ಸೆನ್ಸೇಷನಲ್ ಕ್ರೈಮ್ ಕತೆಗಳು: ಕಿಟ್ಟಿ ಜಿನೊವೀಸ್ ಭೀಕರ ಕೊಲೆಯ ನಂತರವೇ ‘ಬೈಸ್ಟ್ಯಾಂಡರ್ ಎಫೆಕ್ಟ್’ ಪದ ಸೃಷ್ಟಿಯಾಯಿತು!

ಅವಳ ಕಿರುಚಾಟ ಎಷ್ಟು ಜೋರಾಗಿತ್ತೆಂದರೆ ಬೆಳಗಿನ ಜಾವದ ಸುಖನಿದ್ರೆಯಲ್ಲಿದ್ದ ಅವಳ ನೆರೆಹೊರೆವರ ಪೈಕಿ ಹಲವಾರು ಎದ್ದು ಕಿಟಕಿಗಳನ್ನು ತೆರೆದು ಕೆಳಗಡೆ ನೋಡಿದರು. ಮೋಸಿಲಿ ಅವಳ ಮೇಲೆ ಹಲ್ಲೆ ಮಾಡುತ್ತಿದ್ದ ಮತ್ತು ನೋವಿನಿಂದ ಅವಳು ಕಿರುಚಿತ್ತಿದ್ದಳು. ಅವಳ ದೇಹ ರಕ್ತಮಯವಾಗಿತ್ತು. ಆದರೆ ಅವಳ ನೆರವಿಗೆ ಮಾತ್ರ ಯಾರೂ ಧಾವಿಸಲಿಲ್ಲ.

ಸೆನ್ಸೇಷನಲ್ ಕ್ರೈಮ್ ಕತೆಗಳು: ಕಿಟ್ಟಿ ಜಿನೊವೀಸ್ ಭೀಕರ ಕೊಲೆಯ ನಂತರವೇ ‘ಬೈಸ್ಟ್ಯಾಂಡರ್ ಎಫೆಕ್ಟ್’ ಪದ ಸೃಷ್ಟಿಯಾಯಿತು!
ಕಿಟ್ಟಿ ಜಿನೋವೀಸ್
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 09, 2022 | 8:05 AM

ರಸ್ತೆಯ ಮೇಲೆ ಯಾರೋ ಅಪಘಾತಕ್ಕೀಡಾದಾಗ (accident) ಇಲ್ಲವೇ ಒಬ್ಬನ ಮೇಲೆ ನಡೆದಾಗ, ಅಥವಾ ನಡುರಸ್ತೆಯಲ್ಲಿ ಪುಂಡರ ಗುಂಪು ಒಬ್ಬಂಟಿ ಯುವತಿಯನ್ನು ಛೇಡಿಸುವಾಗ, ಅಥವಾ ಹಾಡುಹಗಲೇ ಜನನಿಬಿಡ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬನನ್ನು ರೌಡಿಗಳಿ ಮಚ್ಚು ಮತ್ತು ಲಾಂಗ್ ಗಳಿಂದ ಕೊಚ್ಚಿ ಹಾಕುವಾಗ ನೂರಾರು ಜನ ಅದನ್ನು ನೋಡುತ್ತಿರುತ್ತಾರೆ, ಆದರೆ, ಯಾರೊಬ್ಬರೂ ಸಹಾಯಕ್ಕೆ ಹೋಗುವುದಿಲ್ಲ. ಸಹಾಯಕ್ಕರ ಧಾವಿಸೋಣ ಅಂತ ನಿಮ್ಮ ಒಳಮನಸ್ಸು ಹೇಳುತ್ತಿದ್ದರೂ ನೆರೆದ ಜನರ ನಿರ್ಲಿಪ್ತತೆ (apathy) ನಿಮ್ಮನ್ನು ತಡೆಯುತ್ತದೆ. ಪೊಲೀಸ್ ಗಾದರೂ ಮಾಡೋಣ ಅನಿಸುತ್ತದೆ, ಆದರೆ, ಅಷ್ಟೊಂದು ಜನರಲ್ಲಿ ಪೈಕಿ ಯಾರಾದರೊಬ್ಬರು ಮಾಡಿರುತ್ತಾರೆ ಅಂತ ಭಾವಿಸಿ ಸುಮ್ಮನಾಗುತ್ತೇವೆ. ಮನಶಾಸ್ತ್ರಜ್ಞರು ಇದನ್ನು ‘ಬೈಸ್ಟ್ಯಾಂಡರ್ ಎಫೆಕ್ಟ್’ (Bystander Effect) ಅಂತ ವ್ಯಾಖ್ಯಾನಿಸುತ್ತಾರೆ.

