆರೋಪಿ ಹಣ ಎಗರಿಸುವ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಕ್ಯಾಷ್ ಕೌಂಟರ್​ನಲ್ಲಿ ಕುಳಿತೇ ಹಣವನ್ನು ಪ್ಯಾಂಟ್ ಜೇಬಿಗಿಳಿಸಿ ಅಲ್ಲಿಂದ ಕಾಲ್ಕಿತ್ತ ಆರೋಪಿಯ ಕೈಚಳಕ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಧರ್ಮಸ್ಥಳ ವ್ಯಾಪ್ತಿಯಲ್ಲಿ ಒಂದೇ ದಿನ 3 ಬೈಕ್ ಕಳವು

ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳರ ಕೈಚಳಕ ಮಿತಿಮೀರಿದೆ. ಒಂದೇ ದಿನ ಮೂರು ಬೈಕ್ ಕಳ್ಳತನ ಮಾಡಲಾಗಿದೆ. ಫೆಬ್ರವರಿ 14 ರಂದು ಬುಧವಾರ ರಾತ್ರಿ ಮೂರು ಬೈಕ್‌ಗಳನ್ನು ಕಳವು ಮಾಡಲಾಗಿದ್ದು, ಇದರಲ್ಲಿ ಧರ್ಮಸ್ಥಳ ದೇಗುಲಕ್ಕೆ ಯಾತ್ರಾರ್ಥಿಯಾಗ ಬಂದ ಕೊಪ್ಪಳದ ವ್ಯಕ್ತಿಯೊಬ್ಬರ ಬೈಕ್ ಸಹ ಸೇರಿದೆ. ಇದು ಪ್ರಸಿದ್ಧ ಕ್ಷೇತ್ರ ಧರ್ಮಸ್ಥಳಕ್ಕೆ ಬರುವ ಭಕ್ತರಲ್ಲಿ ಸಹ ಆತಂಕಕ್ಕೆ ಕಾರಣವಾಗಿದೆ. ಜತೆಗೆ, ಧರ್ಮಸ್ಥಳ ಸುತ್ತಮುತ್ತಲ ನಿವಾಸಿಗಳಲ್ಲಿ ಕೂಡ ಭೀತಿಗೆ ಕಾರಣವಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:24 am, Mon, 19 February 24