ಅನೈತಿಕ ಸಂಬಂಧ: ಅಡಿಕೆ ತರಲು ಪ್ರಿಯಕರನ ಮನೆಗೆ ಹೋದವಳು ಹೆಣವಾದಳು!
ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರಲ್ಲ ಅನ್ನೋ ಗಾದೆಯಂತೆ ಆಶಾ ಎನ್ನುವ ಮಹಿಳೆಯ ಜೀವನ ಕೂಡ ಅಡಿಕೆ ಹಿಂದೆ ಹೋಗಿದೆ,
ತುಮಕೂರು: ಮಹಿಳೆಗೆ ಮದುವೆಯಾಗಿ ಪತಿ ಮತ್ತು ಇಬ್ಬರು ಮಕ್ಕಳಿದ್ದರೂ ಪರಸಂಗದ ಸಹವಾಸ ಮಾಡಿ ಇದೀಗ ದುರಂತ ಅಂತ್ಯ ಕಂಡಿದ್ದಾಳೆ. ಇದರಿಂದ ಇಬ್ಬರು ಮಕ್ಕಳು ತಾಯಿ ಇಲ್ಲದ ತಬ್ಬಲಿಯಾಗಿದ್ದಾವೆ. ಆಶಾ ಎನ್ನುವ ಮಹಿಖೆ ಕಳೆದ 12 ವರ್ಷದ ಹಿಂದೆ ತುಮಕೂರು (Tumakuru) ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಸಂಪಿಗೆ ಗ್ರಾಮದ ನಿವಾಸಿ ಮದುವೆಯಾಗಿದ್ದಳು. ಇವರಿಗೆ ಎರಡು ಮುದ್ದಾದ ಗಂಡು ಮಕ್ಕಳು ಕೂಡ ಇದ್ದರೂ ಸಹ ಪರಸಂಗ ಸಹವಾಸ ಮಾಡಿ ಈಗ ಹೆಣವಾಗಿದ್ದಾಳೆ.
ಆಶಾ ಮದುವೆಗೂ ಮುನ್ನವೇ ಕುರುಬರಹಳ್ಳಿ ಗ್ರಾಮದ ವೆಂಕಟೇಶ್ ಎಂಬಾತ ಜೊತೆ ಅನೈತಿಕ ಸಂಬಂಧ (illicit relationship) ಇಟ್ಟುಕೊಂಡಿದ್ದಳು. ಮದುವೆಯಾದ್ರೂ ಕೂಡ ಸಂಬಂಧ ಮುಂದುವರೆಸಿದ್ದಾಳೆ. ಹೀಗಿರುವಾಗ ಮೊನ್ನೆ ರಾತ್ರಿ ತನ್ನ ಮನೆಯ ಹಿಂದೆ ಇರುವ ಪ್ರಿಯಕರನ ಮನೆಗೆ ಅಡಿಕೆ ತರಲೂ ಹೋಗಿದ್ದಾಳೆ.ಈ ವೇಳೆ ಹಣಕಾಸು ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಗಲಾಟೆ ವೇಳೆ ವೆಂಕಟೇಶ್ ಆಶಾಳ ತಲೆಗೆ ಬಲವಾಗಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ಕೊಲೆ ಬಳಿಕ ಮೃತದೇಹವನ್ನು ಪಕ್ಕದಲ್ಲಿ ಇದ್ದ ಹಳ್ಳಕ್ಕೆ ಎಸೆದು ಪರಾರಿಯಾಗಿದ್ದ ವೆಂಕಟೇಶ್ನನ್ನು ಪೊಲೀಸರು ಹುಡುಕಿ ಬಂಧಿಸಿದ್ದಾರೆ.
ಶಿವಮೊಗ್ಗ: ಮದುವೆಯಾಗಿ ಐದೇ ತಿಂಗಳಿಗೆ ನವವಧು ನೇಣಿಗೆ ಬಿಗಿದ ಸ್ಥಿತಿಯಲ್ಲಿ ಪತ್ತೆ!
ಇನ್ನೂ ಮೃತಳಿಗೆ ಎರಡು ಪುಟ್ಟ ಮಕ್ಕಳಿದ್ದು, ತಾಯಿ ಮಾಡಿದ ತಪ್ಪಿಗೆ ಅನಾಥವಾಗಿವೆ. ಅಡಿಕೆ ಕೊಡುತ್ತೇನೆ ಬಾ ಎಂದು ಕರೆದ ವೆಂಕಟೇಶ್ ಜಗಳ ಮಾಡಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಇನ್ನೂ ಆಶಾಳ ಜೊತೆ ವೆಂಕಟೇಶ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಬಗ್ಗೆ ವೆಂಕಟೇಶ್ ತಾಯಿ ಕೂಡ ಆಗಾಗ ಜಗಳ ಮಾಡುತ್ತಿದ್ದಳಂತೆ. ಆದರೂ ಕೂಡ ತಮ್ಮ ಚಾಳಿ ಬಿಟ್ಟಿರಲಿಲ್ಲ.
ಇನ್ನೂ ವೆಂಕಟೇಶ್ ಮದುವೆಗೂ ಮುನ್ನ ಸ್ವಲ್ಪ ಹಣ ನೀಡಿದ್ದನಂತೆ. ಹಣ ಕೇಳಿದಾಗ ಆಶಾ ಏನೋ ಒಂದು ಹೇಳಿ ನೈಸ್ ಮಾಡಿ ಸುಮ್ಮನೆ ಆಗ್ತಿದ್ದಳು ಎನ್ನಲಾಗಿದೆ . ಇದೇ ವಿಚಾರಕ್ಕೆ ಇದೀಗ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಆಶಾ ಸ್ಥಳದಲ್ಲೇ ಕುಸಿದುಬಿದ್ದ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿ ವೆಂಕಟೇಶ್ ನನ್ನು ದಂಡಿನಶಿವರ ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.
ಒಟ್ಟಾರೆ ಅಕ್ರಮ ಸಂಬಂಧಕ್ಕೆ ಆಶಾ ಬಲಿಯಾಗಿದ್ದು, ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬರಲ್ಲ ಅನ್ನೋ ಗಾದೆಯಂತೆ ಆಶಾಳ ಜೀವನ ಕೂಡ ಅಡಿಕೆ ಹಿಂದೆ ಹೋದಂತಾಗಿದೆ.
ವರದಿ: ಮಹೇಶ್ ಟಿವಿ9 ತುಮಕೂರು
ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:53 pm, Tue, 8 November 22