ಇಂಥ ಮನಸ್ಥಿತಿ ಹೆಚ್ಚಿನ ಸಂದರ್ಭಗಳಲ್ಲಿ ದೊಡ್ಡ ಅನಾಹುತ ಕಾರಣವಾಗುತ್ತದೆ ಅಂತ ನಮ್ಮೆಲ್ಲರಿಗೂ ಗೊತ್ತು. ‘ಬೈಸ್ಟ್ಯಾಂಡರ್ ಎಫೆಕ್ಟ್’ ಪದ ಹುಟ್ಟುಹಾಕಲು ಅಥವಾ ಅದಕ್ಕೊಂದು ನಿರೂಪಣೆ ಸಿಗಲು ಕಾರಣವಾದ ಭೀಕರ ಹತ್ಯೆಯ ಪ್ರಕರಣವನ್ನು ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿವತ್ತು ಹೇಳುತ್ತಿದ್ದೇವೆ.

ಇದು ಸುಮಾರು 60 ವರ್ಷಗಳ ಹಿಂದಿನ ಕತೆ. ಆಗ 22-ವರ್ಷದ ತರುಣಿಯಾಗಿದ್ದ ಜಿನೊವೀಸ್ ನ್ಯೂ ಯಾರ್ಕ್ ನಗರದಲ್ಲಿ ಅವಳು ವಾಸವಾಗಿದ್ದ ಕಿವ್ ಅಪಾರ್ಟ್ ಮೆಂಟ್ ಮುಂಭಾಗದಲ್ಲಿ ತನ್ನ ಹಲವಾರು ನೆರೆಹೊರೆಯವರ ಸಮ್ಮುಖದಲ್ಲೇ ಭೀಕರವಾಗಿ ಕೊಲೆಯಾಗಿದ್ದಳು. ಅವಳ ನೆರವಿಗೆ ಯಾರೂ ಹೋಗಿರಲಿಲ್ಲ.

ಅವತ್ತು ಮಾರ್ಚ್ 13, 1964, ನ್ಯೂ ಯಾರ್ಕ್ ನಗರದ ಕ್ವೀನ್ಸ್ ಪ್ರದೇಶದ ಬಾರೊಂದರಲ್ಲಿ ಕೆಲಸ ಮಾಡುತ್ತಿದ್ದ ಕಿಟ್ಟಿ ತನ್ನ ಡ್ಯೂಟಿ ಮುಗಿಸಿಕೊಂಡು ರಾತ್ರಿ 2.30 ಕ್ಕೆ ತನ್ನ ಕಾರನ್ನು ಡ್ರೈವ್ ಮಾಡಿಕೊಂಡು ಮನೆಗೆ ಬಂದಳು. ಮತ್ತೊಂದು ವಾಹನ ತನ್ನನ್ನು ಹಿಂಬಾಲಿಸುತ್ತಿದೆ ಅನ್ನೋದು ಅವಳ ಗಮನಕ್ಕೆ ಬಂದಿರಲೇ ಇಲ್ಲ. ಕಿಟ್ಟಿ ತನ್ನ ಮನೆಯಿಂದ ಸುಮಾರು 100 ಅಡಿ ಮಾತ್ರ ದೂರವಿದ್ದ ಪಾರ್ಕಿಂಗ್ ಲಾಟ್ ನಲ್ಲಿ ಕಾರನ್ನು ಪಾರ್ಕ್ ಮಾಡಿದ ಸ್ಥಳದಲ್ಲೇ ಅಗಂತುಕ ಸಹ ಪಾರ್ಕ್ ಮಾಡಿದ್ದ.

