ಬೆಂಗಳೂರು, ಫೆ.27: ಯುವಕರಲ್ಲಿ ವ್ಹೀಲಿಂಗ್ (Bike Wheeling) ಹುಚ್ಚಾಟ ಹೆಚ್ಚಾಗಿದೆ. ಇತ್ತೀಚೆಗಷ್ಟೇ ವ್ಹೀಲಿಂಗ್ ಮಾಡ್ತಿದ್ದ ಯುವಕ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ನಡೆದಿತ್ತು. ಅಲ್ಲದೆ ಅಪಾಯದ ಬಗ್ಗೆ ಅರಿವಿದ್ದರೂ ಯುವಕರು ವ್ಹೀಲಿಂಗ್ ಮಾಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ವ್ಹೀಲಿಂಗ್ ಮಾಡುತ್ತ ತಮ್ಮ ಜೀವವನ್ನೂ ಅಪಾಯದಲ್ಲಿಟ್ಟು ಇತರ ಸವಾರರ ಜೀವಕ್ಕೂ ಕುತ್ತಾಗುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಸಂಚಾರಿ ಪೊಲೀಸರು (Bengaluru Traffic Police) ಸ್ಪೆಷಲ್ ಡ್ರೈವ್ ನಡೆಸುತ್ತಿದ್ದಾರೆ.
ಸಂಚಾರಿ ಪೊಲೀಸರು ಕಳೆದ ಹದಿನೈದು ದಿನಗಳಿಂದ ವ್ಹೀಲಿಂಗ್ ಮಾಡುವರ ವಿರುದ್ದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ಸ್ ಪೆಕ್ಟರ್ಗಳಿಗೆ ವ್ಹೀಲಿಂಗ್ ಕಂಟ್ರೋಲ್ಗೆ ಬೆಂಗಳೂರು ಕಮಿಷನರ್ ಬಿ.ದಯಾನಂದ್ ಅವರು ಸೂಚನೆ ಕೊಟ್ಟಿದ್ದಾರೆ. ಯುವಕರು ವ್ಹೀಲಿಂಗ್ ಮಾಡೋದನ್ನ ವಿಡಿಯೋ ಮಾಡಿ ರೀಲ್ಸ್ ನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ವ್ಹೀಲಿಂಗನ್ನೇ ಕ್ರೇಜ್ ಮಾಡಿಕೊಂಡು ಖಾಲಿ ರೋಡ್ ಸೇರಿದಂತೆ ಎಲ್ಲೆಂದರಲ್ಲಿ ವ್ಹೀಲಿಂಗ್ ಮಾಡುತ್ತಿದ್ದಾರೆ.
ಸದ್ಯ ಸಂಚಾರಿ ಪೊಲೀಸರು ರಾತ್ರಿ ವೇಳೆ ನೈಸ್ ರೋಡ್ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಗಮನಿಸಿ ವ್ಹೀಲಿಂಗ್ ಮಾಡುವ ಯುವಕರ ಬೆನ್ನು ಬೀಳ್ತಿದ್ದಾರೆ. ನಗರದ ಎಲ್ಲಾ ವಿಭಾಗದಲ್ಲಿ ವ್ಹೀಲಿಂಗ್ ಮಾಡುವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಬಾಂಡ್ ಬರೆಸಿಕೊಂಡು ಪೋಷಕರ ಎದುರಲ್ಲೇ ಎಚ್ಚರಿಕೆ ಕೊಟ್ಟು ಕಳಿಸುತ್ತಿದ್ದಾರೆ.
ಇದನ್ನೂ ಓದಿ: ಅತಿಯಾದ ಸಿದ್ಧತಾ ಪರೀಕ್ಷೆಗಳಿಂದ ಮಕ್ಕಳಲ್ಲಿ ಹೆಚ್ಚುತ್ತಿದೆ ಒತ್ತಡ, ಖಾಸಗಿ ಶಾಲೆಗಳ ಕಳವಳ
ಕಲಬುರಗಿ ಜಿಲ್ಲೆ 9 ತಾಲೂಕುಗಳ ನಾಡಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದು,
ಪರಿಶೀಲನೆ ನಡೆಸಿದ್ದಾರೆ. ಲೋಕಾ ಅಧಿಕಾರಿಗಳು ನಾಡಕಚೇರಿಗಳಲ್ಲಿ ದಾಖಲೆ ಪರಿಶೀಲನೆ ನಡೆಸಿದ್ರು.
ಆದಾಯ ಪ್ರಮಾಣಪತ್ರ ಸೇರಿದಂತೆ ಸರ್ಕಾರಿ ದಾಖಲೆ ಮಾಡಿಕೊಡಲು ಹಣ ಕೇಳಿದ್ರು. ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ವಸೂಲಿ ಬಗ್ಗೆ ವ್ಯಾಪಕ ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಮತ್ತೆ ನಿಗೂಢ ಶಬ್ದ ಉಂಟಾಗಿದೆ. ಶ್ರೀರಂಗಪಟ್ಟಣ ಹಾಗೂ ಸುತ್ತಮುತ್ತ ಭಾರಿ ಶಬ್ದ ಉಂಟಾಗಿದೆ. ಮೊನ್ನೆಯಷ್ಟೇ ಮಂಡ್ಯ ನಗರ ಹಾಗೂ ಸುತ್ತಮುತ್ತ ಭಾರಿ ಶಬ್ದ ಕೇಳಿಸಿತ್ತು. ಒಂದು ಸೆಕೆಂಡ್ ಭೂಕಂಪನದ ಅನುಭವ ಉಂಟಾಗಿತ್ತು. ಭಾರಿ ಶಬ್ದದಿಂದ ಆದ ಭೂಕಂಪನದ ಅನುಭವ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈಗ ಮತ್ತೆ ಶಬ್ಧದಿಂದಾಗಿ ಜನರಲ್ಲಿ ಆತಂಕ ಮೂಡಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