ಬೆಂಗಳೂರು: ನಗರದಲ್ಲಿ ಸಹಚರರಿಂದಲೇ ರೌಡಿಶೀಟರ್ ಒಬ್ಬನ ಬರ್ಬರ ಹತ್ಯೆಯಾಗಿದೆ. ಮಾರ್ಚ್ 26ರ ರಾತ್ರಿ ನಡೆದಿರುವ ಈ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸಿಗರೇಟ್ ಸೇದುವ ವಿಚಾರಕ್ಕೆ ಜಗಳ ಆರಂಭವಾಗಿ, ಅದು ತೀವ್ರ ರೂಪ ತಾಳಿದೆ. ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ವಸೀಂ ಬರ್ಬರ ಹತ್ಯೆ ಮಾಡಲಾಗಿದೆ. ಹತ್ಯೆಯಾಗಿರುವ ರೌಡಿಶೀಟರ್ ವಸೀಂ ಗಂಗೊಂಡನಹಳ್ಳಿ ನಿವಾಸಿಯಾಗಿದ್ದು, ಜೆ.ಜೆ.ನಗರ, ಬ್ಯಾಟರಾಯನಪುರ ಠಾಣೆ ರೌಡಿಶೀಟರ್ ಆಗಿದ್ದ ಎಂದು ತಿಳಿದುಬಂದಿದೆ. ರೌಡಿ ವಸೀಂನನ್ನು ಕೊಂದು ಸಹಚರರು ಪರಾರಿಯಾಗಿದ್ದಾರೆ. ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು: ಕರಾವಳಿಯಲ್ಲಿದೆ 15ಕ್ಕೂ ಹೆಚ್ಚು ಕೀಚಕರಿರುವ ಕಾಮುಕ ಗ್ಯಾಂಗ್
ಬೆತ್ತಲೆ ಫೋಟೋ ಹಾಕಿಸಿಕೊಂಡು ಅಪ್ರಾಪ್ತೆಯರಿಗೆ ಬ್ಲ್ಯಾಕ್‌ಮೇಲ್ ಮಾಡುವ ಗ್ಯಾಂಗ್ ಕರಾವಳಿಯಲ್ಲಿರುವುದು ಬೆಳಕಿಗೆ ಬಂದಿದೆ. ಮಂಗಳೂರಿನ ಬಜ್ಪೆ ಪೊಲೀಸರು ಕಾಮುಕ ಗ್ಯಾಂಗ್‌ನ ಮೊಹಮ್ಮದ್ ಮುನೀರ್, ತಸ್ಲೀಮ್, ಮೊಹಮ್ಮದ್ ಸಾಬೀಲ್ ಬಂಧನವಾಗಿದೆ. ಸದ್ಯ ಮೂವರ ಬಂಧನವಾಗಿದ್ದು, ಉಳಿದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
18 ವರ್ಷ ವಯಸ್ಸಿನ ಹುಡುಗರನ್ನು ಬಿಟ್ಟು ಬಾಲಕಿಯರಿಗೆ ಕಿರುಕುಳ ನೀಡಲಾಗುತ್ತಿತ್ತು. ಅಪ್ರಾಪ್ತ ಬಾಲಕಿಯರನ್ನೇ ಟಾರ್ಗೆಟ್ ಮಾಡ್ತಿದ್ದ ಕಾಮುಕ ಗ್ಯಾಂಗ್, 14 ವರ್ಷದ ಬಾಲಕಿಯರನ್ನು ಖೆಡ್ಡಾಗೆ ಕೆಡವಿ ಲೈಂಗಿಕ ಕಿರುಕುಳ ನೀಡುತ್ತಿತ್ತು. ಖಾಸಗಿ ಫೋಟೋ, ವಿಡಿಯೋ ತರಿಸಿಕೊಂಡು ಕಿರುಕುಳ ನೀಡುತ್ತಿದ್ದರು. ಗ್ಯಾಂಗ್‌ನ ಕೃತ್ಯ ಗೊತ್ತಾಗಿ ಬಾಲಕಿ ಪೋಷಕರು ದೂರು ನೀಡಿದ್ದರು.
ಇದೀಗ ಬಂಧಿತರು ಕಾಮುಕ ಗ್ಯಾಂಗ್ ಬಗ್ಗೆ ಮಾಹಿತಿ ನೀಡಿದ್ದಾರೆ. ಸಾಕಷ್ಟು ಬಾಲಕಿಯರಿಗೆ-ಯುವತಿಯರಿಗೆ ಲೈಂಗಿಕ ದೌರ್ಜನ್ಯ ನೀಡಿರುವ ವಿಚಾರ ತಿಳಿದುಬಂದಿದೆ.
ಮಡಿಕೇರಿ: ತಮಿಳುನಾಡು ಮೂಲದ ವ್ಯಕ್ತಿ ಬಂಧನ
ನಕ್ಷತ್ರ ಆಮೆ ಮಾರಾಟಕ್ಕೆ ಯತ್ನಿಸುತ್ತಿದ್ದ ತಮಿಳುನಾಡು ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಡಿಕೇರಿಯಲ್ಲಿ ಪಳನಿಯಪ್ಪನ್(32) ಎಂಬಾತನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಮಡಿಕೇರಿಯ ಅಶೋಕಪುರದಲ್ಲಿ ಆರೋಪಿ ಸೆರೆಯಾಗಿದ್ದಾನೆ.
ಇದನ್ನೂ ಓದಿ: ಆರ್.ಟಿ. ನಗರದಲ್ಲಿ ಬಾರ್ ಡ್ಯಾನ್ಸರ್ ಬರ್ಬರ ಹತ್ಯೆ; ಕೊಲೆಯ ಹಿಂದಿನ ಕಾರಣ ನಿಗೂಢ
ರಾತ್ರೋರಾತ್ರಿ ಖಾಕಿ ಗನ್ ಸದ್ದು.. ಆತ್ಮ ರಕ್ಷಣೆಗೆ ಫೈರಿಂಗ್ ಮಾಡಿ ಕೊಲೆ ಆರೋಪಿ ಬಂಧಿಸಿದ ಪೊಲೀಸ್
Published On - 11:30 pm, Sun, 28 March 21