ಕಾರನ್ನು ಪಾರ್ಕ್ ಮಾಡಿದ ನಂತರ ಕಿಟ್ಟಿ ತನ್ನ ಮನೆಯತ್ತ ನಡೆಯಲಾರಂಭಿಸಿದಳು. ಅವಳು ಅಪಾರ್ಟ್ ಮೆಂಟ್ ಸಂಕೀರ್ಣದ ಆವರಣದಲ್ಲೇ ಹಂತಕ ವಿನ್ಸ್ಟನ್ ಮೋಸಿಲಿ ಅವಳ ಮೇಲೆ ಆಕ್ರಮಣ ಮಾಡಿದ.

ಅವನು ಕಿಟ್ಟಿ ಮೇಲೆ ಚಾಕುವೊಂದರಿಂದ ಹಲ್ಲೆ ಮಾಡಿದ ಕೂಡಲೇ ಅವಳು ಜೋರಾಗಿ ಕಿರುಚಿದಳು. ಅವಳ ಕಿರುಚಾಟ ಎಷ್ಟು ಜೋರಾಗಿತ್ತೆಂದರೆ ಬೆಳಗಿನ ಜಾವದ ಸುಖನಿದ್ರೆಯಲ್ಲಿದ್ದ ಅವಳ ನೆರೆಹೊರೆವರ ಪೈಕಿ ಹಲವಾರು ಎದ್ದು ಕಿಟಕಿಗಳನ್ನು ತೆರೆದು ಕೆಳಗಡೆ ನೋಡಿದರು. ಮೋಸಿಲಿ ಅವಳ ಮೇಲೆ ಹಲ್ಲೆ ಮಾಡುತ್ತಿದ್ದ ಮತ್ತು ನೋವಿನಿಂದ ಅವಳು ಕಿರುಚಿತ್ತಿದ್ದಳು. ಅವಳ ದೇಹ ರಕ್ತಮಯವಾಗಿತ್ತು. ಆದರೆ ಅವಳ ನೆರವಿಗೆ ಮಾತ್ರ ಯಾರೂ ಧಾವಿಸಲಿಲ್ಲ.

Winston Moseley and Kitty Genovese

ಹಂತಕ ಮೊಸಿಲೀ ಮತ್ತು ಕಿಟ್ಟಿ

ಕೊನೆಗೊಬ್ಬ ವ್ಯಕ್ತಿ ಜೋರಾಗಿ ಕೂಗಿದ, ‘ಏಯ್ ದುಷ್ಟ, ಬಿಟ್ಬಿಡು ಆ ಹುಡ್ಗೀನ…!’ ಹಂತಕ ಮೋಸಿಲಿಯನ್ನು ಹೆದರಿಸಲು ಅಷ್ಟು ಸಾಕಿತ್ತು. ಅವನು ಅಲ್ಲಿಂದ ಓಡಿಹೋದ. ಅವನು ಹೋದ ನಂತರವೂ ಕಿಟ್ಟಿಯ ನೆರವಿಗೆ ಯಾರೂ ಧಾವಿಸಲಿಲ್ಲ. ಯಾರಾದರೂ ಬಂದು ಅವಳು ಎದ್ದು ನಿಲ್ಲಲು ಸಹಾಯ ಮಾಡಬಹುದಿತ್ತು. ದೇಹದಿಂದ ರಕ್ತ ಸುರಿಯುತ್ತಿದ್ದ ದೇಹವನ್ನು ತೆವಳುತ್ತಾ ಅವಳು ಮುಂದಕ್ಕೆ ಸರಿಯುತ್ತಿದ್ದಳು.

