ರಸ್ತೆ ದಾಟುವಾಗ ಬಿಎಂಟಿಸಿ ಬಸ್ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ದುರ್ಮರಣ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 11, 2023 | 7:44 PM

ರಸ್ತೆ ದಾಟುವಾಗ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬಸ್​ನ ಮುಂದಿನ ಚಕ್ರಕ್ಕೆ ಸಿಲುಕಿ ಪಾದಚಾರಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಗರದ ಯುಬಿ ಸಿಟಿಯ ಸಿಗ್ನಲ್ ಬಳಿ ಸಂಜೆ 6:30ರ ಸುಮಾರಿಗೆ ನಡೆದಿದೆ. ಸದ್ಯ ಮೃತಪಟ್ಟ ವ್ಯಕ್ತಿಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ರಸ್ತೆ ದಾಟುವಾಗ ಬಿಎಂಟಿಸಿ ಬಸ್ ಡಿಕ್ಕಿ: ಪಾದಚಾರಿ ಸ್ಥಳದಲ್ಲೇ ದುರ್ಮರಣ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಆಗಸ್ಟ್​ 11: ಬಿಎಂಟಿಸಿ ಬಸ್ ಹರಿದು (collides) ಪಾದಚಾರಿ ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ನಗರದ ಯುಬಿ ಸಿಟಿಯ ಸಿಗ್ನಲ್ ಬಳಿ ಸಂಜೆ 6:30ರ ಸುಮಾರಿಗೆ ನಡೆದಿದೆ. ರಸ್ತೆ ದಾಟುವಾಗ ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬಸ್​ನ ಮುಂದಿನ ಚಕ್ರಕ್ಕೆ ಸಿಲುಕಿ ವ್ಯಕ್ತಿ ಮೃತಪಟ್ಟಿದ್ದಾರೆ. ಸದ್ಯ ಮೃತಪಟ್ಟ ವ್ಯಕ್ತಿಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಬ್ಬನ್​ಪಾರ್ಕ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇತ್ತೀಚೆಗೆ ಲಗ್ಗೆರೆಯ ಕೆಂಪೇಗೌಡ ಸರ್ಕಲ್ ಬಳಿ ರಸ್ತೆ ದಾಟುವಾಗ ಇಬ್ಬರು ಯುವಕರ ಮೇಲೆ ಬಿಎಂಟಿಸಿ ಬಸ್ ಹರಿದಿದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೇಲ್ನೋಟಕ್ಕೆ ಬ್ರೇಕ್ ಪೈಲ್ಯೂರ್ ಅಂತಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದರು.

ರಕ್ತಚಂದನ ಮರ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ

ಮಂಗಳೂರು: ಬೆಳ್ತಂಗಡಿ ತಾಲೂಕಿನ ವೇಣೂರು ಬಳಿ ರಕ್ತಚಂದನ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮಾವಿನಕಟ್ಟೆ ನಿವಾಸಿ ಖಾಲಿದ್, ಗುರುವಾಯನಕೆರೆ ನಿವಾಸಿ ದೀಕ್ಷಿತ್ ಬಂಧಿತರು. ಕರಿಮಣೇಲಿನಲ್ಲಿ ಸಿಐಡಿ ಅರಣ್ಯ ಘಟಕದಿಂದ ಕಾರ್ಯಾಚರಣೆ ಮಾಡಿದ್ದು, 125 ಕೆಜಿ ರಕ್ತಚಂದನಕ್ಕೆ ಸಾಗಾಟಕ್ಕೆ ಬಳಸಿದ್ದ ವಾಹನ ಜಪ್ತಿ ಮಾಡಲಾಗಿದೆ. ತಲೆಮರೆಸಿಕೊಂಡ ಆರೋಪಿ ಸಂತೋಷ್​​ಗಾಗಿ ಹುಡುಕಾಟ ನಡೆದಿದೆ.

ಇದನ್ನೂ ಓದಿ: ಬೆಂಗಳೂರು: ಆನೆದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ

ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಗದಗ: ಲಕ್ಷ್ಮೇಶ್ವರ ಪೊಲೀಸರ ಭರ್ಜರಿ ಕಾರ್ಯಾಚರಣೆ ಮಾಡುವ ಮೂಲಕ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಅರೆಸ್ಟ್​ ಮಾಡಿದ್ದಾರೆ. ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ. ಧಾರವಾಡ ತಾಲೂಕಿನ ಅಂಬಲಿಕೊಪ್ಪ ಗ್ರಾಮದ ನಿವಾಸಿ ಹಬೀಬ ಗುಡಿಹಾಳ ಬಂಧಿತ ಆರೋಪಿ. ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ನಾಕಾ ಬಳಿ ಬೈಕ್ ಕಳ್ಳತನ ಮಾಡಿದ್ದ.

ಇದನ್ನೂ ಓದಿ: ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ -ಎಸ್ಐಟಿ ಯಿಂದ ತನಿಖೆ ಚುರುಕು

ಚಿನ್ನದ ವ್ಯಾಪಾರಿ ಬಳಿ ಇದ್ದ 40 ಲಕ್ಷ ಹಣ ದೋಚಿದ್ದ ನಾಲ್ವರ ಬಂಧನ

ಚಾಮರಾಜನಗರ: ಚಿನ್ನದ ವ್ಯಾಪಾರಿ ಬಳಿ ಇದ್ದ 40 ಲಕ್ಷ ಹಣ ದೋಚಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಇನೋವಾ ಕಾರಿನಲ್ಲಿ ಪರಾರಿಯಾಗುತ್ತಿದ್ದ ನಾಲ್ವರನ್ನು ಗ್ರಾಮಸ್ಥರು ಹಿಡಿದಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಬಳಿ ಘಟನೆ ನಡೆದಿದೆ. ಕೇರಳ ಮೂಲದ ದರೋಡೆಕೋರರ ಗ್ಯಾಂಗ್​ ಒಂದು 3 ಕಾರುಗಳಲ್ಲಿ ಬಂದಿದ್ದು, ಚಿನ್ನದ ವ್ಯಾಪಾರಿ ಬಳಿ ಇದ್ದ 40 ಲಕ್ಷ ಹಣ ದೋಚಿ ಪರಾರಿಗೆ ಯತ್ನಿಸಿದ್ದಾರೆ.

ಮೂರು ಕಾರುಗಳ ಪೈಕಿ 1 ಕಾರನ್ನು ಸೋಮಹಳ್ಳಿ ಗ್ರಾಮಸ್ಥರು ರಸ್ತೆ ಮಧ್ಯೆ ಕಲ್ಲುಗಳನ್ನಿಟ್ಟು ತಡೆದಿದ್ದಾರೆ.
ಬಳಿಕ ಕಾರಿನಲ್ಲಿದ್ದ ನಾಲ್ವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.