ಈಜಿಪ್ಟ್: ಬಾಕಿಯಿದ್ದ ಹಣ ನೀಡಲು ಮಹಿಳೆ ತಡಮಾಡಿದ್ದಕ್ಕೆ ಕಿರಾಣಿ ಅಂಗಡಿ ಮಾಲೀಕ ಆಕೆಯ 5-ವರ್ಷದ ಮಗಳನ್ನು ಸಾಯಿಸಿದ!

ಸ್ಥಳೀಯರೊಂದಿಗೆ ತನ್ನ ಬಗ್ಗೆ ಮೋನಾ ಇಲ್ಲಸಲ್ಲದ್ದನ್ನು ಹೇಳಿ ಮುಖಕ್ಕೆ ಮಸಿ ಬಳಿಯುತ್ತಿದ್ದಾಳೆ ಎಂದು ಮನಾರ್ ಭಾವಿಸಿದ್ದ. ಅವನು ದುಹಾಗೆ ತಿನ್ನಲು ಚಾಕೊಲೆಟ್ ನೀಡುವ ಆಸೆ ತೋರಿಸಿ ತನ್ನ ಮನೆಗೆ ಕರೆದೊಯ್ದು ಅವಳನ್ನು ಕೊಂದಿದ್ದ ಮತ್ತು ಅವಳ ನಿರ್ಜೀವ ದೇಹವನ್ನು ಮನೆಯ ನೆಲಮಾಳಿಗೆಯಲ್ಲಿದ್ದ ಬಾತ್ ರೂಮ್ ಅಡಿ ಹೂತು ಹಾಕಿದ್ದ.

ಈಜಿಪ್ಟ್: ಬಾಕಿಯಿದ್ದ ಹಣ ನೀಡಲು ಮಹಿಳೆ ತಡಮಾಡಿದ್ದಕ್ಕೆ ಕಿರಾಣಿ ಅಂಗಡಿ ಮಾಲೀಕ ಆಕೆಯ 5-ವರ್ಷದ ಮಗಳನ್ನು ಸಾಯಿಸಿದ!
ದುಹಾ ಅಶ್ರಫ್, ಸಂತ್ರಸ್ತೆ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 18, 2022 | 7:57 AM

ಇದು ಈಜಿಪ್ಟ್ (Egypt) ದೇಶದ ಕ್ರೈಮ್ ಕತೆ. ಅಲ್ಲಿನ ಮಿನ್ಯಾ (Minya) ಹೆಸರಿನ ನಗರದಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ಯುವಕನಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಅವನು ಅಪರಾಧ ಏನು ಗೊತ್ತಾ? ಕೇವಲ 5-ವರ್ಷ-ವಯಸ್ಸಿನ ಹೆಣ್ಣುಮಗುವೊಂದನ್ನು ಅವನು ಕೊಂದು ಶವವನ್ನು ತನ್ನ ಮನೆಯ ಬಾತ್ ರೂಮಲ್ಲಿ ಹೂತುಹಾಕಿದ್ದ. ಪುಟ್ಟ ಬಾಲೆಯ ಅಮ್ಮ ಅವನಿಗೆ ಭಾರತೀಯ ಕರೆನ್ಸಿಯ ಪ್ರಕಾರ ರೂ. 5,000 ಕೊಡಬೇಕಿತ್ತಂತೆ, ಆಕೆ ಕೋಡೋದು ತಡವಾಗಿದ್ದಕ್ಕೆ ದುಷ್ಟ ಮಗುವನ್ನು ಕೊಂದು ಬಿಟ್ಟಿದ್ದಾನೆ. ಕಳೆದ ವರ್ಷ ಜುಲೈ 16 ರಂದು ಅವನು ಅಪರಾಧವೆಸಗಿದ್ದ. ಈಜಿಪ್ಟ್ ನ ಒಂದು ಕೋರ್ಟ್ ದುಹಾ ಅಶ್ರಫ್ (Duha Ashraf) ಹಂತಕ 20-ವರ್ಷ-ವಯಸ್ಸಿನ ಮನಾರ್ ನನ್ನು (Manar) ನೇಣುಗಂಬಕ್ಕೇರಿಸುವ ತೀರ್ಪು ಪ್ರಕಟಿಸಿದೆ.

ಕೇವಲ ರೂ. 5,000 ಬಾಕಿಯಿಟ್ಟುಕೊಂಡಿದ್ದಕ್ಕೆ ಕೊಲೆ!