ಪಾತಕಿ ಮೋಸಿಲಿ ಪ್ರಾಯಶಃ ಮರೆಯಲ್ಲಿ ನಿಂತು ಇದೆಲ್ಲವನ್ನು ಗಮನಿಸುತ್ತಿದ್ದ. ಕಿಟ್ಟಿಯ ಸಹಾಯಕ್ಕೆ ಯಾರೂ ಬರೋದಿಲ್ಲ ಅನ್ನೋದು ಅವನಿಗೆ ಮನದಟ್ಟಾಗಿತ್ತು. ಅವನು ಪುನಃ ಆವಳ ಮುಂದೆ ಪ್ರತ್ಯಕ್ಷನಾದ.

ಕಿಟ್ಟಿಯ ಮೇಲೆ ಅತ್ಯಾಚಾರ ನಡೆಸುವ ಮೊದಲು ಅವನು ಮತ್ತೊಮ್ಮೆ ಹತ್ತಾರು ಬಾರಿ ತಿವಿದ. ನಂತರ ಅವಳ ದೇಹದ ಮೇಲಿನ ಆಭರಣಗಳನ್ನು ಕಿತ್ತಿಕೊಂಡು ಅವನು ಪರಾರಿಯಾದ. ಬೆಳಗಿನ ಜಾವ 4.00 ಗಂಟೆಯವರೆಗೆ ಕಿಟ್ಟಿಯ ನೆರೆಹೊರೆಯವರ ಪೈಕಿ ಯಾರೂ ಪೋಲಿಸರಿಗೆ ಫೋನ್ ಮಾಡಲಿಲ್ಲ.

ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಬಹಳ ತಡವಾಗಿತ್ತು. ಕಿಟ್ಟಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ವಿಚಾರಣೆ ನಡೆದಾಗ ಕೆಲವರು ತಾವು 911 ನಂಬರ್ ಗೆ ಫೋನ್ ಮಾಡಿದರೂ ಪೊಲೀಸರು ಕರೆಗಳಿಗೆ ಮಹತ್ವ ನೀಡಲಿಲ್ಲ ಎಂದು ಹೇಳಿದರು. ಇನ್ನಳಿದವರು ಬೇರೆ ಯಾರಾದರೂ ಮಾಡಿರುತ್ತಾರೆ ಅಂತ ನಾವು ಮಾಡಲಿಲ್ಲ, ಎಂದು ಹೇಳಿದರು. ಅವರ ನಿರ್ಲಿಪ್ತತೆ, ನಿಷ್ಕಾಳಜಿ, ಮತ್ತು ಬೇಜಬ್ದಾರಿ ವರ್ತನೆ ಒಬ್ಬ ಯುವತಿಯ ಜೀವವನ್ನೇ ಬಲಿ ತೆಗೆದುಕೊಂಡಿತು.

ಕಿಟ್ಟಿ ಆರ್ತಳಾಗಿ ಕಿರುಚುತ್ತಿದ್ದರೂ ಮತ್ತು ತಮ್ಮ ಕಣ್ಣುಗಳ ಮುಂದೆಯೇ ಘೋರವಾದ ಅಪರಾಧ ನಡೆಯುತ್ತಿದ್ದರೂ ಅವರಲ್ಲಿ ಒಬ್ಬನಾದರೂ ಸಹಾಯಕ್ಕೆ ಧಾವಿಸದಿರುವುದು ಮನಶಾಸ್ತ್ರಜ್ಞರಲ್ಲಿ ದಿಗ್ಭ್ರಮೆ ಮೂಡಿಸಿತ್ತು.

ಆಗಲೇ ಮನಶಾಸ್ತ್ರಜ್ಞರು ‘ಬೈಸ್ಟ್ಯಾಂಡರ್ ಎಫೆಕ್ಟ್’ ಪದವನ್ನು ಸೃಷ್ಟಿಸಿದರು ಮತ್ತು ಸದರಿ ಪದವು ಈಗ ಮನಶಾಸ್ತ್ರದ ಪ್ರತಿ ಪಠ್ಯಪುಸ್ತಕದಲ್ಲಿ ಕಾಣಿಸುತ್ತದೆ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