ಶಿವಮೊಗ್ಗ: ಮದುವೆಯಾಗಿ ಐದೇ ತಿಂಗಳಿಗೆ ನವವಧು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!
ಶಿವಮೊಗ್ಗದ ಅತ್ತೆ ಮನೆಯಲ್ಲಿ ಚಿಕ್ಕಮಗಳೂರು ದೇವರಹಳ್ಳಿಯ ನಿವ್ಯಾ ಎಂಬ ನವವಿವಾಹಿತೆ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಶಿವಮೊಗ್ಗದ ಹೊಮ್ಮರಡಿ ಪ್ರತಿಷ್ಠಿತ ಕುಟುಂಬ ಗಂಡನ ಮನೆ ಆಗಿತ್ತು. ಜಯಶ್ರೀ ಖ್ಯಾತ ವೈದ್ಯೆ. ಅವರ ಏಕೈಕ ಪುತ್ರ ಆಕಾಶ್.

ಮದುವೆಯಾಗಿ ಕೇವಲ ಐದೇ ತಿಂಗಳಿಗೆ ನವವಧು ನೇಣಿಗೆ ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಶ್ರೀಮಂತ ಮನೆತನ ಅವಳಿಗೆ ಸಿಕ್ಕಿತ್ತು. ಅತ್ತೆ ಖ್ಯಾತ ವೈದ್ಯೆಯಾಗಿದ್ದಳು. ಹೀಗೆ ಎಲ್ಲವೂ ಸರಿ ಇರುವ ಸಮಯದಲ್ಲಿ ನವವಿವಾಹಿತೆ ಮಹಿಳೆಯು ಕಾರ್ ಶೆಡ್ ನಲ್ಲಿ ನೇಣಿಗೆ ಶರಣಾಗಿದ್ದು ಮಾತ್ರ ನೂರೆಂಟು ಅನುಮಾನ ಹುಟ್ಟಿಸಿದೆ.. ಹೆತ್ತವರಿಗೆ ಮಗಳ ಅಂತ್ಯಕ್ರಿಯೆ ಬಳಿಕ ಕಣ್ಣೀರೇ ಗತಿಯಾಗಿಬಿಟ್ಟಿದೆ.. ಆ ಸುಂದರಿಯ ನಿಗೂಢ ಸಾವು.. ಕುರಿತು ಒಂದು ವರದಿ ಇಲ್ಲಿದೆ. ಕಳೆದ ವಾರ ಶಿವಮೊಗ್ಗದ (shivamogga) ಅಶ್ವಥ್ ನಗರದ 5ನೇ ಕ್ರಾಸ್ ನಲ್ಲಿ ಮನೆಯಲ್ಲಿ ಚಿಕ್ಕಮಗಳೂರು (chikkamagaluru) ಜಿಲ್ಲೆಯ ದೇವರಹಳ್ಳಿಯ ಗ್ರಾಮದ ನಿವ್ಯಾ ಎನ್ನುವ ನವವಿವಾಹಿತೆಯು ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಹೆತ್ತ ತಾಯಿ ಮತ್ತು ಕುಟುಂಬಸ್ಥರು ಮಗಳ ಶವದ ಮುಂದೆ ಕಣ್ಣೀರು ಹಾಕಿದರು. ಶಿವಮೊಗ್ಗದ ಹೊಮ್ಮರಡಿ ಪ್ರತಿಷ್ಠಿತ ಕುಟುಂಬ ಗಂಡನ ಮನೆ ಆಗಿತ್ತು. ಜಯಶ್ರೀ ಖ್ಯಾತ ವೈದ್ಯೆ. ಇವರ ಏಕೈಕ ಪುತ್ರ ಆಕಾಶ್.
ನಿವ್ಯಾಳ ಗುಣ ಮತ್ತು ಅಂದ ಚೆಂದ ನೋಡಿ ವರದಕ್ಷಿಣೆ ವರೋಪಚಾರವಿಲ್ಲದೇ ಮಗನ ಮದುವೆ ಮಾಡಿದ್ದರು. ಹೀಗೆ ಎಂ.ಕಾಂ ಪದವೀಧರೆ ಮತ್ತು ಆಕಾಶ್ ನಡುವೆ ಐದು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಅದ್ದೂರಿಯಾಗಿ ಮದುವೆಯಾಗಿತ್ತು. ಆದ್ರೆ ನಿನ್ನೆ ಮನೆಯ ಕಾರ್ ಶೆಡ್ ನಲ್ಲಿ ನಿವ್ಯಾ ಶವ ಪತ್ತೆಯಾಗಿತ್ತು. ಈ ಸಾವು ಅನುಮಾನಸ್ಪದವಾಗಿತ್ತು. ಸಂಜೆಯವರೆಗೆ ಚೆನ್ನಾಗಿದ್ದು, ಇನಸ್ಟ್ರಾಗ್ರಾಂ ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು ಅಪ್ ಲೋಡ್ ಮಾಡಿ ಖುಷಿ ಖುಷಿಯಲ್ಲಿದ್ದ ನಿವ್ಯಾ ಬಳಿಕ ಕೆಲವೇ ಗಂಟೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಳು. ನಿನ್ನೆ ಕುಟುಂಬಸ್ಥರ ಸಮ್ಮುಖದಲ್ಲಿ ನಿವ್ಯಾಳ ಅಂತ್ಯಕ್ರಿಯೆ ನಡೆದಿದೆ. ಸದ್ಯ ವಿನೋಬ ನಗರದ ಪೊಲೀಸರು ನಿವ್ಯಾಳ ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆ.
ವಿನೋಬ ನಗರ ಪೊಲೀಸ್ ಠಾಣೆಗೆ ಬಂದ ನಿವ್ಯಾ ಕುಟುಂಬವು ಹೇಳಿಕೆಯನ್ನು ನೀಡಿತ್ತು. ಮಗಳ ಮದುವೆ ಮತ್ತು ಅತ್ತೆ, ಅಳಿಯನ ಕುರಿತು ಪೊಲೀಸರಿಗೆ ಮೃತಳ ತಾಯಿ ನಳಿನಿ ಮತ್ತು ಸಹೋದರ ಹೃದಯಿ ಕೆಲ ಮಾಹಿತಿಯನ್ನು ಕೊಟ್ಟಿದ್ದಾರೆ. ಈ ನಡುವೆ ಮಗಳ ಸಾವಿನ ಹಿಂದೆ ಸದ್ಯ ನೂರೆಂಟು ಅನುಮಾನಗಳು ಹುಟ್ಟಿಕೊಂಡಿವೆ. ಪತ್ನಿಯ ಜೊತೆ ಪತಿಯು ಸಂಬಂಧ ಚೆನ್ನಾಗಿರಲಿಲ್ಲವೆಂದು ತಾಯಿಯು ಎದೆ ಬಡಿದುಕೊಂಡು ಹೇಳುತ್ತಾ ಕಣ್ಣೀರು ಹಾಕಿದರು.
Also read:
ಹಿಂದೂ ಪದದ ಯಥಾರ್ಥ ವಿಶ್ಲೇಷಣೆಗೆ ಸಮಿತಿ ರಚಿಸಲು ಕೋರಿ ಸಿಎಂಗೆ ಸತೀಶ್ ಜಾರಕಿಹೊಳಿ ಪತ್ರ
ಆಕಾಶನೇ ಮಗಳಿಗೆ ಚಿತ್ರಹಿಂಸೆ ಕೊಟ್ಟಿದ್ದಾನೆ. ಮಗಳು ಧೈರ್ಯವಂತೆ. ಅವಳು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ ಎನ್ನುವುದು ನಂಬಲು ಸಾಧ್ಯವಿಲ್ಲ. ಕೆಲವೇ ಗಂಟೆಯಲ್ಲಿ ಅವಳ ಮನಸ್ಸು ಸಂತಸದಿಂದ ನೋವಿನತ್ತ ತಿರುಗಿದೇ ಅಂದ್ರೆ ಪತಿ ಪತ್ನಿಯ ನಡುವೆ ಏನೋ ನಡೆದಿದೆ. ಈ ಹಿನ್ನೆಲೆಯಲ್ಲಿ ನಿವ್ಯಾ ಅನುಮಾನಸ್ಪದವಾಗಿ ಮೃತಪಟ್ಟಿದ್ದಾಳೆ. ನಿವ್ಯಾಳ ಸಾವಿಗೆ ಬಲವಾದ ಕಾರಣವಿದೆ. ಪ್ರತಿಷ್ಠಿತ ಕುಟುಂಬದಲ್ಲಿ ಈ ಘಟನೆ ನಡೆದಿದೆ. ಹೀಗಾಗಿ ನಿವ್ಯಾಳ ಸಾವಿನ ಹಿನ್ನೆಲೆ ಪತ್ತೆ ಮಾಡಬೇಕೆಂದು ಸಹೋದರ ಹೃದಯಿ ಟಿವಿ9 ಮೂಲಕ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾನೆ.
ನಿವ್ಯಾಳಿಗೆ ಇನ್ನೂ ಕೇವಲ 23 ವಯಸ್ಸು. ಮದುವೆಯಾಗಿ ಐದೇ ತಿಂಗಳ ಆಗಿತ್ತು. ಈ ನಡುವೆ ಪತಿಯು ಪತ್ನಿಯನ್ನು ಒಂಟಿ ಮಾಡಿಬಿಟ್ಟಿದ್ದನು. ತನ್ನದೇ ಮೋಜು ಮಸ್ತಿ ಲೋಕದಲ್ಲಿದ್ದ ಪತಿಯು ಮಾಡಿದ ಯಡವಟ್ಟಿನಿಂದ ನಿವ್ಯಾ ಪ್ರಾಣಪಕ್ಷಿ ಹಾರಿಹೋಗಿದೆ.. ನಿವ್ಯಾ ಸಾವಿಗೆ ಅಸಲಿ ಕಾರಣವೇನು ಎನ್ನುವುದನ್ನು ವಿನೋಬ ನಗರ ಪೊಲೀಸರು ಯಾವುದೇ ಒತ್ತಡಕ್ಕೆ ಸಿಲುಕದೇ ಬಹಿರಂಗಪಡಿಸುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಿದೆ ಎನ್ನುತ್ತಾರೆ ಮೃತಳ ಮನೆಯವರು. (ವರದಿ: ಬಸವರಾಜ್ ಯರಗಣವಿ, ಟಿವಿ 9, ಶಿವಮೊಗ್ಗ)
Published On - 5:02 pm, Tue, 8 November 22




