ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ, ಸಿಬಿಐ ತನಿಖೆಗಾಗಿ ಪ್ರಧಾನಿಯವರಿಗೆ ಪತ್ರ ಬರೆಯುತ್ತೇವೆ: ಸಚಿನ್ ಸಹೋದರಿ

ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ, ಸಿಬಿಐ ತನಿಖೆಗಾಗಿ ಪ್ರಧಾನಿಯವರಿಗೆ ಪತ್ರ ಬರೆಯುತ್ತೇವೆ: ಸಚಿನ್ ಸಹೋದರಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 02, 2025 | 11:56 AM

ತನ್ನಣ್ಣ ಸತ್ತು 7 ದಿನ ಕಳೆದರೂ ಪೊಲೀಸರಿಂದಾಗಲೀ ಸರ್ಕಾರದ ಪ್ರತಿನಿಧಿಗಳಿಂದಾಗಲೀ ಇದುವರೆಗೆ ಒಂದೇ ಒಂದು ಅಪ್ಡೇಟ್ ಸಿಕ್ಕಿಲ್ಲ, ಅವನು ಡೆತ್ ನೋಟ್​ನಲ್ಲಿ ಕೆಲವು ಹೆಸರುಗಳನ್ನು ಬರೆದಿದ್ದಾನೆ, ಆದರೆ ಪೊಲೀಸರು ಅವರನ್ನು ವಿಚಾರಿಸುವ ಬದಲು ತಮ್ಮಲ್ಲಿಗೆ ಬಂದು ನೂರೆಂಟು ಪ್ರಶ್ನೆ ಕೇಳುತ್ತಾರೆ, ಅವನ ಐಫೋನ್ ನಾಪತ್ತೆಯಾಗಿದೆ, ಅದರಲ್ಲಿದ್ದ ವಿವರಗಳನ್ನು ಅಳಸಿರಬಹುದು ಎಂದು ಸಚಿನ್ ಸಹೋದರಿ ಹೇಳುತ್ತಾರೆ.

ಬೀದರ್: ಭಾಲ್ಕಿಯ ಗುತ್ತಿಗೆದಾರ ಸಚಿನ್ ಪಾಂಚಾಳ್ ಸಾವು ಪ್ರಕರಣ ಕೇಂದ್ರ ಸರ್ಕಾರದ ಅಂಗಳ ತಲುಪುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ. ಸಚಿನ್ ಗುತ್ತಿಗೆದಾರನೇ ಅಗಿರಲಿಲ್ಲ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ನಮ್ಮ ಬೀದರ್ ವರದಿಗಾರ ಸಚಿನ್ ಸಹೋದರಿಯೊಂದಿಗೆ ಮಾತಾಡಿದ್ದಾರೆ. ಅಣ್ಣ ಗುತ್ತಿಗೆದಾರನಾಗಿದ್ದ ಎಂದು ತಮ್ಮ ಕುಟುಂಬ ಯಾವತ್ತೂ ಹೇಳಿಲ್ಲ, ಅವನ ಕೆಲಸಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು ಕಲಬುರಗಿ ಕಚೇರಿಯಲ್ಲಿದ್ದವು ಅದರೆ ಅವುಗಳನ್ನು ನಾಶಪಡಿಸಲಾಗಿದೆ, ಈ ಸರ್ಕಾರ ಇವತ್ತು ಅವನು ಗುತ್ತಿಗೆದಾರ ಆಗಿರಲಿಲ್ಲ ಎನ್ನುತ್ತಿದೆ, ನಾಳೆ ಅವನು ಹುಟ್ಟೇ ಇರಲಿಲ್ಲ ಅಂತ ಹೇಳಿದರೂ ಆಶ್ಚರ್ಯವಿಲ್ಲ, ತಮ್ಮ ಕುಟುಂಬಕ್ಕೆ ಸರ್ಕಾರದ ಮೇಲೆ ನಂಬಿಕೆ ಇಲ್ಲ, ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವುದಾಗಿ ಅವರು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಸಚಿನ್ ಪ್ರಕರಣದಲ್ಲಿ ಎಲ್ಲೂ ಪ್ರಿಯಾಂಕ್ ಖರ್ಗೆ ಹೆಸರು ಉಲ್ಲೇಖವಾಗಿಲ್ಲ, ರಾಜೀನಾಮೆ ಯಾಕೆ ನೀಡಬೇಕು? ಸಿದ್ದರಾಮಯ್ಯ