ಬೆಂಗಳೂರು: ಅನ್ನ ಹಾಕಿದ ಕಂಪನಿಗೆ ಕನ್ನ ಹಾಕಿದ ಭೂಪ

| Updated By: Rakesh Nayak Manchi

Updated on: Dec 18, 2022 | 9:41 AM

Bengaluru: ಸ್ನೇಹಿತರನೊಂದಿಗೆ ಸೇರಿಕೊಂಡು ಕೆಲಸ ಮಾಡಿಕೊಂಡಿದ್ದ ಓಗೋ ಕಂಪನಿಯ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಮಾರಾಟ ಮಾಡುತ್ತಿದ್ದರು. ಕಂಪನಿ ನೀಡಿದ ದೂರಿನ ಮೇರೆಗೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಬೆಂಗಳೂರು: ಅನ್ನ ಹಾಕಿದ ಕಂಪನಿಗೆ ಕನ್ನ ಹಾಕಿದ ಭೂಪ
ಕಳ್ಳರಿಂದ ವಶಕ್ಕೆ ಪಡೆದ ದ್ವಿಚಕ್ರ ವಾಹನಗಳು
Follow us on

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಒಳ್ಳೆಯವನಂತೆ ನಟಿಸಿ ಕಳ್ಳತನ ಮಾಡಿದ ನೌಕರ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿನಯ್ ಎಂಬಾತ ಓಗೋ (VOGO Bike) ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಬೈಕ್​ನ ಜಿಪಿಎಸ್ ಸಿಸ್ಟಂ ಸೇರಿ ಕಂಪನಿ ವ್ಯವಸ್ಥೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಈತ 8 ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ನೆಲೆಸಿದ್ದನು. ಇದೇ ವೇಳೆ ಐಷಾರಾಮಿ ಜೀವನಕ್ಕಾಗಿ ತನಗೆ ಅನ್ನ ಕೊಟ್ಟ ಕಂಪನಿಯ ಮೇಲೆ ಕಣ್ಣು ಹಾಕಿದ್ದಾನೆ.

ಓಗೋ ಕಂಪನಿಯ ಆಕ್ಟಿವಾಗಳನ್ನು ಕಳ್ಳತನ ಮಾಡಲು ತುಮಕೂರಿನ ಗೆಳೆಯ ನಂದನ್ ಸಂಪರ್ಕಿಸಿದ್ದಾನೆ. ಅದರಂತೆ ಇಬ್ಬರು ಜೊತೆಗೂಡಿ ಪ್ಲಾನ್ ರೂಪಿಸಿ ಓಗೋ ಕಂಪನಿ ಪಾರ್ಕಿಂಗ್ ಸ್ಥಳಗಳನ್ನ ಗುರುತಿಸಿ ಬೈಕ್​ನಲ್ಲಿದ್ದ ಜಿಪಿಎಸ್ ಸಿಸ್ಟಮ್ ಡಿಸ್ ಕನೆಕ್ಟ್ ಮಾಡುತ್ತಿದ್ದರು.

ಇದನ್ನೂ ಓದಿ: ಈಜಿಪ್ಟ್: ಬಾಕಿಯಿದ್ದ ಹಣ ನೀಡಲು ಮಹಿಳೆ ತಡಮಾಡಿದ್ದಕ್ಕೆ ಕಿರಾಣಿ ಅಂಗಡಿ ಮಾಲೀಕ ಆಕೆಯ 5-ವರ್ಷದ ಮಗಳನ್ನು ಸಾಯಿಸಿದ!

ಸಿಸಿಟಿವಿ ಇಲ್ಲದನ್ನ ಗಮನಿಸಿ ಡೈರೆಕ್ಸ್ ಕನೆಕ್ಟ್ ಮಾಡಿ ಆ್ಯಕ್ಟೀವ್ 5g ವಾಹನಗಳನ್ನು ಸ್ನೇಹಿತನಿಗೆ ಕೊಟ್ಟು ಮಾರಾಟ ಮಾಡಿಸುತ್ತಿದ್ದನು. ತುಮಕೂರಿನ ಗ್ರಾಮಾಂತರ ಸ್ಥಳಗಳಿಗೆ ಬೈಕ್​ಗಳನ್ನ ತೆಗೆದುಕೊಂಡು ಹೋಗಿ ನಂದನ್ ಮಾರಾಟ ಮಾಡುತ್ತಿದ್ದನು. ಓಗೋ ಕಂಪನಿ ನಷ್ಟವುಂಟಾಗಿ ಬೈಕ್​ಗಳನ್ನ ಮಾರಾಟ ಮಾಡುತ್ತಿದ್ದಾರೆ. ಹರಾಜಿನಲ್ಲಿ ಬೈಕ್​ಗಳನ್ನ ಖರೀದಿಸಿ ನಾವು ಮಾರಾಟ ಮಾಡುತ್ತಿದ್ದೇವೆ ಅಂತ ಕಡಿಮೆ ಹಣಕ್ಕೆ ಮಾರಾಟ ಮಾಡುತ್ತಿದ್ದನು.

ಇದನ್ನೂ ಓದಿ: ರಾಜಸ್ಥಾನದಲ್ಲಿ ಶ್ರದ್ಧಾ ಮಾದರಿ ಹತ್ಯೆ: ಅತ್ತೆಯನ್ನು ಕೊಂದು ಮಾರ್ಬಲ್ ಕಟ್ಟರ್​ನಿಂದ ದೇಹ ತುಂಡರಿಸಿದ ಸೋದರಳಿಯ

ಬಂಧಿತ ಆರೋಪಿಗಳು

ದಾಖಲೆಗಳನ್ನ ಕೊಡುತ್ತೇವೆ ಎಂದು ಹೇಳಿ ಹಣ ಪಡೆದು ಯಾಮಾರಿಸಿ ಬೈಕ್ ಬಿಟ್ಟು ನಂದನ್ ಬರುತ್ತಿದ್ದನು. ಬಂದ ಹಣದಲ್ಲಿ ಇಬ್ಬರೂ ಆರೋಪಿಗಳು ಮೋಜುಮಸ್ತಿ ಮಾಡಿಕೊಂಡಿದ್ದರು. ಪ್ರತಿನಿತ್ಯ ಬೈಕ್​ಗಳು ಕಾಣೆಯಾಗುತ್ತಿದ್ದದ್ದನ್ನು ಗಮನಿಸಿದ ಕಂಪನಿ ದೂರು ನೀಡಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಸುದ್ದಗುಂಟೆ ಪಾಳ್ಯ ಪೊಲೀಸರು, ನಂದನ್ ಮತ್ತು ವಿನಯ್​ನನ್ನು ಬಂಧಿಸಿ 55 ಲಕ್ಷ ಮೌಲ್ಯದ 61 ಓಗೊ ಕಂಪನಿ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಅಪರಾಧಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:29 am, Sun, 18 December 22