ಮಗುವಿನ ತಾಯಿ 45-ವರ್ಷ-ವಯಸ್ಸಿನ ಮೊನಾ ಒಮರ್ ಮೊಹಮ್ಮದ್ ವಿರುದ್ದ ಆಕೆ ಬಾಕಿಯಿಟ್ಟುಕೊಂಡಿದ್ದ ಕೇವಲ ರೂ. 5,000 ಹಣ ನೀಡದ್ದಕ್ಕೆ ಸೇಡು ತೀರಿಸಿಕೊಳ್ಳಲು ಮಗುವನ್ನು ಕೊಂದಿದ್ದಾನೆ ಎಂದು ಸರ್ಕಾರಿ ವಕೀಲರು ಕೋರ್ಟ್ ಗೆ ತಿಳಿಸಿದರು.

ಸ್ಥಳೀಯರೊಂದಿಗೆ ತನ್ನ ಬಗ್ಗೆ ಮೋನಾ ಇಲ್ಲಸಲ್ಲದ್ದನ್ನು ಹೇಳಿ ಮುಖಕ್ಕೆ ಮಸಿ ಬಳಿಯುತ್ತಿದ್ದಾಳೆ ಎಂದು ಮನಾರ್ ಭಾವಿಸಿದ್ದ. ಅವನು ದುಹಾಗೆ ತಿನ್ನಲು ಚಾಕೊಲೆಟ್ ನೀಡುವ ಆಸೆ ತೋರಿಸಿ ತನ್ನ ಮನೆಗೆ ಕರೆದೊಯ್ದು ಅವಳನ್ನು ಕೊಂದಿದ್ದ ಮತ್ತು ಅವಳ ನಿರ್ಜೀವ ದೇಹವನ್ನು ಮನೆಯ ನೆಲಮಾಳಿಗೆಯಲ್ಲಿದ್ದ ಬಾತ್ ರೂಮ್ ಅಡಿ ಹೂತು ಹಾಕಿದ್ದ.

ದುಹಾಳನ್ನು ಮನಾರ್ ಹೊಡೆದು ಸಾಯಿಸಿದ ಎಂದು ಕೋರ್ಟ್ ಗೆ ತಿಳಿಸಲಾಯಿತು.

ಸುಳಿವು ಸಿಕ್ಕಿರಲಿಲ್ಲ

ಹಣ್ಣಿನ ವ್ಯಾಪಾರ ಮಾಡುವ ಮೋನಾ ಮತ್ತು ಆಕೆಯ 19-ವರ್ಷ-ವಯಸ್ಸಿನ ಮಗ ಅಬ್ದೆಲ್ ರಹ್ಮಾನ್ ಮಿನಿಯಾದ ಉತ್ತರಭಾಗದ ಅಪರಾಧ ತನಿಖಾ ವಿಭಾಗದ ಬ್ರಿಗೇಡಿಯರ್ ಜನರಲ್ ಹಾತೆಮ್ ರಬಿ ಅವರಿಗೆ ದುಹಾ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಕೂಡಲೇ ಮಗುವಿನ ಅನ್ವೇಷಣೆ ಶುರುಮಾಡಿದ ಅಧಿಕಾರಿಗಳಿಗೆ ಸುತ್ತಮುತ್ತಲಿನ ಸಿಸಿಟಿವಿ ಕೆಮೆರಾಗಳ ಫುಟೇಜ್ ಪರಿಶೀಲನೆ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ.

ಇದನ್ನೂ ಓದಿ:  Acid attack: ಆಸಿಡ್ ದಾಳಿಯಿಂದ ಬದುಕುಳಿದವರಿಗೆ 35 ಲಕ್ಷ ರೂ. ಪರಿಹಾರ, ಉತ್ತರಾಖಂಡ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

ಕೆಲ ದಿನಗಳ ಬಳಿಕ ಮನಾರ್ ನ ಅಂಗಡಿ ಬಳಿ ಅಟವಾಡಿಕೊಂಡಿದ್ದ ದುಹಾಳ ಸ್ನೇಹಿತರು ಅದ್ಯಾವುದೋ ಕಾರಣಕ್ಕೆ ಅವನ ಮನೆಯೊಳಗೆ ಹೋಗಿದ್ದಾರೆ. ಬಾತ್ ರೂಮ್ ಬಳಿ ಅಗೆದಂತಿದ್ದ ಭಾಗದಲ್ಲಿ ಅವರಿಗೆ ಮಗುವಿನ ಕಾಲುಗಳು ಕಾಣಿಸಿವೆ. ಅವರು ತಮ್ಮ ಮನೆಗಳಿಗೆ ಹೋಗಿ ಪೋಷಕರಿಗೆ ವಿಷಯ ತಿಳಿಸಿದ್ದಾರೆ. ಅವರು ಪೊಲೀಸರಿಗೆ ಫೋನ್ ಮಾಡಿ ಮಕ್ಕಳು ಮನಾರ್ ಮನೆಯಲ್ಲಿ ನೋಡಿದ್ದನ್ನು ತಿಳಿಸಿದ್ದಾರೆ.

