AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಟ್ರೈನಲ್ಲಿ ಯುವತಿಯೊಬ್ಬಳ ವಿಡಿಯೋ ಮಾಡುತ್ತಿದ್ದ ಕಾಮಣ್ಣಗೆ ಬಿಎಂಅರ್​ಸಿಲ್ ಸಿಬ್ಬಂದಿ ಒದೆ, ಪೊಲೀಸ್ ಆತಿಥ್ಯ!

ಮೆಟ್ರೋ ಟ್ರೈನಲ್ಲಿ ಯುವತಿಯೊಬ್ಬಳ ವಿಡಿಯೋ ಮಾಡುತ್ತಿದ್ದ ಕಾಮಣ್ಣಗೆ ಬಿಎಂಅರ್​ಸಿಲ್ ಸಿಬ್ಬಂದಿ ಒದೆ, ಪೊಲೀಸ್ ಆತಿಥ್ಯ!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 02, 2025 | 1:32 PM

Share

ಮೆಟ್ರೋ ರೈಲುಗಳಲ್ಲಿ ವಿಕೃತ ಮನಸ್ಸಿನ ವ್ಯಕ್ತಿಗಳು ಹೆಚ್ಚುಕಡಿಮೆ ಪ್ರತಿನಿತ್ಯ ಇಂಥ ಕೃತ್ಯಗಳಲ್ಲಿ ತೊಡಗಿರುತ್ತಾರೆ, ಆದರೆ ಯುವತಿಯರು ಕೆಲಸಕ್ಕೋ ಇಲ್ಲ ಕಾಲೇಜಿಗೋ ಹೋಗುವ ಧಾವಂತದಲ್ಲಿರುವ ಕಾರಣ ದೂರು ನೀಡುವ ಉಸಾಬರಿಗೆ ಹೋಗೋದಿಲ್ಲ. ತಾವು ಸಿಸಿಟಿವಿಗಳ ಕಣ್ಗಾವಲಲ್ಲಿದ್ದೇವೆ ಅನ್ನೋದು ಗೊತ್ತಿದ್ದರೂ ಧೂರ್ತರು ತಮ್ಮ ನೀಚ ಕೃತ್ಯಗಳನ್ನು ನಿಲ್ಲಿಸುವುದಿಲ್ಲ

ಬೆಂಗಳೂರು: ನಗರದ ಮೆಟ್ರೋ ಮತ್ತು ಬಿಎಂಟಿಸಿ ಸಾರಿಗೆ ಸಾಧನಗಳನ್ನು ಬಳಸಿಕೊಳ್ಳುವವರಲ್ಲಿ ವಿಕೃತ ಕಾಮಿಗಳು, ಸೇಡಿಸ್ಟ್ ಗಳು, ಮನೋವಿಕಾರದ ಸಮಸ್ಯೆಯಿಂದ ಬಳಲುತ್ತಿರುವವರು ಸಹ ಸೇರಿದ್ದಾರೆ. ಅಂಥವನೊಬ್ಬನನ್ನು ಮೆಟ್ರೋ ಸೆಕ್ಯುರಿಟಿ ಸಿಬ್ಬಂದಿ ಚೆನ್ನಾಗಿ ತದುಕಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಡಿಸೆಂಬರ್ 25 ರಂದು ಮೆಜೆಸ್ಟಿಕ್ ನಿಂದ ಜೆಪಿನಗರದ ಕಡೆ ಹೊರಟಿದ್ದ ಮೆಟ್ರೋ ಟ್ರೈನಲ್ಲಿ ಜರುಗಿರುವ ಘಟನೆ ಇದು. ಮಹೇಶ್ ಹೆಸರಿನ ವಿಕೃತ ಕಾಮಿಯೊಬ್ಬ ತನ್ನ ವಿಡಿಯೋ ಮಾಡುತ್ತಿದ್ದುದನ್ನು ಗಮನಿಸಿದ ಯುವತಿಯೊಬ್ಬಳು ಅವನೊಂದಿಗೆ ವಾದಕ್ಕಿಳಿದಿದ್ದಾರೆ. ಅದನ್ನು ಕೇಳಿಸಿಕೊಂಡ ರಾಮ್ ಮತ್ತು ಸುಚಿತ್ ಹೆಸರಿನ ಮೆಟ್ರೋ ಸೆಕ್ಯುರಿಟಿ ಸಿಬ್ಬಂದಿ ಅವನನ್ನು ಹಿಡಿದು, ನಾಲ್ಕು ಬಾರಿಸಿ ಜಯನಗರ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ಅವನ ಫೋನಲ್ಲಿ 50ಕ್ಕೂ ಹೆಚ್ಚು ಯುವತಿಯರ ಫೋಟೋ ಮತ್ತು ವಿಡಿಯೋ ಪತ್ತೆಯಾಗಿವೆ.
.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನೆಲಮಂಗಲ: ಯುವತಿಯ ಎದೆ ಭಾಗ ಮುಟ್ಟಿ ಪರಾರಿಯಾಗಿದ್ದ ಆರೋಪಿ ಬಂಧನ