ಮೆದುಳಿನಲ್ಲೂ ರಕ್ತಸ್ರಾವ ಆಗುವಂತೆ ಹೊಡೆದಿದ್ದ!

ಪೊಲೀಸರು ಸ್ಥಳಕ್ಕೆ ಧಾವಿಸಿ, ಮನಾರ್ ಮನೆಯನ್ನು ತಡಕಾಡಿದಾಗ ದುಹಾಳ ದೇಹ ಸಿಕ್ಕಿದೆ. ಅವಳ ಮೈ ಮತ್ತು ಮುಖದ ಮೇಲೆಲ್ಲ ಗಾಯಗಳಿದ್ದವು ಮತ್ತು ಮೇಲ್ನೋಟಕ್ಕೆ ಅವಳ ಮೆದುಳಿನಲ್ಲೂ ರಕ್ತಸ್ರಾವ ಆದಂತಿತ್ತು ಎಂದು ಪೊಲೀಸರು ಹೇಳಿದ್ದರು.

ಮೊನಾ ಮತ್ತೊಬ್ಬ ಮಗಳು ಮತ್ತು ದುಹಾಳ ದೊಡ್ಡಕ್ಕ 25-ವರ್ಷ-ವಯಸ್ಸಿನ ವಿದ್ಯಾರ್ಥಿನಿ ಲಾಮಿಯ ಅಶ್ರಫ್ ಅಲಿ ಖಲಾಫ್, ತನ್ನ ಕುಟುಂಬದಿಂದ ಮನಾರ್ ರೂ. 10-ಲಕ್ಷ ಕೀಳುವ ಪ್ರಯತ್ನ ಮಾಡಿದ್ದನೆಂದು ಕೋರ್ಟ್ ನಲ್ಲಿ ಹೇಳಿದ್ದಳು. ದುಡ್ಡು ಕೊಡದ್ದಿದ್ದರೆ ದುಹಾಳನ್ನು ಕೊಂದುಬಿಡುವ ಬೆದರಿಕೆಯೊಡ್ಡಿದ್ದ ಅಂತಲೂ ಲಾಮಿಯ ನ್ಯಾಯಾಧೀಶರ ಮುಂದೆ ಸಾಕ್ಷ್ಯ ನುಡಿದಳು.

ಇದನ್ನೂ ಓದಿ:  ಸೆನ್ಸೇಷನಲ್ ಕ್ರೈಮ್ ಕತೆಗಳು: ಕಿಟ್ಟಿ ಜಿನೊವೀಸ್ ಭೀಕರ ಕೊಲೆಯ ನಂತರವೇ ‘ಬೈಸ್ಟ್ಯಾಂಡರ್ ಎಫೆಕ್ಟ್’ ಪದ ಸೃಷ್ಟಿಯಾಯಿತು!

ಫೋನಲ್ಲಿ ಟೆಕ್ಸ್ಟ್ ಮೇಸೆಜ್ ಸಿಕ್ಕವು!

ಪೊಲೀಸರು ಮನಾರ್ ನ ಫೋನ್ ಪರಿಶೀಲಿಸಿದಾಗ ಅವನು ಮೊನಾ ಕುಟುಂಬಕ್ಕೆ ಮಾಡಿದ ಹಣದ ಬೇಡಿಕೆ ಮತ್ತು ದುಹಾಳನ್ನು ಕೊಲ್ಲುವುದಾಗಿ ಬೆದರಿಸಿದ್ದ ಟೆಕ್ಸ್ಟ್ ಮೇಸೆಜ್ ಗಳು ಪತ್ತೆಯಾದವು.

ಕೌನ್ಸೆಲರ್ ಸುಲೈಮಾನ್ ಅಟ್ಟಾ ಅಲ್-ಶಹೀದ್ ಅವರ ನೇತೃತ್ವದ ಮಿನಿಯಾ ಕ್ರಿಮಿನಲ್ ಕೋರ್ಟ್, ಮನಾರ್ ಎಸಗಿದ ಪೂರ್ವ ನಿಯೋಜಿತ ಘೋರ ಅಪರಾಧಕ್ಕಾಗಿ ಗಲ್ಲು ಶಿಕ್ಷೆ ವಿಧಿಸಿತು.

ಮತ್ತಷ್ಟು ಕ್ರೈಮ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು